ಕೃತಿ ಶೆಟ್ಟಿಗೆ ಬಂಪರ್ ಆಫರ್; ಸ್ಟಾರ್ ನಟನ ಚಿತ್ರದಲ್ಲಿ 'ಉಪ್ಪೆನಾ' ಸುಂದರಿ

ಚೊಚ್ಚಲ ಚಿತ್ರದಲ್ಲೇ ದಕ್ಷಿಣ ಭಾರತೀಯ ಸಿನಿ ಪ್ರಿಯರ ಹೃದಯ ಗೆದ್ದವರು ಕರಾವಳಿ ಸುಂದರಿ ಕೃತಿ ಶೆಟ್ಟಿ. ತೆಲುಗಿನ ಉಪ್ಪೆನಾ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕೃತಿಗೆ ಮೊದಲ ಚಿತ್ರವೇ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತು.

ಉಪ್ಪೆನಾ ಸೂಪರ್ ಸಕ್ಸಸ್ ಬಳಿಕ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ಕೃತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೊಂದೇ ಸಿನಿಮಾ ಮುಗಿಸಿ ಹೊಸ ಸಿನಿಮಾಗೆ ಸಹಿ ಮಾಡುತ್ತಾ ಮುನ್ನುಗ್ಗುತ್ತಿರುವ ಕೃತಿ ಈಗ ಮತ್ತೊಂದು ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಸಿನಿಮಾದಲ್ಲೇ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಸಂಪಾದಿಸಿರುವ ಕೃತಿ ಈಗ ತೆಲುಗಿನ ಸ್ಟಾರ್ ನಟ ನಾಗ ಚೈತನ್ಯ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಕೃತಿ. ಮುಂದೆ ಓದಿ...

ನಾಗಾರ್ಜುನ-ನಾಗ ಚೈತನ್ಯ ಸಿನಿಮಾದಲ್ಲಿ ಕೃತಿ

ನಾಗಾರ್ಜುನ-ನಾಗ ಚೈತನ್ಯ ಸಿನಿಮಾದಲ್ಲಿ ಕೃತಿ

ವರಮಹಾಲಕ್ಷ್ಮಿ (ಆಗಸ್ಟ್ 20) ಹಬ್ಬದ ದಿನ ಸೆಟ್ಟೇರಿರುವ ಹೊಸ ಚಿತ್ರ 'ಬಂಗಾರಾಜು' ಸಿನಿಮಾದಲ್ಲಿ ನಾಗ ಚೈತನ್ಯ ಮತ್ತು ಅವರ ತಂದೆ ಅಕ್ಕಿನೇನಿ ನಾಗಾರ್ಜುನ ಇಬ್ಬರು ನಟಿಸುತ್ತಿದ್ದಾರೆ. ತಂದೆ ಮಗನ ಹೊಸ ಚಿತ್ರಕ್ಕೆ ನಾಯಕಿಯಾಗಿ ಕೃತಿ ಶೆಟ್ಟಿ ಸೇರ್ಪಡೆಯಾಗಿದ್ದಾರೆ. ಅಂದಹಾಗೆ ಈ ಹೊಸ ಸಿನಿಮಾಗೆ ಕಲ್ಯಾಣ್ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಅಕ್ಕಿನೇನಿ ನಾಗಾರ್ಜುನ ಅವರ ಹೋಮ್ ಬ್ಯಾನರ್ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ನಿರ್ಮಾಣವಾಗುತ್ತಿದೆ.

