ಹೆಗಲ ಮೇಲಿರುವ ಹಕ್ಕಿಯನ್ನು ಚೆನ್ನಾಗಿ ನೋಡಿಕೊಳ್ಳಿ

<ul id="pagination-digg"><li class="previous"><a href="/news/kichcha-sudeep-ss-rajamouli-telugu-eega-success-066515.html">« Previous</a>

'ಈಗ' ಚಿತ್ರವು ಅವರು ಅಭಿನಯಸಿರುವ ಎಲ್ಲಾ ಕನ್ನಡ ಚಿತ್ರಗಳ ನಟನೆಯ 'ಔಟ್ ಪುಟ್'. ಕನ್ನಡ ಚಿತ್ರಗಳಲ್ಲಿ ಇಷ್ಟು ವರ್ಷಗಳಿಂದ ನಟಿಸಿದರೂ ಮನ್ನಣೆ ಸಿಗಲಿಲ್ಲ. ಇದು ನನ್ನ ಕಂಪ್ಲೇಂಟ್ ಅಲ್ಲ. ಗುರುತಿಸಲಿಲ್ಲ ಎಂಬ ನೋವು ಅಷ್ಟೇ. ಆದರೂ ನಾನು ಕಾಯುತ್ತಿದ್ದೆ. ಸಾಕಷ್ಟು ತಾಳ್ಮೆ ವಹಿಸಿದೆ. ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ನನಗಿತ್ತು. ಅದು ಈಗ ಸಿಕ್ಕಿದೆ" ಎಂದಿದ್ದಾರೆ ಕಿಚ್ಚ ಸುದೀಪ್.

ಇಷ್ಟೆಲ್ಲಾ ಮಾತುಗಳನ್ನಾಡಿದರೂ ಸುದೀಪ್ ಕನ್ನಡ ಚಿತ್ರರಂಗದ ಬಗ್ಗೆ ದೂರಲಿಲ್ಲ, ಯಾರೊಬ್ಬರನ್ನೂ ಬೆಟ್ಟು ಮಾಡಿ ತೋರಿಸಲಿಲ್ಲ. ಆದರೆ ಅವರ ಮನಸ್ಸಿನಲ್ಲಿ 'ತಮ್ಮನ್ನು ಗುರುತಿಸಲಿಲ್ಲ' ಎಂಬ ನೋವು ಎದ್ದು ಕಾಣುತ್ತಿತ್ತು. ತೆಲುಗು, ತಮಿಳಿನಲ್ಲಿ ಕಿಚ್ಚ ಸುದೀಪ್ ಈಗ ದೊಡ್ಡ ಸ್ಟಾರ್. ಕನ್ನಡ ಬಿಟ್ಟರೂ ಅವರಿಗೀಗ ಬೇಕಾದಷ್ಟು ಅವಕಾಶ ಸಿಗುತ್ತದೆ. ಹಾಗಾದರೆ ಸುದೀಪ್ ಕನ್ನಡದಿಂದ ದೂರವಾಗಬಹುದೇ?

ಎಲ್ಲರ ಸಹಜವಾದ ಈ ಪ್ರಶ್ನೆಗೆ ಸುದೀಪ್ ಬಹಳ ಅರ್ಥಗರ್ಭಿತವಾಗಿ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ "ನಮ್ಮ ಹೆಗಲ ಮೇಲಿರುವ ಹಕ್ಕಿಯನ್ನು ಚೆನ್ನಾಗಿ ನೋಡಿಕೊಂಡರೆ ಅದು ಎಲ್ಲೂ ಹೋಗಲ್ಲ. ಇಲ್ಲಾಂದ್ರೆ ಯಾವತ್ತೋ ಒಂದು ದಿನ ಎಲ್ಲೋ ಹಾರಿ ಹೋಗುತ್ತೆ. ಹೊಟ್ಟೆ ಇಲ್ಲೂ ತುಂಬುತ್ತೆ. ಆದ್ರೆ ಒಳ್ಳೆಯ ಊಟ ಹಾಕಬೇಕು, ಅಷ್ಟೇ" ಎಂದಿದ್ದಾರೆ. ಸುದೀಪ್ ಈ ಮಾತನ್ನು ನಿಮ್ಮ ಶಕ್ತ್ಯಾನುಸಾರ ಅರ್ಥಮಾಡಿಕೊಳ್ಳಬೇಕಷ್ಟೇ.

