ಮಹೇಶ್ ಬಾಬು ಮುಂದಿನ ಚಿತ್ರ ನಿರ್ದೇಶನ ಮಾಡಲಿರೊ ಖ್ಯಾತ ಡೈರೆಕ್ಟರ್ ಯಾರು?

ಟಾಲಿವುಡ್‌ನಲ್ಲಿ ನಂ 1 ನಟರಲ್ಲಿ ಮಹೇಶ್ ಬಾಬು ಕೂಡ ಒಬ್ಬರು. ಮಹೇಶ್ ಬಾಬು ಸಿನಿಮಾ, ಡೈಲಾಗ್ ಡೆಲಿವರಿ, ನಟನಾ ಕೌಶಲ್ಯಕ್ಕೆ ಮಾರುಹೋಗದವರೇ ಇಲ್ಲ. ಹಿರಿಯರಿಂದ ಕಿರಿಯರವರೆಗೂ ಮಹೇಶ್ ಬಾಬು ಸಿನಿಮಾವನ್ನು ಇಷ್ಟ ಪಡುತ್ತಾರೆ. ಫ್ಯಾಮಿಲಿ ಆಡಿಯನ್ಸ್‌ಗೆ ಮಹೇಶ್ ಬಾಬು ಸಿನಿಮಾ ಅಂದ್ರೆ ಅಚ್ಚುಮೆಚ್ಚು. ಸದ್ಯ ಟಾಲಿವುಡ್‌ನಲ್ಲಿ ಕೈತುಂಬ ಸಿನಿಮಾ ಇಟ್ಟುಕೊಂಡಿರೊ ಮಹೇಶ್ ಬಾಬು ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಮಹೇಶ್ ಬಾಬು ಫೋರ್ಬ್ಸ್ (Forbes) ಮ್ಯಾಗಜೀನ್‌ನೊಂದಿಗೆ ಮಾತನಾಡಿದ್ದು, ಇಲ್ಲಿ ತನ್ನ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ನನ್ನ ಮುಂದಿನ ಸಿನಿಮಾವನ್ನು ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದು ನನ್ನ ಸಿನಿಮಾ ಕೆರಿಯರ್‌ನಲ್ಲಿ ಬಹುದೊಡ್ಡ ಸಿನಿಮಾ ಆಗಿ ಮೂಡಿಬರಲಿದ್ದು, ಎಲ್ಲಾ ಭಾಷೆಗಳಲ್ಲೂ ಸಿನಿಮಾ ಬರುತ್ತೆ ಎಂದಿದ್ದಾರೆ. ಅಲ್ಲದೇ ಈ ಸಿನಿಮಾ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ, ನನ್ನ ಬಾಕಿ ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಆದ ನಂತರದಲ್ಲಿ ರಾಜಮೌಳಿ ನಿರ್ದೇಶನದ ಚಿತ್ರ ಆರಂಭವಾಗಲಿದೆ ಎಂದಿದ್ದಾರೆ.

ಪ್ರಿನ್ಸ್ ಮಹೇಶ್ ಬಾಬು ಈ ಸುದ್ದಿ ಹೊರಹಾಕುತ್ತಿದ್ದಂತೆ ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಡೈರೆಕ್ಷನ್‌ನಲ್ಲಿ ಸಿನಿಮಾ ಮೂಡಿ ಬರುತ್ತಿರೋದರಿಂದ ಯಾವ ರೀತಿ ಸಿನಿಮಾ ಮೂಡಿಬರಬಹುದು? ಮಹೇಶ್ ಬಾಬು ಲುಕ್ ಹೇಗಿರಬಹುದು ಎಂಬೆಲ್ಲ ಚರ್ಚೆಗಳು ಆರಂಭವಾಗಿದೆ. ಫೋರ್ಬ್ಸ್ ಜೊತೆ ಮಾತುಕತೆ ಮುಂದುವರೆಸಿ, ಟಾಲಿವುಡ್ ಪ್ರಿನ್ಸ್ ತನ್ನ ಬಾಲಿವುಡ್ ಎಂಟ್ರಿ ಬಗ್ಗೆ ಕೂಡ ಮಾತು ಹಂಚಿಕೊಂಡಿದ್ದಾರೆ.

Know who is directing Mahesh Babus next film?

ಮಹೇಶ್ ಬಾಬು ಟಾಲಿವುಡ್ ಸಿನಿಮಾಗಳು ಬಿಟ್ಟು ಬೇರೆ ಯಾವ ಭಾಷೆಯ ಚಿತ್ರಗಳಲ್ಲು ನಟಿಸುವ ಉತ್ಸಾಹ ಇಲ್ಲಿವರೆಗು ತೋರಿಸಿರಲಿಲ್ಲ. ಅದರಂತೆ ಈಗ ಬಾಲಿವುಡ್‌ ಎಂಟ್ರಿಗೆ ಅವಕಾಶ ಬಂದಿದೆ ಅದು ಕೂಡ ರಾಜಮೌಳಿ ಅವರಿಂದ ಎಂದಿದ್ದಾರೆ. ರಾಜಮೌಳಿ ನಿರ್ದೇಶನದ ನನ್ನ ಮುಂದಿನ ಸಿನಿಮಾ ಏನಿದೆ ಅದು ಹಿಂದಿ ಭಾಷೆಯಲ್ಲು ರಿಲೀಸ್ ಆಗಲಿದೆ ಹೀಗಾಗಿ ನನಗೆ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‌ಗೆ ನಾನು ಎಂಟ್ರಿ ಪಡೆಯುತ್ತಿದ್ದೇನೆ ಎಂದು ನಗು ಬೀರಿದ್ದಾರೆ.

ಮಹೇಶ್ ಬಾಬು ಅವರ ಪರಶುರಾಮ್ ಜೊತೆಗಿನ ಮುಂದಿನ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ. 'ಸರ್ಕಾರು ವಾರಿ ಪಾಟ' ಚಿತ್ರವು ರಾಜಕೀಯ ಕಥಾ ಹಂದರವನ್ನು ಹೊಂದಿದ್ದು, ಇದು 2022 ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿದೆ. ಹೀಗೆ ಸಿನಿಮಾಗಳ ಜೊತೆಗೆ ಮಹೇಶ್ ಬಾಬು ಸಾಮಾಜಿಕ ಕೆಲಸಗಳನ್ನು ಸಹ ಮಾಡುತ್ತಿರುವುದು ತುಂಬಾ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಜೊತೆಗೆ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಯಾವಾಗ ಅನೌನ್ಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Actor Mahesh Babu talks about his next new project, claiming that a famous director is going team up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X