ಯಶ್ ಕೆಜಿಎಫ್ ಹಾಡಿನ ಬೆನ್ನಲ್ಲೆ ಪುಷ್ಪ ಡೈಲಾಗ್ ಹೊಡೆದ ಕಿಲಿ ಪೌಲ್! ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾದ ಕಿಲಿ ಪೌಲ್ ಮತ್ತು ಆತನ ಸಹೋದರಿ ನೀಮಾ ಪೌಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದ್ದಾರೆ. ಪ್ರಖ್ಯಾತ ಹಾಡುಗಳಿಗೆ ರೀಲ್ಸ್ ಮಾಡಿ ಅವುಗಳನ್ನು ಹರಿಬಿಟ್ಟು ಜನಮನ್ನಣೆ ಪಡೆದುಕೊಳ್ಳುತ್ತಿದ್ದಾರೆ.

ಕೇವಲ ಆಫ್ರಿಕಾದ ಹಾಡುಗಳನ್ನು ಹೊರತಾಗಿಯೂ ಹೆಚ್ಚು ಬಾಲಿವುಡ್ ಫೇಮಸ್ ಹಾಡುಗಳಿಗೆ ಅಭಿನಯಿಸೋದು, ರೀಲ್ಸ್ ಮಾಡೋದು ಮಾಡುತ್ತಾರೆ ಕಿಲಿ ಪೌಲ್ ಮತ್ತು ಸಹೋದರಿ ನೀಮಾ. ಬಾಲಿವುಡ್ ಹಾಡುಗಳಿಗೆ ರೀಲ್ಸ್ ಮಾಡಲು ಆರಂಭ ವಾದಾಗಿನಿಂದ ಇವರಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಮಾಡಲು ಆರಂಭಿಸಿದ್ದಾರೆ.

ಎಷ್ಟರ ಮಟ್ಟಿಗೆ ಅಂದರೇ ಇವರು ಮಾಡುವ ರೀಲ್ಸ್‌ಗಳಿಗೆ ಸಂಬಂಧ ಪಟ್ಟ ಸ್ಟಾರ್ ನಟ ನಟಿಯರು ಕೂಡ ಕಮೆಂಟ್ ಮಾಡುತ್ತಾರೆ. ಜೊತೆಗೆ ಆ ರೀಲ್ಸ್ ಅನ್ನು ತಮ್ಮ ವಾಲ್‌ಗಳಲ್ಲಿ ಶೇರ್ ಮಾಡಿಕೊಳ್ಳುವಷ್ಟರ ಮಟ್ಟಿಗೆ ಪ್ರಖ್ಯಾತಿ ಇವರಿಗಿದೆ. ಸದ್ಯ ಕಿಲಿ ಪೌಲ್ ಯಶ್ ಅವರ ಕೆಜಿಎಫ್ ಚಾಪ್ಟರ್ 1 ರ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಕಿಲಿ ಮಾಡಿರೋ ಪುಷ್ಟ ಚಿತ್ರದ ಹಾಡುಗಳು ಫುಲ್ ವೈರಲ್

ಕಿಲಿ ಪೌಲ್ ಈ ಹಿಂದೆ ಪುಷ್ಪ ಚಿತ್ರದ ಹಾಡುಗಳಿಗೆ ರೀಲ್ಸ್ ಮಾಡಿರೋದು ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಸಾಕಷ್ಟು ಮಂದಿ ಅದನ್ನು ಶೇರ್ ಕೂಡ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಈಗ ಪುಷ್ಪ ಹಿಂದಿ ವರ್ಷನ್‌ನ "ತಗ್ಗೆದೆಲೆ" ಡೈಲಾಗ್ ಅನ್ನು ಹೇಳಿ ಭಾರೀ ಮೆಚ್ಚುಗೆಗೆ ಕಾರಣವಾಗಿದ್ದಾರೆ. ಈ ವಿಡಿಯೋವನ್ನು ಹಲವರು ಶೇರ್ ಮಾಡಿದ್ದು, ಕಿಲಿ ಪೌಲ್ ವೀಡಿಯೋ ನೋಡಿ ಖುಷಿ ಪಡುತ್ತಿದ್ದಾರೆ. ಇನ್ನು ಕಿಲಿ ಪೌಲ್ ಈ ವೀಡಿಯೊಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಟ್ಯಾಗ್ ಕೂಡ ಮಾಡಿದ್ದಾರೆ. ಬರೋಬ್ಬರಿ ೨ಲಕ್ಷ ಮಂದಿ ಈ ವಿಡಿಯೊಗೆ ಲೈಕ್ ಮಾಡಿದ್ದಾರೆ.

