For Quick Alerts
  ALLOW NOTIFICATIONS  
  For Daily Alerts

  ಕೃತಿ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ: ಹ್ಯಾಟ್ರಿಕ್ ಸೋಲುಂಡ ನಟಿ ಕೈನಲ್ಲಿರುವುದು ಎರಡೇ ಸಿನಿಮಾ!

  |

  ಉಪ್ಪೆನಾ ಚಿತ್ರದ ಪೂರ್ಣ ಪ್ರಮಾಣದ ನಾಯಕಿಯಾದ ನಟಿಸಿ ಮೊದಲ ಚಿತ್ರದಲ್ಲಿಯೇ ನೂರು ಕೋಟಿ ಕ್ಲಬ್ ಸೇರಿದ್ದ ನಟಿ ಕೃತಿ ಶೆಟ್ಟಿಗೆ ಇಂದು ( ಸೆಪ್ಟೆಂಬರ್ 21 ) ಹುಟ್ಟುಹಬ್ಬದ ಸಂಭ್ರಮ. ಬೇಬಮ್ಮ ಎಂಬ ಪಾತ್ರದಲ್ಲಿ ನಟಿಸಿದ್ದ ಹದಿನೇಳು ವರ್ಷದ ಕೃತಿ ಶೆಟ್ಟಿ ನಟನೆಗೆ ಸಿನಿ ರಸಿಕರು ಫುಲ್ ಮಾರ್ಕ್ಸ್ ನೀಡಿದ್ದರು. ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರ ಸೆನ್ಸೇಷನ್ ಹುಟ್ಟುಹಾಕಿತ್ತು ಎಂದೇ ಹೇಳಬಹುದು. ಹೀಗೆ ಮೊದಲ ಚಿತ್ರದಲ್ಲಿಯೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದ ಕೃತಿ ಶೆಟ್ಟಿ ಸಾಲು ಸಾಲು ಆಫರ್‌ಗಳನ್ನು ಪಡೆದುಕೊಂಡರು.

  ಮೊದಲ ಚಿತ್ರದಲ್ಲಿಯೇ ಅಭಿಮಾನಿ ಬಳಗವನ್ನು ಸಂಪಾದಿಸಿದ ಕೃತಿ ಶೆಟ್ಟಿ ಎರಡನೇ ಚಿತ್ರದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಜತೆಗೆ ಶ್ಯಾಮ್ ಸಿಂಗಾ ರಾಯ್ ಚಿತ್ರದಲ್ಲಿ ನಟಿಸಿದ್ದರು ಹಾಗೂ ಮೂರನೇ ಚಿತ್ರ ಬಂಗಾರ್ರಾಜುವಿನಲ್ಲಿ ನಾಗ ಚೈತನ್ಯಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಈ ಪೈಕಿ ಶ್ಯಾಮ್ ಸಿಂಗಾ ರಾಯ್ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಹಿಟ್ ಆಗದಿದ್ದರೂ ಸಹ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಂಡಿತ್ತು ಹಾಗೂ ಬಂಗಾರ್ರಾಜು ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು.

  ಹೀಗೆ ತನ್ನ ಮೊದಲ ಮೂರು ಚಿತ್ರಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಕೃತಿ ಶೆಟ್ಟಿಗೆ ನಂತರ ತೆರೆಕಂಡ ಮೂರು ಚಿತ್ರಗಳು ಒತ್ತಡಕ್ಕೆ ದೂಡಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಕೃತಿ ಶೆಟ್ಟಿ ಅಭಿನಯದ ನಾಲ್ಕನೇ ಚಿತ್ರ 'ದ ವಾರಿಯರ್' ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಮೂಡಿ ಬಂದಿತ್ತು, ಈ ಮೂಲಕ ಕಾಲಿವುಡ್‌ಗೂ ಸಹ ಒಂದು ರೀತಿಯಲ್ಲಿ ಕೃತಿ ಕಾಲಿಟ್ಟಿದ್ದರು. ಆದರೆ, ಈ ಸಿನಿಮಾ ಮಕಾಡೆ ಮಲಗಿತ್ತು, ಅದೇ ಹಳೇ ದ್ವೇಷದ ಕತೆಯನ್ನು ಹೊಂದಿದ್ದ ಚಿತ್ರವನ್ನು ವೀಕ್ಷಕರು ತಳ್ಳಿಹಾಕಿದ್ದರು ಹಾಗೂ ಕೃತಿ ಶೆಟ್ಟಿ ಮೊದಲ ಬಾರಿಗೆ ಬಾಕ್ಸ್ ಆಫೀಸ್ ಹಾಗೂ ವೀಕ್ಷಕರ ಪ್ರತಿಕ್ರಿಯೆ ಎರಡರಲ್ಲಿಯೂ ಮಣ್ಣು ಮುಕ್ಕಿದ್ದರು.

