ಆ ಹಾಡಿನಲ್ಲಿ ನಟಿ ಸೌಂದರ್ಯ ಸೀರೆ ಬಣ್ಣ ಬದಲಾಗುವ ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ

By ಫಿಲ್ಮಿಬೀಟ್ ಡೆಸ್ಕ್

ನಟಿ ಸೌಂದರ್ಯ ಕೇವಲ 10 ವರ್ಷಗಳ ತಮ್ಮ ಸಿನಿಕರಿಯರ್‌ನಲ್ಲಿ 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. ಒಂದಕ್ಕಿಂತ ಒಂದು ವಿಭಿನ್ನ ಪಾತ್ರದಲ್ಲಿ ಮಿಂಚಿದರು. ಎಕ್ಸ್‌ಪೋಸ್‌ ಮಾಡಲು ಹಿಂದೇಟು ಹಾಕುತ್ತಿದ್ದ ಆಕೆ ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಸೌಂದರ್ಯ ಸೀರೆ, ಸಲ್ವಾರ್, ಲಂಗಾ ದಾವಣಿಯಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದೇ ಹೆಚ್ಚು. ಎಕ್ಸ್‌ಪೋಸ್ ಮಾಡಬಾರದು ಎಂದು ತಮ್ಮ ಸಹ ನಟಿಯರಿಗೂ ಸಲಹೆ ನೀಡುತ್ತಿದ್ದರು. ಈಗ ಎಕ್ಸ್‌ಪೋಸ್ ಮಾಡಿ ಬಳಿಕ ಮದುವೆ ಆದಮೇಲೆ ಗಂಡನಿಗೆ ಏನು ಹೇಳುವುದು ಎಂದು ಸೌಂದರ್ಯ ಹೇಳುತ್ತಿದ್ದರಂತೆ. ಸೌಂದರ್ಯ ಚಿತ್ರಬದುಕಿನಲ್ಲಿ ತೆಲುಗಿನ 'ಅಂತಃಪುರಂ' ಮರೆಯಲಾಗದ ಸಿನಿಮಾ.

krishna vamsi revealed soundarya s saree colour change secret in that song

ಕೃಷ್ಣವಂಶಿ ನಿರ್ದೇಶನದ 'ಅಂತಃಪುರಂ' ಸಿನಿಮಾ 1998ರಲ್ಲಿ ತೆರೆಗೆ ಬಂದಿತ್ತು. ಚಿತ್ರ ಆ ವರ್ಷ 9 ನಂದಿ ಅವಾರ್ಡ್, 3 ಫಿಲ್ಮ್‌ಫೇರ್ ಪ್ರಶಸ್ತಿ ಹಾಗೂ ಪ್ರಕಾಶ್ ರಾಜ್ ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಸಿಕ್ಕಿತ್ತು. ಚಿತ್ರದಲ್ಲಿ ಭಾನುಮತಿಯಾಗಿ ಲೀಡ್ ರೋಲ್‌ನಲ್ಲಿ ಸೌಂದರ್ಯ ನಟನೆ ಗಮನ ಸೆಳೆದಿತ್ತು. ಭಾನುಮತಿ ಪತಿ ಪ್ರಕಾಶ್ ಪಾತ್ರದಲ್ಲಿ ಸಾಯಿ ಕುಮಾರ್ ನಟಿಸಿದ್ದರು. ಇಬ್ಬರು ಕಾಣಿಸಿಕೊಂಡಿರುವ ರೊಮ್ಯಾಂಟಿಕ್ ಸಾಂಗ್ ಕೂಡ ಚಿತ್ರದಲ್ಲಿದೆ.

