ರಜನಿಕಾಂತ್ ಅಭಿನಂದನೆಗೆ ಸುದೀಪ್ ಪ್ರತಿಕ್ರಿಯೆ

<ul id="pagination-digg"><li class="previous"><a href="/news/kichcha-sudeep-speaks-bollywood-movies-067105.html">« Previous</a>

Sudeep
ಹೀಗೆ 'ಈಗ' ಚಿತ್ರದ ಮೂಲಕ ನಾನು ದಕ್ಷಿಣ ಭಾರತದ ತುಂಬಾ ಮನೆಮಾತಾಗುವಂತಾಯ್ತು. ತುಂಬಾ ಒಳ್ಳೆಯ ಕಥೆಯ ಮೂಲಕ ರಾಜಮೌಳಿ ಆಫರ್ ನೀಡಿದಾಗ ನಿಜವಾಗಿಯೂ ನನಗಾಗ ಕಥೆ ಮುಖ್ಯ ಅನ್ನಿಸಿರಲಿಲ್ಲ. ನನ್ನ ಆಯ್ಕೆ ವ್ಯಕ್ತಿಗತವಾಗಿತ್ತು. ಅದು ನಿರ್ದೇಶಕ ಎಸ್ ಎಸ್ ರಾಜಮೌಳಿಯವರಾಗಿತ್ತು. ಅದಾಗಲೇ ಬಾಲಿವುಡ್ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಜೊತೆ ನಾನು ಕೆಲಸ ಮಾಡಿದ್ದೆ.

ವರ್ಮಾ ಚಿತ್ರಗಳಲ್ಲಿ ನನ್ನ ನಟನೆ ನೋಡಿದ್ದ ರಾಜಮೌಳಿಯವರಿಗೆ ನನ್ನ ಮೇಲೆ ಭರವಸೆ ಬಂದು ನನಗೆ ಆಫರ್ ನೀಡಿದದ್ದರು. ಅದು ನನಗೆ ದೊರೆತ ಸೌಭಾಗ್ಯ. ನನ್ನ ಮೇಲೆ ಅವರಿಟ್ಟ ನಂಬಿಕೆಗೆ ನಾನು ಚಿರಋಣಿ. ಈಗ ಚಿತ್ರ ರಿಲೀಸ್ ಆದ ಮೇಲೆ ಏನೇನು ನಡೆದಿದೆ, ನಡೆಯುತ್ತಿದೆ ಎಂಬುದು ಎಲ್ಲರೂ ಸೂಕ್ಷವಾಗಿ ಗಮನಿಸುತ್ತಿದ್ದಾರೆ. ಎಲ್ಲವೂ ರಾಜಮೌಳಿಯ ಕೃಪೆ" ಎಂದಿದ್ದಾರೆ ಸುದೀಪ್.

"ನಾಯಕನಾಗಲಿ, ಖಳನಾಯಕನೇ ಆಗಲಿ...ಪ್ರೇಕ್ಷಕರು ಅದನ್ನು ಒಂದು ಒಂದು ಪಾತ್ರವಾಗಷ್ಟೇ ಗುರುತಿಸುತ್ತಾರೆ. ನಾನು ಯಾವ ಪಾತ್ರವನ್ನು ಮಾಡಬಹುದು ಮತ್ತು ಮಾಡಬಾರದು ಎಂಬುದನ್ನು ನಟ ಅರ್ಥ ಮಾಡಿಕೊಳ್ಳುವುದರಲ್ಲೇ ಆತನ ಬುದ್ಧಿವಂತಿಕೆ ಇದೆ. ನನಗಂತೂ ಮಾಡಿದ್ದನ್ನೇ ಮಾಡುತ್ತಾ ಇದ್ದರೆ ಬೋರ್ ಆಗುತ್ತದೆ. ಅಷ್ಟರಲ್ಲೇ ತೃಪ್ತನಾಗಿ ಇದ್ದುಬಿಡುವ ಪ್ರವೃತ್ತಿ ನನ್ನದಲ್ಲ. ನನಗೆ ವಿಭಿನ್ನ ಪಾತ್ರ ಮುಖ್ಯ. ಹೊಸತು ಎಲ್ಲಿ ಸಿಗುತ್ತದೆ ಎಂದು ಹುಡುಕುವ ನಾನು.

