Virat Kohli's Biopic: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಯೋಪಿಕ್ ಮಾಡಲು ನಾನು ರೆಡಿ ಎಂದ ತೆಲುಗು ನಟ ರಾಮ್

ಭಾರತೀಯ ಚಿತ್ರರಂಗದಲ್ಲಿ ಬಯೋಪಿಕ್ ಹೊಸದಲ್ಲ. ವರ್ಷಕ್ಕೆ ಒಂದಾದರೂ ಬಯೋಪಿಕ್ ಅಥವಾ ನೈಜ್ಯ ಘಟನೆ ಆಧಾರಿತ ಸಿನಿಮಾಗಳು ತೆರೆಗೆ ಬರುತ್ತಿವೆ. ಬಯೋಪಿಕ್‌ಗಳಲ್ಲಿ ಮೊದಲಸಾಲಿನಲ್ಲಿ ಸಾಧಕರು ನಿಲ್ಲುತ್ತಾರೆ. ಸದ್ಯಕ್ಕೆ ಚಿತ್ರರಂಗದಲ್ಲಿ ಸುದ್ದಿಯಿರುವುದು ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಯೋಪಿಕ್ ವಿಚಾರ.

ಎಸ್.. ಕ್ರೀಡಾ ಜಗತ್ತಿನ ಹಲವು ಘಟನೆಗಳು, ಪ್ರಮುಖ ವಷರ್ಷಗಳು, ಕ್ರೀಡೆಗಳ ಮೇಲೆ ನೂರಾರು ಸಿನಿಮಾಗಳಿವೆ. ಈ ಹಿಂದೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂರ್ ಅಭಿನಯದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಚಿತ್ರ "ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ" ಬಾಲಿವುಡ್ ನಲ್ಲಿ ಬಯೋಪಿಕ್‌ಗಳಿಗೆ ಪ್ರಾಮುಖ್ಯತೆ ದೊರೆಯುವಂತೆ ಮಾಡಿತ್ತು. ಈಗ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಸುದ್ದಿ ಸದ್ದು ಮಾಡುತ್ತಿದೆ.

Kohli’s Biopic: Ram Pothineni speak about accepting star cricketer Virat Kohlis Biopic

ವಿರಾಟ್ ಬಯೋಪಿಕ್‌ನಲ್ಲಿ ರಾಮ್ ಪೋತಿನೇನಿ!

ತೆಲುಗಿನ ಎನರ್ಜಿಟಿಕ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ರಾಮ್ ಪೋತಿನೇನಿ ಅವರನ್ನು ಆಗಾಗ್ಗೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತದೆ. ಇಬ್ಬರು ಸ್ಟಾರ್‌ಗಳ ಒಂದೇ ರೀತಿಯ ಎತ್ತರ ಮತ್ತು ಮುಖ ಭಾವಗಳು ಅಭಿಮಾನಿಗಳು ಮತ್ತು ಮಾಧ್ಯಮಗಳಲ್ಲಿ ಹಲವಾರು ಚರ್ಚೆಗಳಿಗೆ ಕಾರಣವಾಗಿವೆ.

ರಾಮ್ ಪೋತಿನೇನಿ ಅವರ 'ಇಸ್ಮಾರ್ಟ್ ಶಂಕರ್' ಚಿತ್ರೀಕರಣದ ಸಮಯದಲ್ಲಿ, ರಾಮ್ ಅವರ ಫೋಟೋ ಮತ್ತು ಲುಕ್ ಹೆಚ್ಚು ಕಡಿಮೆ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೋಲುವಂತೆ ಕಾಣುತ್ತಿದ್ದವು. ಹೀಗಾಗಿ ಇಬ್ಬರ ಅಭಿಮಾನಿಗಳು ಕೂಡ ಇದನ್ನು ಇಷ್ಟಪಟ್ಟಿದ್ದರು. ಆ ಸಮಯದಲ್ಲಿ ನಟ ರಾಮ್ ಅವರ ಫೋಟೋಗಳು ವೈರಲ್ ಆಗಿದ್ದವು.

