ಜಪಮಾಲೆ ಬಿಟ್ಟಿರದ ಸಮಂತಾ: ಆಧ್ಯಾತ್ಮದತ್ತ ಹೊರಳಿದ್ರಾ ಸ್ಯಾಮ್? ಏನಿದು ಲಕ್ಷ ಜಪ ಸೀಕ್ರೆಟ್?

ಶಾಕುಂತಲೆ ಆಗಿ ತೆಲುಗು ನಟಿ ಸಮಂತಾ ಮತ್ತೆ ಪ್ರೇಕ್ಷಕರು ಮುಂದೆ ಬರಲು ಸಿದ್ಧರಾಗಿದ್ದಾರೆ. ಮಯೋಸೈಟಿಸ್ ಕಾಯಿಲೆಯ ವಿರುದ್ಧ ಹೋರಾಡುತ್ತಲೇ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸದ್ಯ ಹೋದಲ್ಲಿ ಬಂದಲ್ಲಿ ಸಮಂತಾ ಜಪ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದು.

ಹೌದು ಸಮಂತಾ ಕಳೆದ ಕೆಲ ದಿನಗಳಿಂದ ಕೈಯಲ್ಲಿ ಜಪಮಾಲೆ ಹಿಡಿದು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಾಗಲೂ ಕೈಯಲ್ಲಿ ಮಾಲೆ ಇತ್ತು. 'ಶಾಕುಂತಲಂ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲೂ ಅದೇ ಜಪಮಾಲೆ ಎಲ್ಲರ ಗಮನ ಸೆಳೆದಿತ್ತು. ಸಮಂತಾ ಮೈ ಹಿಡಿದು ವೇದಿಕೆಯಲ್ಲಿ ಮಾತನಾಡುವಾಗ ಕೂಡ ಮತ್ತೊಂದು ಕೈಯಲ್ಲಿ ಜಪಮಾಲೆ ಹಿಡಿದುಕೊಂಡಿದ್ದರು. ಹಾಗಾಗಿ ಸಹಜವಾಗಿಯೇ ಯಾಕೀ ಜಪಮಾಲೆ? ಸಮಂತಾ ಆಧ್ಯಾತ್ಮದತ್ತ ಹೊರಳುತ್ತಿದ್ದಾರಾ? ಮಯೋಸೈಟಿಸ್ ಚಿಕಿತ್ಸೆಯ ಭಾಗವಾಗಿ ಈ ರೀತಿ ಮಾಲೆ ಹಿಡಿದುಕೊಂಡಿದ್ದಾರಾ? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಶಾಕುಂತಲಂ' ಸಿನಿಮಾ ತೆರೆಗೆ ಬರ್ತಿದೆ. ಗುಣಶೇಖರ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಬಂಡವಾಳ ಹೂಡಿದ್ದಾರೆ. ಹೈದರಾಬಾದ್‌ನಲ್ಲಿ ಟ್ರೈಲರ್ ಲಾಂಚ್ ಈವೆಂಟ್ ನಡೀತು. ಚಿತ್ರಕ್ಕೆ ಬೆಂಬಲವಾಗಿ ನಿಂತಿರುವ ನಿರ್ಮಾಪಕ ದಿಲ್ ರಾಜು ಕೂಡ ಭಾಗಿ ಆಗಿದ್ದರು.

ಸಮಂತಾ ಕೈಯಲ್ಲಿ ಜಪಮಾಲೆ

ಸಮಂತಾ ಕೈಯಲ್ಲಿ ಜಪಮಾಲೆ

ಅನಾರೋಗ್ಯದಿಂದ ಬಳಲುತ್ತಿರುವ ಸಮಯದಲ್ಲಿ ಉತ್ತಮ ಆರೋಗ್ಯ, ಶಾಂತಿಗಾಗಿ ಪ್ರತಿ ದಿನ 10,008 ಶ್ಲೋಕಗಳ ಜಪ ಮಾಡುತ್ತಿದ್ದಾರಂತೆ. ಮಲಯಾಳಿ ಕ್ರಿಶ್ಚಿಯನ್ನರು ಕೂಡ ಇದೇ ರೀತಿ ಮಾಲೆಯನ್ನು ಹಿಡಿದು ರೋಸರಿ ಮಾಡುತ್ತಾರೆ. ಆದರೆ ಸ್ಯಾಮ್ ಕೆಲವು ವರ್ಷಗಳ ಹಿಂದೆಯೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇತ್ತೀಚೆಗೆ ಮಂತ್ರಗಳನ್ನು ಪಠಣ ಮಾಡುತ್ತಿದ್ದಾರೆ. ಹಾಗಾಗಿ ಹೋದಲ್ಲಿ ಬಂದಲ್ಲಿ ಅದನ್ನು ಕೊಂಡೊಯ್ಯುತ್ತಿದ್ದಾರೆ. ಅಪರೂಪದ ಕಾಯಿಲೆಯ ಬಗ್ಗೆ ತಿಳಿಯುತ್ತಿದ್ದಂತೆ ಸಮಂತಾ ಕುಗ್ಗಿ ಹೋಗಿದ್ದರು. ಆದರೆ ಅಷ್ಟೇ ಬಲವಾದ ಆತ್ಮವಿಶ್ವಾಸದೊಂದಿಗೆ ತನ್ನ ಸಮಸ್ಯೆಯನ್ನು ಎದುರಿಸಲು ಹೋರಾಡುತ್ತಿದ್ದಾರೆ.

