ತೆಲುಗು ಚಿತ್ರದಲ್ಲಿ ಸುದೀಪ್ ಪುತ್ರಿ ಸಾನ್ವಿ; ಮುಂದಿನ ವಾರವೇ ಆ ಸಿನಿಮಾ ರಿಲೀಸ್

ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಚಿತ್ರರಂಗಕ್ಕೆ ಬರಬೇಕು ಎನ್ನುವುದು ಅಭಿಮಾನಿಗಳ ಆಸೆ. ಸಾನ್ವಿ ಈಗಾಗಲೇ ಹೈದರಾಬಾದ್ ಅನ್ನಪೂರ್ಣ ಆಕ್ಟಿಂಗ್ ಸ್ಕೂಲ್‌ನಲ್ಲಿ ನಟನೆ ಕಲಿತಿದ್ದಾರೆ. ನಟನೆ ಜೊತೆಗೆ ಗಾಯನದಲ್ಲಿ ಕೂಡ ಬಹಳ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಆಕೆಯ ಗಾಯನಕ್ಕೆ ತಂದೆಯೇ ದೊಡ್ಡ ಅಭಿಮಾನಿ.

ಸ್ಟಾರ್ ನಟ- ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರೋದು ಹೊಸದೇನು ಅಲ್ಲ. ಕನ್ನಡ ಚಿತ್ರರಂಗದಲ್ಲಿ ಕೂಡ ಚಿತ್ರರಂಗದ ಹಿನ್ನೆಲೆ ಇರುವ ಕುಟುಂಬದಿಂದ ಬಂದು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಅಕ್ಕನ ಮಗ ಸಂಚಿತ್ ಸಿನಿಜರ್ನಿ ಆರಂಭಿಸಿದ್ದಾರೆ. 'ಜಿಮ್ಮಿ' ಚಿತ್ರದ ಪಕ್ಕಕ್ಕಿಟ್ಟು 'ಮ್ಯಾಂಗೊ ಪಚ್ಚ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

Kichcha Sudeep s daughter Sanvi s humming in Telugu Hit-3 film trailer

ಸದ್ಯ ಸುದೀಪ್ ಪುತ್ರಿ ಸಾನ್ವಿ ತೆಲುಗು ಚಿತ್ರವೊಂದರಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಟಾಲಿವುಡ್ ನಟ ನಾನಿ ಮಾಹಿನಿ ನೀಡಿದ್ದಾರೆ. ಸಾನ್ವಿ ಹೀರೊಯಿನ್ ಆಗಿ ನಟಿಸುವ ಆಸೆ ಇಲ್ಲ ಎಂದು ಹೇಳಿದ್ದಾರೆ. ಸಾಕಷ್ಟು ಜನ ನನ್ನನ್ನು ನೋಡಿ ನೆಗೆಟಿವ್ ರೋಲ್‌ಗಳಲ್ಲಿ ನಟಿಸೋಕೆ ಹೇಳುತ್ತಾರೆ. ನೋಡೋಣ ಮುಂದೆ ಅಂತ ಅವಕಾಶಗಳು ಸಿಕ್ಕರೆ ನಟಿಸುತ್ತೇನೆ ಎಂದಿದ್ದಾರೆ. ಗಾಯನದ ವಿಚಾರಕ್ಕೆ ಬಂದರೆ ಈಗಾಗಲೇ ಸಾನ್ವಿ ಕೆಲ ಚಿತ್ರಗಳಿಗೆ ಹಾಡಲು ಆರಂಭಿಸಿದ್ದಾರೆ.

ಈ ಹಿಂದೆ ಬಂದಿದ್ದ 'ಜಿಮ್ಮಿ' ಚಿತ್ರದ ಟೀಸರ್‌ನಲ್ಲಿ ಸಾನ್ವಿ ಸುದೀಪ್ ಹಿನ್ನೆಲೆ ಗಾಯನ ಇತ್ತು. 'ದಬಾಂಗ್- 3' ಚಿತ್ರದ ಹಾಡೊಂದರ ಟ್ರ್ಯಾಕ್ ಕೂಡ ಹಾಡಿದ್ದರು. ಅದು ಸಲ್ಮಾನ್ ಖಾನ್ ಅವರಿಗೂ ಬಹಳ ಇಷ್ಟವಾಗಿತ್ತು. ಕೆಲ ಕಾರ್ಯಕ್ರಮಗಳಲ್ಲಿ ನನ್ನನ್ನು ಆ ಹಾಡು ಹಾಡಲು ಹೇಳುತ್ತಿದ್ದರು ಎಂದು ಸಾನ್ವಿ ಹೇಳಿಕೊಂಡಿದ್ದರು.

