'ಕಿಸ್ಸಿಕ್' ಎಂದು ಕುಣಿದು ಸೈಲೆಂಟ್ ಆಗಿಬಿಟ್ಟ ಶ್ರೀಲೀಲಾ? ಕಾರಣವೇನು?
ಬೆಂಗಳೂರು ಬೆಡಗಿ ಶ್ರೀಲೀಲಾ ಕನಸು ನನಸಾಗಲಿಲ್ಲ. ಭಾರೀ ನಿರೀಕ್ಷೆ ಇಟ್ಟುಕೊಂಡು ಮಾಡಿದ 'ಕಿಸ್ಸಿಕ್' ಸಾಂಗ್ ಕೈ ಹಿಡಿದಂತೆ ಕಾಣುತ್ತಿಲ್ಲ. ಬೇರೆ ಸಿನಿಮಾಗಳಲ್ಲಿ ಐಟಂ ಸಾಂಗ್‌ಗೆ ಕುಣಿಯಲು ಹಿಂದೇಟು ಹಾಕಿದ್ದ 'ಕಿಸ್' ಬೆಡಗಿ ಈ ಚಿತ್ರಕ್ಕೆ ಸೈ ಎಂದಿದ್ದರು.
ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶ್ರೀಲೀಲಾ ಸದ್ಯಕ್ಕೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲ್ಲ ಎಂದಿದ್ದರು. ನಟಿಯಾಗಿ ಒಳ್ಳೆ ಅವಕಾಶಗಳು ಸಿಗುವಾಗ ಸ್ಪೆಷಲ್ ಸಾಂಗ್ ಯಾಕೆ ಎಂದಿದ್ದರು. ಸೀನ್ ಕಟ್ ಮಾಡಿದ್ರೆ ತಿಂಗಳ ಹಿಂದೆ 'ಪುಷ್ಪ'-2 ಚಿತ್ರದ 'ಕಿಸ್ಸಿಕ್' ಸಾಂಗ್‌ನಲ್ಲಿ ಕುಣಿಯಲು ಸೈ ಎಂದಿದ್ದರು.

'ಪುಷ್ಪ' ಚಿತ್ರದ 'ಊ ಅಂಟಾವ' ಸಾಂಗ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಹಾಡಿನಲ್ಲಿ ಸಮಂತಾ ಬಿಂದಾಸ್ ಆಗಿ ಕುಣಿದು ರಂಗೇರಿಸಿದ್ದರು. ಚಿತ್ರದ ಸಕ್ಸಸ್‌ಗೆ ಈ ಸಾಂಗ್ ಕ್ರೆಡಿಟ್ ಸಹ ಇದೆ. ಕೋಟಿ ಕೋಟಿ ವೀವ್ಸ್ ಸಾಧಿಸಿ ಸಾಂಗ್ ಹಿಟ್ ಆಗಿತ್ತು. ಕನ್ನಡ ವರ್ಷನ್ ಕೂಡ ಕೇಳುಗಮ ಮನಗೆದ್ದಿತ್ತು. 'ಕಿಸ್ಸಿಕ್' ಸಾಂಗ್ ಆ ಮ್ಯಾಜಿಕ್ ಮಾಡಲಿಲ್ಲ.
'ಪುಷ್ಪ'-2 ಚಿತ್ರದಲ್ಲಿ ಸ್ಪೆಷಲ್ ಸಾಂಗ್ ಇದೇ ಅಂದಾಗಲೇ ನಿರೀಕ್ಷೆ ಹೆಚ್ಚಾಗಿತ್ತು. ಯಾವ ರೀತಿಯ ಸಾಂಗ್? ಯಾರು ಡ್ಯಾನ್ಸ್ ಮಾಡ್ತಾರೆ? ಎನ್ನುವ ಪ್ರಶ್ನೆ ಎದ್ದಿತ್ತು. ಬಾಲಿವುಡ್ ಬೆಡಗಿಯರ ಹೆಸರು ಕೇಳಿ ಬಂದಿತ್ತು. ಆದರೆ ಎಲ್ಲರನ್ನು ಬಿಟ್ಟು ಕೊನೆಗೆ ಶ್ರೀಲೀಲಾ ಅದಕ್ಕೆ ಒಪ್ಪಿ ಕುಣಿದರು. ಮೊದಲಿಗೆ ಕೇಳಿದಾಗ ಸಾಂಗ್ ಓಕೆ ಓಕೆ ಅನ್ನಿಸಿತ್ತು. ಬಳಿಕ ಇಷ್ಟವಾಗಿತ್ತು. ಆದರೂ ದೊಡ್ಡ ಇಂಪ್ಯಾಕ್ಟ್ ಕ್ರಿಯೇಟ್ ಮಾಡಲಿಲ್ಲ.
ದೇವಿಶ್ರೀ ಪ್ರಸಾದ್ ಸಂಗೀತದ ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದಾರೆ. ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಪೋಣಿಸಿದ್ದಾರೆ. ಸುಬಲಾಶಿನಿ ವಾಯ್ಸ್‌ನಲ್ಲಿ 'ಕಿಸ್ಸಿಕ್' ಸಾಂಗ್ ಕಿಕ್ ಕೊಡುವಂತಿದೆ. ಗಣೇಶ್ ಆಚಾರ್ಯ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.