ದೊಡ್ಡ ಬೋಟ್‌ವೊಂದರ ಮೇಲೆ ಸಾಯಿ ಕುಮಾರ್ ಹಾಗೂ ಸೌಂದರ್ಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಹಾಡು ಅದೇ ಬೋಟ್ ಮೇಲೆ ಚಿತ್ರೀಕರಣವಾಗಿತ್ತು. ಕೆಂಪು ಬಣ್ಣದ ಸೀರೆಯಲ್ಲಿ ಸೌಂದರ್ಯ ಹಾಡಿನ ಉದ್ದಕ್ಕೂ ಕಾಣಿಸಿಕೊಂಡಿದ್ದರು. ಆದರೆ ಈ ಹಾಡನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಿದಾಗ ಸೌಂದರ್ಯ ಸೀರೆ ಬಣ್ಣ ಆಗಾಗ್ಗೆ ಬದಲಾಗುತ್ತಿತ್ತು. ನೀಲಿ, ಹಸಿರು, ಹಳದಿ, ಕೆಂಪು ಹೀಗೆ ತರಹೇವಾರಿ ಬಣ್ಣಕ್ಕೆ ತಿರುಗುತ್ತಿತ್ತು. ಇದು ವೀಕ್ಷಕರ ಗಮನ ಸೆಳೆದಿತ್ತು.

krishna vamsi revealed soundarya s saree colour change secret in that song

ಇತ್ತೀಚೆಗೆ ನೆಟ್ಟಿಗರೊಬ್ಬರು ಈ ಬಗ್ಗೆ ನಿರ್ದೇಶಕ ಕೃಷ್ಣವಂಶಿ ಬಳಿ ಕೇಳಿದ್ದಾರೆ. 'ಅಸಲೇಂ ಗುರ್ತುಕು ರಾದು' ಹಾಡಿನ ಬಗ್ಗೆ ಪ್ರಸ್ತಾಪಿಸಿ "ಸೌಂದರ್ಯ ಸೀರೆ ಬಣ್ಣ ಬದಲಾಗುವುದು ಸಖತ್ತಾಗಿರುತ್ತದೆ ಸಾರ್.. ಅಷ್ಟಕ್ಕೂ ಈ ಐಡಿಯಾ ಹೇಗೆ ಬಂತು" ಎಂದು ಕೇಳಿದ್ದಾರೆ. ಇದನ್ನು ನಿರ್ದೇಶಕ ಉತ್ತರ ಕೆಲವರಿಗೆ ಶಾಕ್ ತಂದಿದೆ. "ಅದು ಸಿನಿಮಾದಲ್ಲಿ ಇಲ್ಲ.. ಸಿನಿಮಾ ರಿಲೀಸ್ ನಂತರ ಜೆಮಿನಿ ಟಿವಿಯಲ್ಲಿ ಎಡಿಟರ್ ಮಾಡಿರುವುದು ಎಂದು ರಿಪ್ಲೇ ಮಾಡಿದ್ದಾರೆ.

ನಿರ್ದೇಶಕ ಕೃಷ್ಣವಂಶಿ ರಿಪ್ಲೇ ನೋಡಿ ಹಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ಇದು ಯಾರಿಗೂ ಗೊತ್ತಿರಲಿಲ್ಲ. ಇದಕ್ಕೆ ಕ್ರೆಡಿಟ್ ಯಾರಿಗೆ ಕೊಡಬೇಕೋ ಅವರಿಗೆ ನಿರ್ದೇಶಕರು ಕೊಟ್ಟಿದ್ದಾರೆ ಎಂದು ಕೃಷ್ಣವಂಶಿ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಮಹೇಶ್ ಬಾಬು ಹುಟ್ಟುಹಬ್ಬ ಸಂಭ್ರಮದಲ್ಲಿ ಕೃಷ್ಣವಂಶಿ ನಿರ್ದೇಶನದ 'ಮುರಾರಿ' ಸಿನಿಮಾ ರೀ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಸೋನಾಲಿ ಬೇಂದ್ರೆ ನಟಿಸಿದ್ದರು.

'ಅಂತಃಪುರಂ' ಚಿತ್ರವನ್ನು ಕೃಷ್ಣವಂಶಿ ಹಿಂದಿಯಲ್ಲಿ ರೀಮೆಕ್ ಮಾಡಿದ್ದರು. ಕರೀಶ್ಮಾ ಕಪೂರ್ ಹಾಗೂ ಶಾರುಖ್ ಖಾನ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಬಾಲಿವುಡ್‌ನಲ್ಲೂ ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲ್ಲಲಿಲ್ಲ.

More from Filmibeat

English summary
Director interesting comments on actress soundarya's anthahpuram film song
Read more about: soundarya telugu song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X