ಮತ್ತೆ ಒಂದಾಗುತ್ತಿದೆ ಸೂಪರ್ ಹಿಟ್ 'ಉಪ್ಪೆನಾ' ಜೋಡಿ?
ತೆಲುಗು ಸಿನಿಮಾರಂಗದಲ್ಲಿ ಈ ವರ್ಷ ಗಮನ ಸೆಳೆದ ಸಿನಿಮಾ ಉಪ್ಪೆನಾ. ವರ್ಷದ ಬ್ಲಾಕ್ ಬಸ್ಟರ್ ಸಿನಿಮಾವಾಗಿ ಹೊರಹೊಮ್ಮಿರುವ ಉಪ್ಪೆನಾ ಕೇವಲ ತೆಲುಗು ಮಾತ್ರವಲ್ಲದೆ ಅನ್ಯ ಭಾಷೆಯ ಪ್ರೇಕ್ಷಕರನ್ನು ಸೆಳೆದಿದೆ. ಅದ್ಭುತ ಪ್ರೇಮಕತೆಯ ಈ ಸಿನಿಮಾ ಸಿನಿಪ್ರಿಯರ ಹೃದಯ ಗೆದ್ದಿದೆ.
ಈ ಸಿನಿಮಾ ಮೂಲಕ ನಟಿ, ಕನ್ನಡತಿ ಕೃತಿ ಶೆಟ್ಟಿ ಮತ್ತು ನಟ ವೈಷ್ಣವ್ ತೇಜ್ ರಾತ್ರೋರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಉಪ್ಪೆನಾ ಚಿತ್ರ ಇಬ್ಬರ ಸಿನಿ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಮೊದಲ ಸಿನಿಮಾದಲ್ಲೇ ಸ್ಟಾರ್ ಆಗಿ ಹೊರಹೊಮ್ಮಿರುವ ಇವರು ಈಗ ಟಾಲಿವುಡ್‌ನ ಬೇಡಿಕೆಯ ಕಲಾವಿದರಾಗಿದ್ದಾರೆ.
ನಟಿ ಕೃತಿ ಶೆಟ್ಟಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ನಾನಿ ನಟನೆಯ ಹೊಸ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಕೃತಿ ಶೆಟ್ಟಿ ಭರವಸೆಯ ನಾಯಕಿಯಾಗಿದ್ದಾರೆ. ಅಂದಹಾಗೆ ಕೃತಿ ಮತ್ತು ವೈಷ್ಣವ್ ತೇಜ್ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.

ಟಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಬ್ಯಾನರ್‌ನಲ್ಲಿ ಉಪ್ಪೆನಾ ಸಿನಿಮಾ ಮೂಡಿಬಂದಿತ್ತು. ಇದೀಗ ಇದೇ ಮೈತ್ರಿ ಮೂವಿಸ್ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದು, ವೈಷ್ಣವ್ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಚಿತ್ರಕ್ಕೆ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ.
ಆದರೆ ಈ ಬಗ್ಗೆ ಮೈತ್ರಿ ಮೂವಿಸ್ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಸದ್ಯದಲ್ಲೇ ಹೊಸ ಸಿನಿಮಾದ ಬಗ್ಗೆ ಬಹಿರಂಗ ಪಡಿಸಲಿದ್ದಾರಂತೆ. ಸಂಚಲನ ಮೂಡಿಸಿದ ಈ ಜೋಡಿಯನ್ನು ಮತ್ತೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದೆ. ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಮೂಲಕ ವೈಷ್ಣವ್ ಮತ್ತು ಕೃತಿ ಮೋಡಿ ಮಾಡುತ್ತಾರಾ ಎಂದು ಕಾದು ನೋಡಬೇಕು.


Click it and Unblock the Notifications