ಪುಷ್ಪ ಚಿತ್ರದ ಹಾಡುಗಳು ಅಂದ್ರೆ ತುಂಬಾ ಇಷ್ಟವಂತೆ.

ಕೆಲ ದಿನಗಳ ಹಿಂದೆ ಕಿಲಿ ಪೌಲ್ ಇತ್ತೀಚೆಗಷ್ಟೆ ರಿಲೀಸ್ ಆಗಿ ಉತ್ತಮ ಪ್ರಶಂಸೆ ಮತ್ತು ಕಲೆಕ್ಷಷನ್‌ನಲ್ಲೂ ಮೋಡಿ ಮಾಡಿದ ಪುಷ್ಪ ಚಿತ್ರದ ಹಾಡಿಗೂ ಕಿಲಿ ಪೌಲ್ ರೀಲ್ಸ್ ಮಾಡಿದ್ದಾರೆ. ಪುಷ್ಟ ಚಿತ್ರದ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್‌ನಲ್ಲಿ ಬಂದ ಸಾಮಿ ಸಾಮಿ ಹಾಡಿಗೆ ಕುಣಿದಿರುವ ಕಿಲಿ ಪೌಲ್ "ಸಾಮಿ ಸಾಮಿ ಹಾಡು ಇಂಡಿಯಾದಲ್ಲಿ ಅದ್ಭತ ಹಾಡು, ನನಗೆ ಇದು ತುಂಬ ಇಷ್ಟ ಆಗಿದೆ" ಎಂದು ಬರೆದುಕೊಂಡಿದ್ದರು. ಕಿಲಿ ಪೌಲ್ ಅವರ ಈ ರೀಲ್ಸ್ ಅನ್ನು ಸ್ವತಃ ರಶ್ಮಿಕಾ ತಮ್ಮ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು "ಎಷ್ಟು ಕ್ಯೂಟ್ ಆಗಿದೆ ಇದು" ಎಂದು ಬರೆದುಕೊಂಡಿದ್ದಾರೆ. ಜೊತೆಗೊಂದು ಹಾರ್ಟ್ ಇಮೋಜಿಯನ್ನು ಬಳಸಿದ್ದರು.

ಹರಿದುಬಂತು ಕಮೆಂಟ್‌ಗಳ ಸುರಿಮಳೆ !

ಪುಷ್ಟ ಚಿತ್ರದ ಸಾಮಿ ಸಾಮಿ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕ ನಂತರ ಕಿಲಿ ಪೌಲ್ ಅಲ್ಲು ಅರ್ಜುನ್‌ ಅವರ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ ಕೂಡ ರಿ ಕ್ರೀಯೇಟ್ ಮಾಡಿದ್ದಾರೆ. ಪಕ್ಕಾ ಅಲ್ಲು ಅರ್ಜುನ್ ಮಾದರಿಯಲ್ಲೆ ಹೆಜ್ಜೆ ಹಾಕಿದ್ದ ಕೀಲಿ ಪೌಲ್‌ರ ಈ ರೀಲ್ಸ್ ನೋಡಿ ಅದೆಷ್ಟೋ ಮಂದಿ ಕಮೆಂಟ್ ಮಾಡಿ ಕಿಲಿ ಪೌಲ್‌ಗೆ ಹುರಿದುಂಬಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಕಿಲಿ ಪೌಲ್ ಊ ಅಂಟಾವ ಊ ಹು ಅಂಟಾವ ತೆಲುಗು ಹಾಡಿಗೂ ಡ್ಯಾನ್ಸ್ ಮಾಡಿದ್ದು, ಈ ವೀಡಿಯೋ ಸುಮಾರು 10 ಲಕ್ಷಕ್ಕು ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 5 ಸಾವಿರಕ್ಕು ಹೆಚ್ಚು ಮಂದಿ ಕಮೆಂಟ್ ಕೂಡ ಮಾಡಿದ್ದಾರೆ. ಹೀಗೆ ಸಾಲು ಸಾಲು ಪುಷ್ಪ ಹಾಡಿಗೆ ರೀಲ್ಸ್ ಮಾಡಿ ಜನರ ಮೆಚ್ಚುಗೆ ಪಡೆದಿರುವ ಕಿಲಿ ಪೌಲ್ ಮತ್ತಷ್ಟು ವೀಡಿಯೋಗಳನ್ನು ಮಾಡುವ ಉತ್ಸಾಹದಲ್ಲಿ ಇದ್ದಾರೆ.

