"ನಿನ್ನನ್ನು ನೋಡಿದ್ರೆ ಹೆಮ್ಮೆ ಎನಿಸುತ್ತೆ"; ದೇವರಕೊಂಡ ಬಗ್ಗೆ ರಶ್ಮಿಕಾ ಮೆಚ್ಚುಗೆ

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆತ್ಮೀಯ ಸ್ನೇಹಿತರು. ಅದ್ಯಾವ ಮಟ್ಟಿಗೆ ಅಂದರೆ ಸ್ನೇಹಿತರು, ಫ್ಯಾಮಿಲಿ ಜೊತೆ ದೇಶ ವಿದೇಶ ಸುತ್ತುವುದು, ಒಟ್ಟಿಗೆ ಸೇರಿ ಪಾರ್ಟಿ ಮಾಡುವಷ್ಟು. ದೇವರಕೊಂಡ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ರಶ್ಮಿಕಾ ಮಂದಣ್ಣ ಭಾಗಿ ಆಗವಷ್ಟು.

ವಿಜಯ್- ರಶ್ಮಿಕಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಚರ್ಚೆ ಬಹಳ ದಿನಗಳಿಂದ ಕೇಳಿಬರ್ತಿದೆ. 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಲಿಪ್‌ ಲಾಕ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದರು. ಇವರಿಬ್ಬರನ್ನು ಮತ್ತೆ ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೋ ಇಲ್ವೋ? ಒಳ್ಳೆ ಸ್ನೇಹಿತರು ಎನ್ನುವುದು ನಿಜ.

Kingdom Teaser Rashmika Mandanna praises Vijay Devarakonda s dedication

ರಶ್ಮಿಕಾ ಮಂದಣ್ಣ ಟಾಲಿವುಡ್, ಕಾಲಿವುಡ್ ಬಳಿಕ ಬಾಲಿವುಡ್‌ ಅಂಗಳದಲ್ಲಿ ಮಿಂಚುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ನಟಿಸಿರುವ ಐತಿಹಾಸಿಕ ಕಥಾಹಂದರದ 'ಛಾವ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಸಲ್ಮಾನ್ ಖಾನ್, ಧನುಷ್ ರೀತಿಯ ಸ್ಟಾರ್ ನಟರ ಸಿನಿಮಾಗಳಲ್ಲಿ ಈಗ ಬಣ್ಣ ಹಚ್ಚಿದ್ದಾರೆ. ಮತ್ತೊಂದು ಕಡೆ ವಿಜಯ್ ದೇವರಕೊಂಡ ಸೋಲಿನ ಸುಳಿಗೆ ಸಿಲುಕಿದ್ದಾರೆ. ದಿಢೀರ್ ಕ್ರೇಜ್ ಸೃಷ್ಟಿಸಿಕೊಂಡಿದ್ದ ನಟ ಅಷ್ಟೇ ಬೇಗ ಸೈಲೆಂಟ್ ಆಗಿಬಿಟ್ಟಿದ್ದರು. 'ಲೈಗರ್' ಸಿನಿಮಾ ಸೋಲು ಇನ್ನು ಕಾಡುತ್ತಲೇ ಇದೆ.

ಸದ್ಯ ವಿಜಯ್ ದೇವರಕೊಂಡ ನಟನೆಯ 'ಕಿಂಗ್‌ಡಮ್' ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಇದನ್ನು ನೋಡಿ ರಶ್ಮಿಕಾ ಮಂದಣ್ಣ ಮೆಚ್ಚಿ ಕಾಮೆಂಟ್ ಮಡಿದ್ದಾರೆ. ಚಿತ್ರಕ್ಕೆ ಗೌತಮ್ ತಿನ್ನನೂರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮತ್ತೊಮ್ಮೆ ರಗಡ್ ಲುಕ್‌ನಲ್ಲಿ ದೇವರಕೊಂಡ ದರ್ಶನ ಕೊಟ್ಟಿದ್ದಾರೆ. ಜ್ಯೂ. ಎನ್‌ಟಿಆರ್ ಖಡಕ್ ವಾಯ್ಸ್‌ ಓವರ್ ಹಿನ್ನೆಲೆಯಲ್ಲಿ 'ಕಿಂಗ್‌ಡಮ್' ಅನ್ನು ಪರಿಚಯಿಸಲಾಗಿದೆ. ಹೈವೋಲ್ಟೇಜ್ ಆಕ್ಷನ್ ಹಾಗೂ ಭಾವೋದ್ವೇಗದ ಸನ್ನಿವೇಶಗಳನ್ನು ಟೀಸರ್‌ನಲ್ಲಿ ನೋಡಬಹುದು.