ಇತ್ತೀಚಿಗೆ, ಸೆಪ್ಟೆಂಬರ್ 28 ಕ್ಕೆ ಬಿಡುಗಡೆಗೆ ಸಿದ್ಧವಾಗಿರುವ 'ಸ್ಕಂದ' ಚಲನಚಿತ್ರ ಬಿಡುಗಡೆಗೂ ಮುನ್ನ ಚಾನೆಲ್‌ಗಳಿಗೆ ನೀಡಿರುವ ಸಂದರ್ಶನದಲ್ಲಿ ನಟ ರಾಮ್ ಪೋತಿನೇನಿ ಈ ಹೋಲಿಕೆಯನ್ನು ಪ್ರಸ್ತಾಪಿಸಿದ್ದಾರೆ. ಸಂದರ್ಶಕರು ಕೇಳಿದ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸಲು ನೀವು ಆಸಕ್ತಿ ಹೊಂದಿದ್ದೀರಾ ಎಂದು ರಾಮ್ ಅವರನ್ನು ಕೇಳಲಾಯಿತು. ಇದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ.

Kohli’s Biopic: Ram Pothineni speak about accepting star cricketer Virat Kohlis Biopic

ಈ ವೇಳೆ ತಮಗೂ ವಿರಾಟ್ ಕೊಹ್ಲಿಗೂ ಆಗಾಗ್ಗೆ ಹೋಲಿಕೆ ಮಾಡುತ್ತಿರುವುದನ್ನು ರಾಮ್ ಒಪ್ಪಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಸೂಪರ್‌ಸ್ಟಾರ್‌ಗೆ ತಮ್ಮನ್ನು ಹೋಲಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅವಕಾಶ ಸಿಕ್ಕರೆ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸಲು ಥ್ರಿಲ್ ಆಗುತ್ತೇನೆ ಎಂದ ಅವರು, ಅಂತಹ ಪ್ರಾಜೆಕ್ಟ್‌ಗೆ ತಮಗಿರುವ ಉತ್ಸಾಹವನ್ನು ತಿಳಿಸಿದ್ದಾರೆ.

ಇನ್ನು, ವಿರಾಟ್ ಕೊಹ್ಲಿಯ ಜೀವನಚರಿತ್ರೆ ಮಾಡಲು ಹೊರಟರೆ ಅದಕ್ಕೆ ರಾಮ್ ಚರಣ್ ಸೂಕ್ತ ಎನ್ನುವ ವ್ಂತಿಗಲಿದ್ದವು. ಇದರ ಬೆನ್ನಲ್ಲೇ ಅವರೇ ಕೊಹ್ಲಿ ಪಾತ್ರವನ್ನು ಮಾಡುವ ಟಾಪ್ ನಟರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ರಾಮ್ ಚರಣ್ ಅಂತಹ ಸದ್ಯಕ್ಕೆ ಯಾವುದೇ ಉದ್ದೇಶವಿಲ್ಲ. ಈಗಾಗಲೇ ತಮ್ಮ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದಾಗಿ ರಾಮ್ ಚರಣ್ ಅವರ ತಂಡ ಸ್ಪಷ್ಟನೆ ನೀಡಿದೆ.

ಸ್ಕಂದ

"ಸ್ಕಂದ" ರಾಮ್ ಪೋತಿನೇನಿ ಮತ್ತು ಕನ್ನಡರಿ ಶ್ರೀಲೀಲಾ ನಟನೆಯ ನಿರ್ದೇಶಕ ಬೋಯಪತಿ ಶ್ರೀನು ಅವರ ಮೊದಲ ಚಿತ್ರ. ರಾಮ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಹೌದು. ಹಿಂದಿ ಮಾರುಕಟ್ಟೆಯಲ್ಲಿ ಚಲನಚಿತ್ರಪ್ರಚಾರ ಮಾಡಲು ಅವರು ಯೂಟ್ಯೂಬರ್‌ಗಳೊಂದಿಗೆ ಒಂದೆರಡು ಹಿಂದಿ ಸಂದರ್ಶನಗಳನ್ನು ನಡೆಸಿದ್ದಾರೆ.

More from Filmibeat

English summary
Ram Pothineni speak about accepting star cricketer Virat Kohli's Biopic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X