For Quick Alerts
  ALLOW NOTIFICATIONS  
  For Daily Alerts

  ಜೂ.ಎನ್‌ಟಿಆರ್ ಪಾತ್ರದ ಬಗ್ಗೆ ನಿಜ ಕೋಮರಂ ಭೀಮ್ ಮೊಮ್ಮಗನ ಆಕ್ಷೇಪ

  |

  ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಅತ್ಯಂತ ಕುತೂಹಲ ಕೆರಳಿಸಿರುವ ಸಿನಿಮಾ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಸಾಕಷ್ಟು ವಿವಾದ ಹಾಗೂ ಟೀಕೆಗೂ ಸಹ ಗುರಿಯಾಗುತ್ತಿದೆ ಆರ್‌ಆರ್ಆರ್ ಸಿನಿಮಾ.

  ಆರ್‌ಆರ್‌ಆರ್‌ ಸಿನಿಮಾದ ಎರಡನೇ ಟೀಸರ್ ಬಿಡುಗಡೆ ನಂತರ ವಿವಾದವೊಂದು ಭುಗಿಲೆದ್ದಿದೆ. ಜೂ ಎನ್‌ಟಿಆರ್ ನಟಿಸಿರುವ ಕೋಮರಂ ಭೀಮ್ ಪಾತ್ರ ಪರಿಚಯದ ಟೀಸರ್ ಅನ್ನು ರಾಜಮೌಳಿ ಬಿಡುಗಡೆ ಮಾಡಿದರು. ಈ ಟೀಸರ್‌ನ ಅಂತ್ಯದಲ್ಲಿ ಕೋಮರಂ ಭೀಮ್ ಪಾತ್ರದಾರಿ ಜೂ.ಎನ್‌ಟಿಆರ್ ಮುಸ್ಲಿಂ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.

  ರಾಜಮೌಳಿ ವಿರುದ್ಧ ಜೂ.ಎನ್‌ಟಿಆರ್, ರಾಮ್‌ ಚರಣ್, ಕೀರವಾಣಿ ದೂರು

  ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದಿಲಾಬಾದ್ ಬುಡಕಟ್ಟು ಜನಾಂಗ ಜೂ.ಎನ್‌ಟಿಆರ್ ಅವರ ಮುಸ್ಲಿಂ ಲುಕ್‌ಗೆ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ, ಕೋಮರಂ ಭೀಮ್ ಅವರ ಸ್ವಂತ ಮೊಮ್ಮಗ ಸಹ ಜೂ.ಎನ್‌ಟಿಆರ್ ಪಾತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  ಕೋಮರಂ ಭೀಮ್ ಮೊಮ್ಮಗ ಸೋನೆ ರಾವ್

  ಕೋಮರಂ ಭೀಮ್ ಮೊಮ್ಮಗ ಸೋನೆ ರಾವ್

  ಕೋಮರಂ ಭೀಮ್ ಮೊಮ್ಮಗನ ಹೆಸರು ಸೋನೆ ರಾವ್, ಅವರು ಕೋಮರಂ ಭೀಮ್ ಪಾತ್ರಧಾರಿ ಜೂ ಎನ್‌ಟಿಆರ್ ಅನ್ನು ಸಿನಿಮಾದಲ್ಲಿ ಮುಸ್ಲಿಂ ವ್ಯಕ್ತಿಯಾಗಿ ತೋರಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಇತಿಹಾಸವನ್ನು ತಿರುಚುವ ಪ್ರಯತ್ನ ಎಂದಿದ್ದಾರೆ.

  ಸೋನೆ ರಾವ್ ಮಾತನಾಡಿರುವ ವಿಡಿಯೋ ವೈರಲ್

  ಸೋನೆ ರಾವ್ ಮಾತನಾಡಿರುವ ವಿಡಿಯೋ ವೈರಲ್

  ಟೀಸರ್‌ ಬಗ್ಗೆ ಸೋನೆ ರಾವ್ ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇತಿಹಾಸವನ್ನು ತಿರುಚಿರುವ ಆರ್‌ಆರ್‌ಆರ್‌ ಸಿನಿಮಾದ ಜೂ ಎನ್‌ಟಿಆರ್ ಪಾತ್ರದ ಟೀಸರ್ ಅನ್ನು ರಾಜಮೌಳಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

  ಮುಸ್ಲಿಂ ಅಥವಾ ಹಿಂದು, ಕೋಮರಂ ಭೀಮ್ ಯಾರು? ಧರ್ಮವನ್ನೇ ಬದಲಾಯಿಸಿದರೇ ರಾಜಮೌಳಿ?