ಹೈದರಾಬಾದ್ ನಲ್ಲಿ ಅದ್ದೂರಿ ಮುಹೂರ್ತ

ಹೈದರಾಬಾದ್ ನಲ್ಲಿ ಅದ್ದೂರಿ ಮುಹೂರ್ತ

ಇಂದು (ಆಗಸ್ಟ್ 20) ಹೈದರಾಬಾದ್ ನಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭ ಮಾಡುವ ಮೂಲಕ ಬಂಗಾರಾಜು ಸಿನಿಮಾಗೆ ಚಾಲನೆ ನೀಡಲಾಗಿದೆ. ಸಮಾರಂಭದಲ್ಲಿ ಅಕ್ಕಿನೇನಿ ನಾಗಾರ್ಜುನ, ನಾಗ ಚೈತನ್ಯ ಮತ್ತು ಕೃತಿ ಶೆಟ್ಟಿ ಸೇರಿದಂತೆ ಇಡೀ ಸಿನಿಮಾತಂಡ ಹಾಜರಿತ್ತು.

ಕಲ್ಯಾಣ್ ಕೃಷ್ಣ ನಿರ್ದೇಶಕ

ಕಲ್ಯಾಣ್ ಕೃಷ್ಣ ನಿರ್ದೇಶಕ

'ಬಂಗಾರಾಜು' ನಿರ್ದೇಶಕ ಕಲ್ಯಾಣ್ ಕೃಷ್ಣ ಅವರ ನಾಲ್ಕನೆ ಸಿನಿಮಾ ಇದಾಗಿದೆ. ಈ ಮೊದಲು 2016ರಲ್ಲಿ ಬಿಡುಗಡೆಯಾದ 'ಸೊಗ್ಗಡೆ ಚಿನ್ನಿ ನಯನಾ' ಸಿನಿಮಾ ಮೂಲಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಕಲ್ಯಾಣ್ ಕೃಷ್ಣ ಮೊದಲ ಸಿನಿಮಾದಲ್ಲೇ ಸ್ಟಾರ್ ನಟ ನಾಗಾರ್ಜುನ ಅವರಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಆಗಿದ್ದರು. ಬಳಿಕ ಎರಡು ಸಿನಿಮಾಗಳನ್ನು ಮಾಡಿರುವ ಕಲ್ಯಾಣ್ ಕೃಷ್ಣ ಇದೀಗ ಮತ್ತೆ ನಾಗಾರ್ಜುನ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಗ ಚೈತನ್ಯ ಇರುವುದು ಮತ್ತೊಂದು ವಿಶೇಷ.

ನಾಗ ಚೈತನ್ಯ ಪ್ರೇಯಸಿಯಾಗಿ ಕೃತಿ ನಟನೆ

ನಾಗ ಚೈತನ್ಯ ಪ್ರೇಯಸಿಯಾಗಿ ಕೃತಿ ನಟನೆ

ಅಂದಹಾಗೆ ಬಂಗಾರಾಜು, ಸೊಗ್ಗಡೆ ಚಿನ್ನಿ ನಯನಾ ಚಿತ್ರದ ಪ್ರಿಕ್ವೆಲ್ ಎಂದು ಹೇಳಲಾಗುತ್ತಿದೆ. ಸೊಗ್ಗಡೆ ಚಿನ್ನಿ ನಯನಾ ಚಿತ್ರದಲ್ಲಿ ನಾಗಾರ್ಜುನ ದ್ವಿಪಾತ್ರದಲ್ಲಿ ನಟಿಸಿದ್ದರು. ನಾಗಾರ್ಜುನಗೆ ಜೋಡಿಯಾಗಿ ರಮ್ಯಾ ಕೃಷ್ಣ ಮತ್ತು ಲಾವಣ್ಯ ತ್ರಿಪಾಟಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಾಗ ಚೈತನ್ಯಗೆ ಜೋಡಿಯಾಗಿ ಉಪ್ಪೇನಾ ಸುಂದರಿ ಕೃತಿ ಶೆಟ್ಟಿ ನಟಿಸುತ್ತಿದ್ದು, ನಾಗ ಚೈತನ್ಯ ಪ್ರೇಯಸಿ ಪಾತ್ರದಲ್ಲಿ ಕೃತಿ ಕಾಣಿಸಿಕೊಳ್ಳುತ್ತಿದ್ದಾರೆ.