ಇದು ದೊಡ್ಡ ಸರ್ಪ್ರೈಸ್, ನಾನು ಯಾಕೆ ಈ ಹಾಡಿಗೆ ಹೆಜ್ಜೆ ಹಾಕಲು ಒಪ್ಪಿದೆ ಎನ್ನುವುದು ಸಿನಿಮಾ ನೋಡಿದಾಗ ನಿಮಗೆ ಅರ್ಥವಾಗುತ್ತದೆ ಎಂದು ಶ್ರೀಲೀಲಾ ಹೇಳಿದ್ದರು. ಸಿನಿಮಾ ಬಂದು 3 ದಿನ ಕಳೆದಿದೆ. ಆದರೆ ಸಿನಿಮಾ ರಿಲೀಸ್ ಬಳಿಕ ಆಕೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಯಾರೂ ಕೂಡ ಆಕೆಯ ಡ್ಯಾನ್ಸ್ ಬಗ್ಗೆ ಮಾತನಾಡುತ್ತಿಲ್ಲ.
'ಪುಷ್ಪ'-2 ಚಿತ್ರದ 'ಪೀಲಿಂಗ್ಸ್' ಸಾಂಗ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತ್ತು. ಅಲ್ಲು ಅರ್ಜುನ್, ರಶ್ಮಿಕಾ ಬಿಂದಾಸ್ ಡ್ಯಾನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಟ್ಯೂನ್ ಕೂಡ ಸಖತ್ ಕ್ಯಾಚಿಯಾಗಿದೆ. 'ಪೀಲಿಂಗ್ಸ್' ಸಾಂಗ್ ಹಿಟ್ ಆಗಿ 'ಕಿಸ್ಸಿಕ್' ಸಾಂಗ್ ಕ್ರೇಜ್ ಕಮ್ಮಿ ಆಗಿದ್ದು ಸುಳ್ಳಲ್ಲ.
ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಸಮಂತಾ ಕುಣಿದ 'ಊ ಅಂಟಾವಾ' ಸಾಂಗ್ ಮುಂದೆ ಶ್ರೀಲೀಲಾ 'ಕಿಸ್ಸಿಕ್' ಸಾಂಗ್ ಡಲ್ಲಾಗಿದೆ. ಶ್ರೀಲೀಲಾ ನಟಿಸಿದ ಚಿತ್ರಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. 'ಕಿಸ್ಸಿಕ್' ಸಾಂಗ್ ಹಿಟ್ ಆಗಿ ಮತ್ತೆ ಕ್ರೇಜ್ ಶುರುವಾಗುತ್ತದೆ ಎನ್ನುವ ಆಸೆ ಇಟ್ಟುಕೊಂಡಿದ್ದರು. ಅದು ಸುಳ್ಳಾಗಿದೆ. ಸದ್ಯ 'ರಾಬಿನ್ ಹುಡ್' ಎಂಬ ಚಿತ್ರದಲ್ಲಿ ಶ್ರೀ ಮಿಂಚಿದ್ದಾರೆ.
'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ಜೋಡಿಯಾಗಿ ಶ್ರೀಲೀಲಾ ನಟಿಸಿದ್ದರು. ಆದರೆ ಇಬ್ಬರೂ ಸೇರಿ ಬಿಂದಾಸ್ ಸಾಂಗ್‌ವೊಂದಕ್ಕೆ ಸ್ಟೆಪ್ಸ್ ಹಾಕಿದ್ದರು. ಆ ಹಾಡು ಸಖತ್ ಸೌಂಡ್ ಮಾಡಿತ್ತು. ಮಹೇಶ್ ಬಾಬು ಸಹ ಕಿಸ್ ಬೆಡಗಿ ಡ್ಯಾನ್ಸ್ ನೋಡಿ ಮೆಚ್ಚಿದ್ದರು. ಆಕೆ ಜೊತೆ ಡ್ಯಾನ್ಸ್ ಮಾಡುವುದು ಕಷ್ಟ ಎಂದಿದ್ದರು. ಆದರೆ 'ಕಿಸ್ಸಿಕ್' ಆ ಮ್ಯಾಜಿಕ್ ಮಾಡಿಲ್ಲ.
ಸದ್ಯ 'ಮಾಸ್ ಜಾತರ' ಹಾಗೂ 'ಉಸ್ತಾದ್ ಭಗತ್ ಸಿಂಗ್' ಎಂಬ ಮತ್ತೆರಡು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ತಮಿಳು ಕತೆಗಳನ್ನು ಕೇಳ್ತಿದ್ದು ಶೀಘ್ರದಲ್ಲೇ ಕಾಲಿವುಡ್ ಅಂಗಳಕ್ಕೆ ಜಿಗಿಯಲಿದ್ದಾರೆ.


Click it and Unblock the Notifications