Kingdom Teaser Rashmika Mandanna praises Vijay Devarakonda s dedication

ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ. ಯುದ್ಧದಿಂದ ನಲುಗಿದ ಸಮುದಾಯ. ಎಲ್ಲೆಲ್ಲೂ ಬೆಂಕಿಯ ಜ್ವಾಲೆ. ಹೆಣದ ರಾಶಿ. ಭಾರೀ ಹಿಂಸಾಚಾರ ನಡುವೆ ಅಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಮುಂದಾದ ಧೈರ್ಯಶಾಲಿ ಪೊಲೀಸ್ ಅಧಿಕಾರಿ ಎಂಟ್ರಿ ಕೊಡುವಂತೆ 'ಕಿಂಗ್‌ಡಮ್' ಟೀಸರ್ ಕಟ್ಟಿಕೊಡಲಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಮೇ 20ರಂದು ಸಿನಿಮಾ ವಿಶ್ವದಾದ್ಯಂತೆ ಬಿಡುಗಡೆ ಆಗಲಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಅಭಿಮಾನಿಗಳು, ಸಿನಿಮಾ ತಾರೆಯರು ಕೂಡ 'ಕಿಂಗ್‌ಡಮ್' ಟೀಸರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. "ವಿಜಯ್ ದೇವರಕೊಂಡ ಪ್ರತಿ ಬಾರಿ ಏನಾದರೂ ಮೆಂಟಲ್ ಹಿಡಿಸುವಂತಹ ಅದ್ಭುತದೊಂದಿಗೆ ನಮ್ಮ ಮುಂದೆ ಬರ್ತಿರ್ತಾನೆ. ಬಹಳ ಹೆಮ್ಮೆ ಎನಿಸುತ್ತದೆ" ಎಂದು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇನ್ನು 'ಋಷಿ' ಎಂದು ಬರೆದುಕೊಂಡಿದ್ದು ಇದು ದೇವರಕೊಂಡಗೆ ರಶ್ಮಿಕಾ ಇಟ್ಟಿರುವ ನಿಕ್‌ನೇಮ್ ಎನ್ನುವ ಊಹಾಪೋಹ ಶುರುವಾಗಿದೆ.

ಅನಿರುದ್ದ್ ರವಿಚಂದರ್ ಸಂಗೀತ 'ಕಿಂಗ್‌ಡಮ್' ಚಿತ್ರಕ್ಕಿದೆ. ದೇವರಕೊಂಡ ಬಿಟ್ಟರೆ ಚಿತ್ರದಲ್ಲಿ ಬೇರೆ ಯಾರೆಲ್ಲಾ ನಟಿಸಿದ್ದಾರೆ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಭುದೇವ, ಸುನಿಲ್ ಶೆಟ್ಟಿ, ಗುರು ಸೋಮಸುಂದರಂ ಕೂಡ ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಇದು ವಿಜಯ್ ನಟನೆಯ 12ನೇ ಸಿನಿಮಾ. 'VD12' ಎನ್ನುವ ವರ್ಕಿಂಗ್ ಟೈಟಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈಗ ಟೈಟಲ್ ಸಮೇತ ಟೀಸರ್ ರಿಲೀಸ್ ಆಗಿದೆ.

ಸಿತಾರ ಎಂಟರ್ಟೈನ್ಮೆಂಟ್, ಶ್ರೀಕರ ಸ್ಟುಡಿಯೋಸ್, ಫಾರ್ಚೂನ್ ಫೋರ್ ಕ್ರಿಯೇಷನ್ಸ್ ಸಂಸ್ಥೆಗಳು ಸೇರಿ 'ಕಿಂಗ್‌ಡಮ್' ಸಿನಿಮಾ ನಿರ್ಮಾಣ ಮಾಡುತ್ತಿವೆ. ಸತತ ಸೋಲಿನಿಂದ ಕಂಗೆಟ್ಟ ದೇವರಕೊಂಡ ಈ ಬಾರಿ ಗೆದ್ದು ಬರುವ ಹಠಕ್ಕೆ ಬಿದ್ದಿದ್ದಾರೆ.

More from Filmibeat

English summary
Rashmika Mandanna applauds Vijay Devarakonda's dedication in the Kingdom movie;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X