ತಾವು ಕನ್ನಡ ಚಿತ್ರರಂಗದಿಂದ ದೂರ ಹೋಗುವುದಿಲ್ಲ ಎಂದು ಸುದೀಪ್ ಸಾಕಷ್ಟು ಸ್ಪಷ್ಟವಾಗಿಯೇ ಹೇಳಿದ್ದಾರೆ. "ಜನಪ್ರಿಯತೆ ಸಿಕ್ಕಿದ ಕೂಡಲೇ ತೆಲುಗು, ತಮಿಳಿಗೆ ಹೋಗಬೇಕೆಂದಿದ್ದರೆ ನಾನು ಇಂದು ಕನ್ನಡದ ಟಿವಿ ಚಾನೆಲ್ ಸ್ಟುಡಿಯೋದಲ್ಲಿ ಇರುತ್ತಿರಲಿಲ್ಲ. ಬೇರೆ ಭಾಷೆಯ ಚಾನೆಲ್ಲುಗಳಲ್ಲಿ ಬಿಜಿಯಾಗಿರುತ್ತಿದ್ದೆ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಇಷ್ಟು ಸಾಕಲ್ಲವೇ ಸುದೀಪ್ ಹಾಗೂ ಅವರ ಇಂದಿನ ಮಾತುಕಥೆ, ಮನಸ್ಥಿತಿಯ ಬಗ್ಗೆ.

ಆದರೆ ಸುದೀಪ್ ಬದಲಾಗಿಲ್ಲ, ಯಶಸ್ಸು ಅವರ ಪಿತ್ಥ ಕೆರಳಿಸಿಲ್ಲ. ಅದಕ್ಕೆ ಉದಾಹರಣೆಯಾಗಿ ಈ ಕೆಳಗಿನ ಮಾತುಗಳಿವೆ. "ನನ್ನ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ನಾನು ಈ ವೇಳೆ ನೆನಪಿಸಿಕೊಳ್ಳುತ್ತೇನೆ. ನನ್ನನ್ನು ಕನ್ನಡದಲ್ಲಿ ನಿರ್ದೇಶಿಸಿದ ಎಲ್ಲಾ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಮತ್ತು ನನ್ನ ಜತೆ ಕೆಲಸ ಮಾಡಿದ ಎಲ್ಲರಿಂದಾಗಿ ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ.

ನನ್ನಲ್ಲೂ ನೋವು-ನಿರಾಸೆಯ ದಿನಗಳಿದ್ದವು. ಆದರೆ ಯಾವತ್ತೂ ನನ್ನನ್ನು ಕನ್ನಡದ ಸಿನಿಅಭಿಮಾನಿಗಳು ಕೈಬಿಡಲಿಲ್ಲ. ಈಗಲೂ ಅಷ್ಟೇ, ಕನ್ನಡಿಗ ಎಂಬ ಕಾರಣಕ್ಕೇ ಬೇರೆ ಭಾಷೆಗಳಲ್ಲಿ ಬಂದ ಚಿತ್ರವನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಸುದೀಪ್ ಹೃದಯಾಂತರಾಳದಿಂದ ಹೇಳಿದ್ದಾರೆ. ಈಗ ಯಶಸ್ಸು ಸುದೀಪ್ ಅವರನ್ನು ಇನ್ನೂ ಅದೆಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ಉತ್ತರವೀಗ ಎಲ್ಲರಿಗೂ ಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/kichcha-sudeep-ss-rajamouli-telugu-eega-success-066515.html">« Previous</a>

More from Filmibeat

English summary
After the Grand opening and success of Kannada actor Kichcha Sudeep's screening Telugu movie 'Eega', Sudeep told his Internal Words. Now, Sudeep's Popularity is beyond the State and he is Super Star in All India Level. His present words are here to read. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X