  ನಂತರ ಕೃತಿ ಶೆಟ್ಟಿ ಅಭಿನಯದ ಐದನೇ ಚಿತ್ರ 'ಮಾಚೆರ್ಲಾ ನಿಯೋಜಕವರ್ಗಂ' ತೆರೆ ಕಂಡಿತು. ಈ ಚಿತ್ರ ಹೇಳ ಹೆಸರಿಲ್ಲದಂತೆ ಚಿತ್ರಮಂದಿರಗಳಿಂದ ಕಾಣೆಯಾಗಿತ್ತು ಹಾಗೂ ಕಳೆದ ವಾರವಷ್ಟೇ ತೆರೆಕಂಡ 'ಆ ಅಮ್ಮಾಯಿ ಗುರುಂಚಿ ಮೀಕು ಚೆಪ್ಪಾಲಿ' ಎಂಬ ಕೃತಿ ಶೆಟ್ಟಿಯ ಆರನೇ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರ ಕೂಡ ನಿರಾಸೆ ಮೂಡಿಸಿ ಮೊದಲ ದಿನವೇ ಸೋಲಿನ ರುಚಿ ಕಂಡಿತ್ತು. ಹೀಗೆ ಕೃತಿ ಶೆಟ್ಟಿ ಎರಡು ವರ್ಷಗಳಲ್ಲಿಯೇ ಅತಿದೊಡ್ಡ ಸಕ್ಸಸ್ ಹಾಗೂ ಹ್ಯಾಟ್ರಿಕ್ ಸೋಲುಗಳನ್ನು ಕಂಡಿದ್ದು, ಸದ್ಯ ಕೈನಲ್ಲಿ ಕೇವಲ ಎರಡೇ ಎರಡು ಸಿನಿಮಾಗಳನ್ನು ಮಾತ್ರ ಹೊಂದಿದ್ದಾರೆ.

  ಉಪ್ಪೆನಾ ಹಿಟ್ ಆದ ಬಳಿಕ ಪೂಜಾ ಹೆಗ್ಡೆಗೆ ಪೈಪೋಟಿ ನೀಡುವ ನಟಿ ಬಂದಿದ್ದಾಳೆ, ಮಹೇಶ್ ಬಾಬು, ಎನ್‌ಟಿಆರ್ ಜತೆಗೆ ಈಕೆ ನಟಿಸುವುದು ಖಚಿತ ಎನ್ನಲಾಗಿತ್ತು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಕೃತಿ ಶೆಟ್ಟಿ ಈ ಹಂತ ತಲುಪುವುದು ಕಷ್ಟ ಎನ್ನಬಹುದು. ಸದ್ಯ ಹ್ಯಾಟ್ರಿಕ್ ಸೋಲುಂಡಿರುವ ಕೃತಿ ಶೆಟ್ಟಿ ವೆಂಕಟ್ ಪ್ರಭು ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ ಹಾಗೂ ತಮಿಳು ನಟ ಸೂರ್ಯ ಅಭಿನಯದ ವನಂಗಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಕೈನಲ್ಲಿರುವ ಈ ಎರಡು ಚಿತ್ರಗಳು ಗೆದ್ದರೆ ಮಾತ್ರ ಕೃತಿ ಶೆಟ್ಟಿ ಸ್ಟಾರ್ ನಟಿಯಾಗಿ ಮೇಲೇರಲಿದ್ದಾರೆ, ಒಂದುವೇಳೆ ಸೋತರೆ ಆಫರ್ ತಗ್ಗಬಹುದು.

  English summary
  Actress Krithi Shetty has only 2 projects in her hand after giving 3 back to back flops. Read on

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X