"ಮದ್ವೆ ಅವನಿಷ್ಟ, ಯಾರನ್ನು ಬೇಕಾದ್ರೂ ಆಗ್ಲಿ ಅಭ್ಯಂತರವಿಲ್ಲ"; ಪ್ರಭಾಸ್ ದೊಡ್ಡಮ್ಮನ ಹೇಳಿಕೆ ವೈರಲ್

ತೆಲುಗು ನಟ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಬ್ಬರಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಮೋಡಿ ಮಾಡುತ್ತಿದ್ದಾರೆ. ಇದೇ 27ಕ್ಕೆ 'ಕಲ್ಕಿ' ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇನ್ನು ಪ್ರಭಾಸ್ ಮದುವೆ ವಿಷಯ ಪದೇ ಪದೆ ಚರ್ಚೆಗೆ ಬರುತ್ತಿರುತ್ತಿದ್ದಾರೆ. ಇದೀಗ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರಭಾಸ್ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ವಯಸ್ಸು 40 ದಾಟಿದ್ರು ಯಂಗ್ ರೆಬಲ್ ಸ್ಟಾರ್ ಯಾಕೋ ಮದುವೆ ಬಗ್ಗೆ ಸೈಲೆಂಟ್ ಆಗಿದ್ದಾರೆ. ಇತ್ತೀಚೆಗೆ 'ಕಲ್ಕಿ' ಚಿತ್ರದ ಬುಜ್ಜಿಯನ್ನು ಪರಿಚಯಿಸಲು ಪ್ರಭಾಸ್ ಮಾಡಿದ್ದ ಪೋಸ್ಟ್ ಭಾರೀ ವೈರಲ್ ಆಗಿತ್ತು. ಒಬ್ಬ ವಿಶೇಷ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದಿದ್ದು ಕುತೂಹಲ ಮೂಡಿಸಿತ್ತು. ಪ್ರಭಾಸ್ ಮದುವೆ ಬಗ್ಗೆ ಮಾತನಾಡುತ್ತಿದ್ದಾರಾ? ಯಾರು ಆಕೆ? ಅಂತೆಲ್ಲಾ ಚರ್ಚೆ ಆಯಿತು. ಬಳಿಕ ಅದು ಸಿನಿಮಾ ಪ್ರಮೋಷನ್ ಎನ್ನವುದು ಗೊತ್ತಾಯಿತು.

Krishnam Raju Wife Shyamala Devi interesting Comments About Prabhas And Anushka Marriage

'ಬಾಹುಬಲಿ' ಸರಣಿ ಸಿನಿಮಾಗಳು ಮುಗಿದ ಕೂಡಲೇ ನನ್ನ ಮದುವೆ ಎಂದು ಪ್ರಭಾಸ್ ಹೇಳಿದ್ದರು. ಆದರೆ ಆ ಸಿನಿಮಾ ಬಂದೋಗಿ ಐದಾರು ವರ್ಷ ಕಳೆದರೂ ಆ ಸುಳಿವೇ ಇಲ್ಲ. ಇನ್ನು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ತೆರೆಮೇಲೆ ಒಟ್ಟಿಗೆ ನಟಿಸಿ ಮೋಡಿ ಮಾಡಿದ್ದಾರೆ. ಇಬ್ಬರೂ ಒಳ್ಳೆ ಜೋಡಿ. ಆವರಿಬ್ಬರು ನಿಜ ಜೀವನದಲ್ಲಿ ಕೂಡ ಮದುವೆ ಆಗಬೇಕು ಎನ್ನುವುದು ಸಾಕಷ್ಟು ಅಭಿಮಾನಿಗಳ ಆಸೆಯಾಗಿದೆ. ಆದರೆ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಇಬ್ಬರೂ ಹೇಳುತ್ತಿದ್ದಾರೆ.

ಪ್ರಭಾಸ್ ದೊಡ್ಡಪ್ಪ ಕೃಷ್ಣರಾಜು ತೆಲುಗಿನ ಖ್ಯಾತ ನಟರಾಗಿ ಜನಪ್ರಿಯರಾಗಿದ್ದರು. ಅವರ ಹಾದಿಯಲ್ಲೇ ಬಾಹುಬಲಿ ನಟ ಚಿತ್ರರಂಗಕ್ಕೆ ಬರುವಂತಾಯಿತು. ಪ್ರಭಾಸ್ಗೆ ಗಾಡ್‌ಫಾದರ್, ಗುರು ಎಲ್ಲವೂ ಕೃಷ್ಣಂರಾಜು ಆಗಿದ್ದರು. ಪ್ರಭಾಸ್ ಮದುವೆ ಮಾಡಲು ಅವರು ಬಹಳ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಸಾಕಷ್ಟು ಸಂಬಂಧಗಳನ್ನು ಹುಡುಕಿದ್ದಾಗಿಯೂ ಸುದ್ದಿಯಾಗಿತ್ತು. ಕೃಷ್ಣಂರಾಜು ನಿಧನದ ಬಳಿಕ ಅವರ ಪತ್ನಿ ಶ್ಯಾಮಲಾ ದೇವಿ ಬಳಿ ಪ್ರಭಾಸ್ ಮದುವೆ ಪ್ರಶ್ನೆ ಕೇಳುತ್ತಿದ್ದಾರೆ.