ಕಿಲಿಪೌಲ್ ಡ್ಯಾನ್ಸಿಗೆ ಯಶ್ ಫ್ಯಾನ್ಸ್ ಫಿದಾ

ಕಿಲಿ ಪೌಲ್ ಸಾಕಷ್ಟು ಬಾಲಿವುಡ್ ಸೇರಿದಂತೆ, ತಮಿಳು, ತೆಲುಗು ಹಾಡುಗಳಿಗೂ ಆಗಾಗ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ. ಹೆಚ್ಚಾಗಿ ಹಿಂದಿ ಹಾಡುಗಳಿಗೆ ವೀಡಿಯೋ ಮಾಡುವ ಇವರು ಇತ್ತೀಚೆಗೆ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1ರ ಗಲೀ ಗಲೀಮೆ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇದು ನೋಡುಗರಿಗೆ ಹಿಡಿಸಿದ್ದು, ಯಶ್ ಅಭಿಮಾನಿಗಳು ಇದನ್ನು ಹೆಚ್ಚೆಚ್ಚು ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಕಿಲಿ ಪೌಲ್‌ರ ಈ ನೃತ್ಯಕ್ಕೆ ಒಳ್ಳೆ ಮೆಚ್ಚುಗೆ ಕೂಡ ಸಿಗುತ್ತಿದೆ."ಯಶ್​ ಮತ್ತು ಶ್ರೀನಿಧಿ ಶೆಟ್ಟಿ ನಟನೆಯ 'ಕೆಜಿಎಫ್'​ ಒಂದು ಬ್ಲಾಕ್​ ಬಸ್ಟರ್​ ಸಿನಿಮಾ. ಈ ಮಾಸ್ಟರ್​ ಪೀಸ್​ ನನಗೆ ತುಂಬ ಇಷ್ಟ. ಈ ಮಾಸ್ಟರ್​ ಪೀಸ್​ ನನಗೆ ತುಂಬ ಇಷ್ಟ" ಎಂದು ಕಿಲಿ ಪೌಲ್​ ಬರೆದುಕೊಂಡಿದ್ದಾರೆ. ಕಿಲಿ ಪೌಲ್ ಮಾಡಿರುವ ಈ ವೀಡಿಯೋ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ವೀವ್ಸ್ ಕೂಡ ಪಡೆದುಕೊಂಡಿದೆ.

ತಮ್ಮ ಸಂಪ್ರದಾಯದ ಉಡುಪು ತೊಟ್ಟು ಮಾಡ್ತಾರೆ ಡ್ಯಾನ್ಸ್!

2021ರ ನವಂಬರ್‌ನಲ್ಲಿ ಕಿಲಿ ಪೌಲ್ ಶೇರ್‌ ಷಾ ಚಿತ್ರದ ಜುಬಿನ್‌ ನೌಟಿಯಾಲ್‌ ಹಾಗೂ ಆಸೀಸ್‌ ಕೌರ್‌ ಅವರು ಹಾಡಿದ ರತನ್‌ ಲಂಬಿಯಾನ್‌ ಹಾಡಿಗೆ ಹೆಜ್ಜೆ ಹಾಕಿದ್ದರು.ಇದಾದ ನಂತರ ಭಾರತದಲ್ಲಿ ಹೆಚ್ಚು ಮಂದಿ ಇವರನ್ನು ಗುರುತಿಸಿವಂತೆ ಆಯಿತು. ಹಾಗೇ ಡಾನ್ಸ್‌ ಮಾಡುವ ವೇಳೆ ಆಫ್ರಿಕಾದ ತಾಂಜಾನಿಯಾದ ಸಾಂಪ್ರದಾಯಿಕ ಮಸಾಯಿ ಉಡುಪುಗಳನ್ನೇ ಕಿಲಿ ಪೌಲ್‌ ಮತ್ತು ಸಹೋದರಿ ನೀಮಾ ಪೌಲ್ ಧರಿಸುತ್ತಾರೆ. ಅಲ್ಲದೇ ನೃತ್ಯ ಅಥವಾ ನಟನೆ ಯಾವುದೇ ಇರಲಿ ತುಂಬಾ ಭಾವನಾತ್ಮಕವಾಗಿ ಅವರು ನಟಿಸೋದರಿಂದ ಜನರಿಗೂ ಕೂಡ ತುಂಬ ಹತ್ತಿರವಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಸಿನಿಮಾದಲ್ಲಿ ಕಾಣಿಸಿಕೊಂಡರು ಅಚ್ಚರಿ ಏನಿಲ್ಲ.

More from Filmibeat

English summary
African content creator Kili Paul dances to Pushpa movie song: video is become viral on social media
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X