ಬಾಲಿವುಡ್ ನಲ್ಲಿ ನಂತರವೂ ಆಫರ್ ಸಿಕ್ಕವು. ಆದರೆ ಅಲ್ಲಿ ನಾನು ಮೂಲೆಗೆ ತಳ್ಳಲ್ಪಟ್ಟಂತೆ ನನಗೆ ಅನಿಸಿತು. ನನಗದು ಅನಿರೀಕ್ಷಿತ. ಬಾಲಿವುಡ್ ದೊಡ್ಡ ಸಾಗರ. ತುಂಬಾ ಗ್ಲಾಮರಸ್ ಉದ್ಯಮ. ಆದರೆ ದಕ್ಷಿಣ ಭಾರತೀಯರಾದ ನಮಗೆ ಅಲ್ಲಿ ಹೊಂದಿಕೊಳ್ಳುವುದು ತುಂಬಾ ಕಷ್ಟ. ನಮಗೆ ಸಿನಿಮಾಗಳೆಂದರೆ ಬರೀ ವ್ಯಾಪಾರವಲ್ಲ, ಭಾವನಾತ್ಮಕ ನಂಟು ಕೂಡ. ಹೀಗಾಗಿ ನನಗೆ ಮುಂಬೈ ನನ್ನ ಮನೆ ಎನಿಸಲಿಲ್ಲ. ನಾನು ದಕ್ಷಿಣ ಭಾರತ ಚಿತ್ರರಂಗಕ್ಕೆ ಸೇರಿದವನು ಎನಿಸಿತು.

ಈಗ ಚಿತ್ರದ ಮೂಲಕ ಇಡೀ ದಕ್ಷಿಣ ಭಾರತ ನನ್ನ ಪ್ರತಿಭೆ ಗುರುತಿಸಿದೆ. ಇಲ್ಲಿಯ ಅತಿರಥ ಮಹಾರಥರು ಈಗ ಚಿತ್ರದ ನನ್ನ ಅಭಿನಯ ಮೆಚ್ಚಿ ಬೆನ್ನುತಟ್ಟಿದ್ದಾರೆ. ಅದರಲ್ಲೂ ತೆಲುಗು ಮತ್ತು ತಮಿಳು ಚಿತ್ರರಂಗ ನನ್ನ ನಟನೆಯನ್ನು ಬಹಳ ಕೊಂಡಾಡಿದ್ದಾರೆ. ರಜನಿಕಾಂತ್ ಸರ್ ಫೋನ್ ಮಾಡಿ 15 ನಿಮಿಷ ಮಾತನಾಡಿ ಅಭಿನಂದಿಸಿದ್ದಾರೆ. ತೆಲಗಿನ ಇಡೀ ಚಿತ್ರಂಗವೇ ನನ್ನ ಬೆನ್ನುತಟ್ಟಿದೆ. ನಟನಾದವನಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು?

ಆದರೆ ನನಗೆ ಎಲ್ಲಕ್ಕೂ ಮುಖ್ಯ ಕನ್ನಡ ಚಿತ್ರಗಳೇ. ನಾನು ಈಗಾಗಲೇ ಒಪ್ಪಿಕೊಂಡಿರುವ ಕನ್ನಡ ಚಿತ್ರಗಳಾದ 'ವರದನಾಯಕ' ಹಾಗೂ ಬಚ್ಚನ್ ಚಿತ್ರಗಳ ಕೆಲಸ ಸಂಪೂರ್ಣವಾಗಿ ಮುಗಿದ ನಂತರವಷ್ಟೇ ಈಗ ಬಂದಿರುವ ಆಫರ್ ಬಗ್ಗೆ ಯೋಚಿಸುತ್ತೇನೆ. ಈಗಾಗಲೇ ದಕ್ಷಿಣ ಭಾರತದ ದೊಡ್ಡ ಬ್ಯಾನರ್ ನನ್ನನ್ನು ಸಂಪರ್ಕಿಸಿದೆ. ಆದರೆ ಅದರ ಬಗ್ಗೆ ಈಗಲೇ ಏನನ್ನೂ ನಿರ್ಧರಿಸಿಲ್ಲ. ಸಮಯ ಬಂದಾಗ ನಿರ್ಧರಿಸುತ್ತೇನೆ" ಎಂದಿದ್ದಾರೆ ಕಿಚ್ಚ ಸುದೀಪ್. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/kichcha-sudeep-speaks-bollywood-movies-067105.html">« Previous</a>

More from Filmibeat

English summary
Kichcha Sudeep told that even he acted in Bollywood movies, he didn't fee| that is his nest. He never thinks to settle there, as he felt the South India is his home. After the Grand Success of Telugu movie Eega, Sudeep became new South India Star and getting lots of chances. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X