ಏನಿದು ಲಕ್ಷ ಜಪ ಸೀಕ್ರೆಟ್?

ಏನಿದು ಲಕ್ಷ ಜಪ ಸೀಕ್ರೆಟ್?

ಇನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಸಮಂತಾ ಕೈಯಲ್ಲಿ ಇರುವ ಜಪಮಾಲೆಯ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸ್ಯಾಮ್, ಲಕ್ಷ ಜಪದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಆರೋಗ್ಯ ಹೇಗಿದೆ ಎನ್ನುವ ಪ್ರಶ್ನೆಗೆ "ಒಂದೊಂದು ಸಲ ಒಂದೊಂದು ರೀತಿ ಇರುತ್ತದೆ. ಒಮ್ಮೊಮ್ಮೆ ಕೊಂಚ ಸುಧಾರಿಸಿದಂತೆ ಇರುತ್ತದೆ. ಮತ್ತೆ ಕೆಲವೊಮ್ಮೆ ಆ ರೀತಿ ಇರುವುದಿಲ್ಲ" ಎಂದಿದ್ದಾರೆ. ಕೈಯಲ್ಲಿ ಜಪಮಾಲೆ ಯಾಕೆ? ಸಿನಿಮಾ ಪ್ರಮೋಷನ್‌ಗಾಗಿನಾ? ಎನ್ನುವ ಪ್ರಶ್ನೆಗೆ, "ಸಿನಿಮಾ ಪ್ರಮೋಷನ್‌ಗಾಗಿ ಏನು ಮಾಡಲ್ಲ, ಇದು ಲಕ್ಷ ಜಪ ಮಾಡುವುದಕ್ಕಾಗಿ" ಎಂದಿದ್ದಾರೆ. ಲಕ್ಷ ಬಾರಿ ಜಪ ಮಾಡುತ್ತೀರಾ? ಯಾವ ಮಂತ್ರ ಎಂದರೆ? "ಓಂ ಹೈಂ ಕ್ರೀಂ" ಈ ರೀತಿ ಬೇರೆ ಬೇರೆ ಮಂತ್ರಗಳು ಇವೆ ಎಂದು ತಿಳಿಸಿದ್ದಾರೆ.

ವೇದಿಕೆಯಲ್ಲಿ ಕಣ್ಣೀರಾದ ಸಮಂತಾ

ವೇದಿಕೆಯಲ್ಲಿ ಕಣ್ಣೀರಾದ ಸಮಂತಾ

'ಶಾಕುಂತಲಂ' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಅಭಿಮಾನಿಗಳು ಭಾಗಿ ಆಗಿದ್ದಾರೆ. ಸಮಂತಾ ಸಮಂತಾ ಎನ್ನುವ ಕೂಗು ಜೋರಾಗಿತ್ತು. ವೇದಿಕೆಯಲ್ಲಿ ನಿರ್ದೇಶಕ ಗುಣಶೇಖರ್ ಮಾತನಾಡುತ್ತಾ ಭಾವುಕರಾಗಿದ್ದರು. ಈ ಚಿತ್ರದ ನಿಜವಾದ ನಾಯಕಿ ಸಮಂತಾ ಎಂದರು. ಅವರ ಮಾತನ್ನು ಕೇಳುತ್ತಾ ಸಮಂತಾಗೆ ಅಳು ತಡೆಯಲು ಸಾಧ್ಯವಾಗಲಿಲ್ಲ. ದುಃಖ ಉಮ್ಮಳಿಸಿ ಬಂದು ಅತ್ತುಬಿಟ್ಟರು. ಅಭಿಮಾನಿಗಳು ಹರ್ಷೋದ್ಘಾರದ ಮೂಲಕ ಸ್ಯಾಮ್‌ನ ಹುರಿದುಂಬಿಸಿದರು.

ಶಾಕುಂತಲೆಯಾಗಿ ಸಮಂತಾ ನಟನೆ

ಶಾಕುಂತಲೆಯಾಗಿ ಸಮಂತಾ ನಟನೆ

ಕಾಳೀದಾಸನ 'ಶಾಕುಂತಲ' ನಾಟಕವನ್ನು ಆಧರಿಸಿ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಗ್ರಾಫಿಕ್ಸ್ ಬಹಳ ಅದ್ಭುತ ಲೋಕವನ್ನು ಸೃಷ್ಟಿಸಲಾಗಿದೆ. ಪ್ರಕಾಶ್ ರಾಜ್, ಮೋಹನ್ ಬಾಬು ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಮಣಿಶರ್ಮ ಸಂಗೀತ ಚಿತ್ರಕ್ಕಿದೆ. ಫೆಬ್ರವರಿ 17ಕ್ಕೆ 5 ಭಾಷೆಗಳಲ್ಲಿ 'ಶಾಕುಂತಲಂ' ಸಿನಿಮಾ ತೆರೆಗೆ ಬರಲಿದೆ. ಮಾಲಿವುಡ್ ನಟ ದೇವ್ ಮೋಹನ್ ದುಷ್ಯಂತನಾಗಿ ಸಮಂತಾ ಜೊತೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
Know Reason behind Actress Samantha Carrying Japamala Everywhere. Samantha revealed to some media persons that she’s chanting mantras every day for her good health and peace. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X