ನಾನಿ ನಟನೆಯ ತೆಲುಗಿನ ಆಕ್ಷನ್ ಥ್ರಿಲ್ಲರ್ 'ಹಿಟ್- 3' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಇದೇ ಚಿತ್ರಕ್ಕಾಗಿ ಸಾನ್ವಿ ಕೆಲಸ ಮಾಡಿದ್ದಾರೆ. ಆದರೆ ನಟಿಯಾಗಿ ಅಲ್ಲ. ಬದಲಿಗೆ ಹಿನ್ನೆಲೆ ಗಾಯಕಿಯಾಗಿದೆ. ಸಂದರ್ಶನವೊಂದರಲ್ಲಿ ಸ್ವತಃ ನಟ ನಾನಿ ಈ ವಿಚಾರ ರಿವೀಲ್ ಮಾಡಿದ್ದಾರೆ. ಜೊತೆಗೆ ಸುದೀಪ್ ಫ್ಯಾಮಿಲಿ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ರಾಜಮೌಳಿ ಚಿತ್ರದ 'ಈಗ' ಚಿತ್ರದಲ್ಲಿ ಸುದೀಪ್ ಹಾಗೂ ನಾನಿ ಒಟ್ಟಿಗೆ ನಟಿಸಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಸದ್ಯ 'ಹಿಟ್- 3' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಗಾಗಿ ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರದಲ್ಲಿ ನಾನಿ ತೊಡಗಿಸಿಕೊಂಡಿದ್ದಾರೆ. ಸುದೀಪ್ 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣಕ್ಕೆ ತೆರಳುವ ಮುನ್ನ ಅವರನ್ನು ಭೇಟಿ ಮಾಡಿದ್ದಾಗಿಯೂ ಹೇಳಿದ್ದಾರೆ.

'ಹಿಟ್- 3' ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಸಿಕ್ಕಾಪಟ್ಟೆ ವೈಲೆನ್ಸ್ ಇರುವ ಸಿನಿಮಾ ಮಾಸ್ ಪ್ರೇಕ್ಷಕರನ್ನು ರಂಜಿಸುವ ಸುಳಿವು ಸಿಕ್ತಿದೆ. ಅಂದಹಾಗೆ ಟ್ರೈಲರ್‌ನಲ್ಲಿ ಸಿನಿಮಾ ಟೈಟಲ್ ಬರುವಾಗ ಹಿನ್ನೆಲೆಯಲ್ಲಿ ಒಂದು ಹುಡುಗಿ ಹಾಡಿರುವುದು ಕೇಳಿಸುತ್ತದೆ. ಅದನ್ನು ಹಾಡಿರುವುದು ಸಾನ್ವಿ ಸುದೀಪ್ ಎಂದು ನಟ ನಾನಿ ವಿವರಿಸಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಮಿಂಚಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ಕೂಡ ನಾನಿ ಹಾಗೂ ಶ್ರೀನಿಧಿ 'ಹಿಟ್- 3' ಸಿನಿಮಾ ಪ್ರಚಾರ ಮಾಡಿದ್ದರು. 5 ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬರಲಿದೆ. ಶೈಲೇಶ್ ಕೊಲನು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಿಕ್ಕಿ ಜೆ ಮೇಯರ್ ಸಂಗೀತ ಚಿತ್ರಕ್ಕಿದೆ. 'ಹಿಟ್' ಸರಣಿಯ ಹಿಂದಿನ 2 ಚಿತ್ರಗಳು ಗೆದ್ದಿತ್ತು. ಹಾಗಾಗಿ 3ನೇ ಭಾಗದ ಬಗ್ಗೆ ಹೈಪ್ ಹೆಚ್ಚಾಗಿದೆ.

More from Filmibeat

English summary
Sanvi Sudeep worked in Telugu Movie, Telugu Actor Nani revealed secret;
Read more about: sudeep nani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X