ಒಂದು ಸಿಂಪಲ್ ಲೈನ್, ಸಿಂಪಲ್ ಹೋಲಿಕೆ, ಎದುರಾಳಿಗಳೆಲ್ಲಾ ಧ್ವಂಸ; ಸಲಾರ್‌ಗೆ ಸುದೀಪ್ ಜೈಕಾರ

ನಿನ್ನೆ ( ಜುಲೈ 6 ) ಭಾರತದ ಬಹು ನಿರೀಕ್ಷಿತ ಸಿನಿಮಾ‌ಗಳಲ್ಲಿ ಒಂದಾದ ಸಲಾರ್ ಚಿತ್ರದ ಟೀಸರ್ ಬಿಡುಗಡೆಗೊಂಡಿತು.‌

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕಾರಣ ಸಲಾರ್ ಟೀಸರ್ ಹೇಗಿರಲಿದೆ ಎಂದು ಸಿನಿ ರಸಿಕರು ಕಾತರರಾಗಿ ಕಾಯುತ್ತಿದ್ದರು. ಇನ್ನು ಬಾಹುಬಲಿ ಸರಣಿ ಬಳಿಕ ಬಂದ ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಚಿತ್ರಗಳು ಸಾಲು ಸಾಲಾಗಿ ಮಕಾಡೆ ಮಲಗಿದ ಕಾರಣ ಸಲಾರ್ ಮೇಲೆ ಸದ್ಯ ಎಲ್ಲರ ಕಣ್ಣು ಬಿದ್ದಿದೆ.

sudeep about salaar

ಹೌದು, ಪ್ರಭಾಸ್ ಅಭಿಮಾನಿಗಳು ಸಲಾರ್ ಮೇಲೆ ದೊಡ್ಡ ಮಟ್ಟದ ವಿಶ್ವಾಸ ಇಟ್ಟುಕೊಂಡಿದ್ದು, ಪ್ರಶಾಂತ್ ನೀಲ್ ಮೇಲೆ ಭಾರ ಹಾಕಿದ್ದಾರೆ. ಇನ್ನು ಕೆಜಿಎಫ್ ಚಿತ್ರ ಸರಣಿಯ ಬೃಹತ್ ಗೆಲುವಿನ ಬಳಿಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಹಾಗೂ ಮೊದಲ ಪರಾಭಾಷಾ ಪ್ರಾಜೆಕ್ಟ ಇದಾಗಿದ್ದು, ಚಿತ್ರ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ಇನ್ನು ಈ ಎಲ್ಲಾ ಪ್ರಶ್ನೆಗಳಿಗೆ ಟೀಸರ್ ಉತ್ತರ ನೀಡಲಿದೆ ಎಂಬ ಊಹೆ ಇತ್ತು. ಅದರಂತೆ ಚಿತ್ರತಂಡ ನಿನ್ನೆ ಟೀಸರ್ ಅನ್ನೂ ಸಹ ಬಿಡುಗಡೆಗೊಳಿಸಿದೆ. ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಲಾರ್ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಸೆಪ್ಟೆಂಬರ್ 28ರಂದು ಸಲಾರ್ ಬೆಳ್ಳಿಪರದೆಗೆ ಲಗ್ಗೆ ಇಡಲು ಸಲಾರ್ ತಯಾರಾಗಿದೆ. ಇನ್ನು ಚಿತ್ರದ ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರತಂಡ ಚಿತ್ರದ ಹೈಪ್ ಹೆಚ್ಚಿಸಲು ಟೀಸರ್ ಬಿಡುಗಡೆಗೊಳಿಸಿದೆ.

ಟೀಸರ್ ಬಿಡುಗಡೆಯಾದ ಬಳಿಕ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಟೀಸರ್ ಮೆಚ್ಚಿಕೊಂಡರೆ, ಇನ್ನೂ ಕೆಲ ಸಿನಿ ರಸಿಕರು ಚಿತ್ರದ ಟೀಸರ್ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ, ಕೆಜಿಎಫ್ ಡಿಲೀಟೆಡ್ ಸೀನ್‌ಗಳನ್ನು ಬಳಸಿ ಮಾಡಿದಂತಿದೆ, ಉಗ್ರಂ ಚಿತ್ರದ ರಿಮೇಕ್ ಎಂದೆಲ್ಲಾ ಕಾಮೆಂಟ್ ಮಾಡಿದರು.

ಹೀಗೆ ಸಲಾರ್ ಚಿತ್ರದ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಸ್ಟಾರ್‌ಗಳು ಸಲಾರ್ ಟೀಸರ್ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡು ಹಾಡಿ ಹೊಗಳಿದ್ದಾರೆ. ಸಲಾರ್ ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಕಿಚ್ಚ ಸುದೀಪ್ "ಒಂದು ಸರಳ ಲೈನ್, ಒಂದು ಸರಳ ಹೋಲಿಕೆ, ಎದುರಾಳಿ ಪಡೆಗಳನ್ನು ಧ್ವಂಸ ಮಾಡಿದೆ. ಎಂಥಹ ರಗಡ್ ಪಾತ್ರಕ್ಕೆ ಎಷ್ಟು ಅದ್ಭುತವಾದ ಇಂಟ್ರೊಡಕ್ಷನ್" ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಸಲಾರ್ ರೀತಿಯ ಮಾಸ್ ಪಾತ್ರವನ್ನು ಪರಿಚಯಿಸಲು ಸರಳ ಸಾಲಿನಲ್ಲಿ ಪ್ರಾಣಿಗಳ ಜತೆ ಹೋಲಿಸಿ ಬರೆದಿರುವ ಡೈಲಾಗ್‌ಗೆ ಕಿಚ್ಚ ಸುದೀಪ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಮಾಡಿರುವ ಈ ಟ್ವೀಟ್‌ಗೆ ಹೊಂಬಾಳೆ ಫಿಲ್ಮ್ಸ್ ಸದಸ್ಯರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಹೀಗೆ ಕಿಚ್ಚ ಸುದೀಪ್ ಹೊಗಳಿರುವ ಸಲಾರ್ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆಗಳು ಜನ ಸಾಮಾನ್ಯರಿಂದ ವ್ಯಕ್ತವಾದರೂ ಸಹ ಟೀಸರ್ ಮೊದಲ 24 ಗಂಟೆಗಳಲ್ಲಿ ದೇಶದ ಎಲ್ಲಾ ಚಿತ್ರಗಳ ಟೀಸರ್ ದಾಖಲೆಯನ್ನು ಮುರಿದು ಹಾಕಿದೆ. ಬಿಡುಗಡೆಗೊಂಡ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಭಾರತದ ಟೀಸರ್ ಎಂಬ ದಾಖಲೆಯನ್ನು ಸಲಾರ್ ಟೀಸರ್ ಬರೆದಿದೆ.

More from Filmibeat

English summary
Kichcha Sudeep watched and praised Salaar teaser. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X