  ಇತಿಹಾಸವನ್ನು ತಿರುಚುವ ಪ್ರಯತ್ನ: ಸೋನೆ ರಾವ್

  ಇತಿಹಾಸವನ್ನು ತಿರುಚುವ ಪ್ರಯತ್ನ: ಸೋನೆ ರಾವ್

  'ನಿರ್ದೇಶಕ ರಾಜಮೌಳಿ ಆಗಲಿ, ಆರ್‌ಆರ್‌ಆರ್ ಸಿನಿಮಾದ ಇತರೆ ನಿರ್ದೇಶಕರುಗಳಾಗಲಿ ನಮ್ಮನ್ನು ಸಂಪರ್ಕಿಸಿಲ್ಲ. ಬುಡಕಟ್ಟು ಸಮುದಾಯಗಳ ಆಸ್ತಿಗಳಾದ ನೀರು, ನೆಲ, ಅರಣ್ಯಕ್ಕಾಗಿ ಕೋಮರಂ ಭೀಮ್ ಹೋರಾಟ ನಡೆಸಿದರು. ಆದರೆ ಆತನನ್ನು ಅಲ್ಪಸಂಖ್ಯಾತನಾಗಿ ತೋರಿಸುತ್ತಿರುವುದು ಇತಿಹಾಸವನ್ನು ತಿರುಚುವ ಯತ್ನ' ಎಂದಿದ್ದಾರೆ ಸೋನೆ ರಾವ್.

  ಕೋಮರಂ ಭೀಮ್ ಬಗ್ಗೆ ಸುಳ್ಳು ಹರಡಲು ಬಿಡೆವು: ಸೋನೆ ರಾವ್

  ಕೋಮರಂ ಭೀಮ್ ಬಗ್ಗೆ ಸುಳ್ಳು ಹರಡಲು ಬಿಡೆವು: ಸೋನೆ ರಾವ್

  'ಆದಿವಾಸಿಗಳು ದೇವರಂತೆ ಪೂಜಿಸುವ ಕೋಮರಂ ಭೀಮ್ ಬಗ್ಗೆ ಸುಳ್ಳು ಹರಡಲು ನಾವು ಬಿಡುವುದಿಲ್ಲ, ಕೋಮರಂ ಭೀಮ್ ಅನ್ನು ಮುಸ್ಲಿಂ ವ್ಯಕ್ತಿಯನ್ನಾಗಿ ಚಿತ್ರಿಸುವುದನ್ನು ಕೈಬಿಡದ ಹೊರತು, ನಾವು ಸಿನಿಮಾ ವಿರುದ್ಧ ಪ್ರತಿಭಟನೆ ಮಾಡುತ್ತೇವೆ' ಎಂದಿದ್ದಾರೆ ಸೋನೆ ರಾವ್.

  RRR ನಿರ್ದೇಶಕ ರಾಜಮೌಳಿ ಮೇಲೆ ದೃಶ್ಯ ಕದ್ದ ಆರೋಪ

  ರಾಜಮೌಳಿಗೆ ಬುಡಕಟ್ಟು ಸಮುದಾಯದ ಬಹಿರಂಗ ಪತ್ರ

  ರಾಜಮೌಳಿಗೆ ಬುಡಕಟ್ಟು ಸಮುದಾಯದ ಬಹಿರಂಗ ಪತ್ರ

  ಅಡಿಲಾಬಾದ್ ಬುಡಕಟ್ಟು ಸಮುದಾಯ ಸಹ ರಾಜಮೌಳಿಗೆ ಬಹಿರಂಗ ಪತ್ರ ಬರೆದಿದ್ದು, 'ಕೋಮರಂ ಭೀಮ್ ತನ್ನ ಕೊನೆಯ ಉಸಿರಿನ ವರೆಗೆ ನಿಜಾಮರು ಹಾಗೂ ಅವರ ರಜಾಕ್ ಸೈನ್ಯದ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದರು. ಆದರೆ ನೀವು ಕೋಮರಂ ಭೀಮ್ ಅನ್ನು ಮುಸ್ಲಿಂ ಎಂದು ಹೇಳಲು ಹೊರಟಿದ್ದೀರಿ. ಇದು ಲಕ್ಷಾಂತರ ಆದಿವಾಸಿಗಳಿಗೆ ಮಾಡುತ್ತಿರುವ ಅವಮಾನ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  English summary
  Komaram Bheem's grand son Sone Rao unhappy with Jr NTR teaser in which Komaram Bheem shown as Muslim man. Sone Rao warns Rajamouli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X