ಪ್ರಭಾಸ್ ಮದುವೆ ಬಗ್ಗೆ ಶ್ಯಾಮಲಾ ದೇವಿ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ತೆಲುಗು ಸಂದರ್ಶನವೊಂದರಲ್ಲಿ ಆಕೆ ಮಾತನಾಡಿದ್ದಾರೆ. "ಕಲ್ಕಿ ಸಿನಿಮಾ ಪ್ರಚಾರಕ್ಕಾಗಿ ಪ್ರಭಾಸ್ ಮಾಡಿದ್ದ ಆ ಪೋಸ್ಟ್ ಬಗ್ಗೆ ಸಾಕಷ್ಟು ಜನ ನನಗೆ ಫೋನ್ ಮಾಡಿ ಕೇಳಿದ್ದರು. ನಾನು ಇಲ್ಲ, ಸ್ವಲ್ಪ ಕಾಯಿರಿ. ಅದು ಏನು ಎನ್ನುವುದು ಗೊತ್ತಾಗುತ್ತದೆ. ಆತ ಹೇಗೆ ಅಂತ ಗೊತ್ತಲ್ವಾ? ಮದುವೆ ವಿಚಾರದ ಬಗ್ಗೆ ಈ ರೀತಿ ಎಲ್ಲಾ ಪೋಸ್ಟ್ ಮಾಡಿ ಹೇಳುವವನಲ್ಲ, ಏನೇನೋ ಅಂದುಕೊಳ್ಳಬೇಡಿ ಎಂದು ಹೇಳಿದ್ದೆ" ಎಂದಿದ್ದಾರೆ.

Krishnam Raju Wife Shyamala Devi interesting Comments About Prabhas And Anushka Marriage

"ಆತ ಬಹಳ ಬ್ಯುಸಿಯಾಗಿದ್ದಾನೆ. ಆತನ ಗಮನವೆಲ್ಲಾ ಸಿನಿಮಾಗಳ ಮೇಲಿದೆ. ಹಾಗಾಗಿ ಮದುವೆ ಆಲೋಚನೆ ಬಂದಿಲ್ಲ. ಆ ಆಲೋಚನೆ ಬಂದಾಗ ಮದುವೆ ಆಗುತ್ತಾನೆ. ಪ್ರಭಾಸ್‌- ಅನುಷ್ಕಾ ಶೆಟ್ಟಿ ಮದುವೆ ಎನ್ನುವುದೆಲ್ಲಾ ವದಂತಿ ಅಷ್ಟೆ. ಸ್ಟಾರ್‌ ನಟ- ನಟಿಯರು ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡು ಹಿಟ್ ಆದರೆ ಇಬ್ಬರು ಮದುವೆ ಆಗುತ್ತಾರೆ ಎಂದು ಸುದ್ದಿ ಆಗುವುದು ಸಹಜ. ಆದರೆ ನಿಜ ಏನು ಎನ್ನುವುದು ನಮಗೆ ಗೊತ್ತು. ಆತನ ಮದುವೆಗೆ ದೊಡ್ಡಪ್ಪ ಕೃಷ್ಣಂರಾಜು ಕೂಡ ಬಹಳ ಪ್ರಯತ್ನಿಸಿದರು. ಆದರೆ ಇನ್ನು ಸಾಧ್ಯವಾಗಲಿಲ್ಲ"

"ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳ್ತಾನೆ. ಮದುವೆ ಬಗ್ಗೆ ವಿರಕ್ತಿ ಇಲ್ಲ, ಹೆಣ್ಣು ಮಕ್ಕಳ ಬಗ್ಗೆ, ಮದುವೆ ಬಗ್ಗೆ ಬಹಳ ಗೌರವವಿದೆ. ಆದರೆ ಮದುವೆ ಯಾವಾಗ ಎನ್ನುವುದು ಮಾತ್ರ ಆ ದೇವರಿಗೆ ಗೊತ್ತು. ಹೆಂಡ್ತಿ ಇದ್ದರೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ದೊಡ್ಡಪ್ಪ ಹೇಳುತ್ತಿದ್ದರು. ಪ್ರಭಾಸ್‌ಗೆ ಕೂಡ ಎಲ್ಲಾ ಗೊತ್ತಿದೆ. ಆದರೆ ಸಮಯ ಬರಬೇಕು" ಎಂದು ಶ್ಯಾಮಲಾ ದೇವಿ ಹೇಳಿದ್ದಾರೆ.

"ಪ್ರಭಾಸ್- ಅನುಷ್ಕ ಮದುವೆ ಎನ್ನುವುದು ಬರೀ ವದಂತಿ. ಒಂದು ವೇಳೆ ಆತ ಇಷ್ಟಪಟ್ಟು ಮಾಡಿಕೊಂಡರೆ ಯಾರು ಬೇಡ ಎನ್ನುತ್ತಾರೆ. ಅದು ಆತನ ಇಷ್ಟ. ಆತ ಖುಷಿಯಾಗಿರಲು, ಉತ್ತಮ ಜೀವನ ಸಾಗಿಸಲು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಬಹಳ ಪ್ರಬುದ್ಧ ಕೂಡ" ಎಂದು ಶ್ಯಾಮಲಾ ದೇವಿ ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದೆ.

More from Filmibeat

English summary
Prabhas aunty Shyamala Devi reacts on his marriage delay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X