'ಮನಂ' ಸಿನಿಮಾ ಬಳಿಕ ಮತ್ತೆ ತೆರೆಮೇಲೆ ಅಪ್ಪ-ಮಗ

'ಮನಂ' ಸಿನಿಮಾ ಬಳಿಕ ಮತ್ತೆ ತೆರೆಮೇಲೆ ಅಪ್ಪ-ಮಗ

2014ರಲ್ಲಿ ಬಂದ ಮನಂ ಸಿನಿಮಾ ಬಳಿಕ ನಾಗಾರ್ಜುನ ಮತ್ತು ನಾಗ ಚೈತನ್ಯ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. ದೊಡ್ಡ ಸ್ಟಾರ್ ಕಾಸ್ಟ್ ಮತ್ತು ಹಿಟ್ ನಿರ್ದೇಶಕ 'ಬಂಗಾರಾಜು' ಸಿನಿಮಾ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಇನ್ನು ನಟಿ ಕೃತಿ ಉಪ್ಪೇನಾ ಸೂಪರ್ ಸಕ್ಸಸ್ ಬಳಿಕ ನಟ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾವನ್ನು ಮುಗಿಸಿದ್ದಾರೆ. ಸದ್ಯ ನಟ ಸುದೀರ್ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಮತ್ತೊಂದು ಸಿನಿಮಾ ಕೃತಿ ಕೈಯಲ್ಲಿದೆ. ಇದೀಗ ನಾಗ ಚೈತನ್ಯ ಮತ್ತು ನಾಗಾರ್ಜುನ ಜೊತೆ ನಟಿಸಲು ಸಜ್ಜಾಗಿದ್ದಾರೆ.

ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಕೃತಿ

ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಕೃತಿ

ಅಂದಹಾಗೆ ಇತ್ತೀಚಿಗಷ್ಟೆ ಕಿರುತೆರೆಯ ಧಾರಾವಾಹಿ ಪ್ರೋಮೋದಲ್ಲಿ ಕಾಣಿಸಿಕಳ್ಳುವ ಮೂಲಕ ಕೃತಿ ಅಚ್ಚರಿ ಮೂಡಿಸಿದ್ದರು. ಪುಟ್ಟ ಪ್ರೋಮೋದಲ್ಲಿ ಕಾಣಿಸಿಕೊಳ್ಳಲು ಕೃತಿ ಭರ್ಜರಿ ಸಂಭಾವನೆ ಕೂಡ ಪಡೆದಿದ್ದರು ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮೂಲಗಳ ಪ್ರಕಾರ ಪ್ರೋಮೋದಲ್ಲಿ ನಟಿಸಲು 1 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನುವ ಸುದ್ದಿ ಇದೆ.

ನಾಗ ಚೈತನ್ಯ ಬಳಿ ಇರುವ ಸಿನಿಮಾಗಳು

ನಾಗ ಚೈತನ್ಯ ಬಳಿ ಇರುವ ಸಿನಿಮಾಗಳು

ನಾಗ ಚೈತನ್ಯ ಸದ್ಯ ಬಹುನಿರೀಕ್ಷೆಯ ಲವ್ ಸ್ಟೋರಿ ಸಿನಿಮಾ ಬಿಡುಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಮೊದಲ ಬಾರಿಗೆ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ ಸಿನಿಮಾವಾಗಿದೆ. ಈ ಸಿನಿಮಾ ಮುಂದಿನ ತಿಂಗಳ ಗಣೇಶ ಹಬ್ಬದ ದಿನ ತೆರೆಗೆ ಬರುತ್ತಿದೆ. ಈ ಸಿನಿಮಾ ಜೊತೆಗೆ ನಾಗ ಚೈತನ್ಯ ಹಿಂದಿ ಸಿನಿಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಹಿಂದಿಯ ಚೊಚ್ಚಲ ಸಿನಿಮಾದಲ್ಲಿ ಆಮೀರ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

More from Filmibeat

English summary
Uppena Actress Krithi Shetty joins Akkineni Nagarjuna and Naga Chaitanya new film Bangarraju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X