ಮೆಗಾ ಫ್ಯಾಮಿಲಿ ನಟನ ಸಿನಿಮಾಕ್ಕೆ ಒಲ್ಲೆ ಎಂದ ಕನ್ನಡತಿ ಕೃತಿ ಶೆಟ್ಟಿ

'ಉಪ್ಪೆನ' ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದಿರುವ ಕನ್ನಡತಿ ಕೃತಿ ಶೆಟ್ಟಿಗೆ ಈಗ ಅವಕಾಶಗಳ ಸುರಿಮಳೆಯೇ ಆಗುತ್ತಿದೆ. ಆದರೆ ಎಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಈ ನಟಿ.

ಮೊದಲ ಸಿನಿಮಾವನ್ನೇ ಮೆಗಾಸ್ಟಾರ್ ಕುಟುಂಬದ ಹೀರೋ ಜೊತೆಗೆ ಮಾಡಿದ್ದ ಕೃತಿ ಶೆಟ್ಟಿಗೆ ಈಗ ಮತ್ತೊಬ್ಬ ಮೆಗಾಸ್ಟಾರ್ ಕುಟುಂಬದ ನಟನೊಂದಿಗೆ ನಟಿಸುವ ಅವಕಾಶ ಬಂದಿದೆ. ಆದರೆ ಕೃತಿ ಶೆಟ್ಟಿ ಯಾಕೋ ಆ ಸಿನಿಮಾದಿಂದ ಹಿಂದೆ ಸರಿದಿದ್ದಾರೆ.

'ಉಪ್ಪೆನ' ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದ ವೈಷ್ಣವ್ ತೇಜ್ ಜೊತೆ ನಟಿಸಿದ್ದ ಕೃತಿಗೆ ವೈಷ್ಣವ್ ಅವರ ಸಹೋದರ ಸಾಯಿ ಧರಂ ತೇಜ್ ಜೊತೆ ನಟಿಸುವ ಅವಕಾಶ ಬಂದಿತ್ತು. ಆದರೆ ತಾವು ಆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ ಕೃತಿ.

Krithi Shetty Said No To Sai Dharam Tejs New Movie

ಸಾಯಿ ಧರಂ ತೇಜ್ ನಟಿಸಲಿರುವ ಹದಿನೈದನೇ ಸಿನಿಮಾಕ್ಕೆ ಕೃತಿ ಶೆಟ್ಟಿಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿರುವ ಕೃತಿ ಶೆಟ್ಟಿ ಪ್ರಸ್ತುತ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸುವತ್ತ ಚಿತ್ತ ಹರಿಸಿದ್ದಾರೆ.

Recommended Video

Sonu Sood ತಮ್ಮ ಅಭಿಮಾನಿಗಳಿಗೆ ಹೀಗೆ ಮಾಡಬೇಡಿ ಅಂದಿದ್ದಾರೆ | Filmibeat Kannada

'ಉಪ್ಪೆನ' ಸಿನಿಮಾದ ನಂತರ ನಾನಿ, ಸಾಯಿ ಪಲ್ಲವಿ ನಟಿಸುತ್ತಿರುವ 'ಶ್ಯಾಮ್ ಸಿಂಗ ರಾಯ್' ಸಿನಿಮಾವನ್ನು ಒಪ್ಪಿಕೊಂಡ ಕೃತಿ. ಅದರ ನಂತರ ರಾಮ್ ಪೋತಿನೇನಿ ನಟಿಸಿ ಎನ್.ಲಿಂಗುಸ್ವಾಮಿ ನಿರ್ದೇಶಿಸುತ್ತಿರುವ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇವುಗಳೆರಡರ ಜೊತೆಗೆ ಮೋಹನ್ ಕೃಷ್ಣ ನಿರ್ದೇಶಿಸುತ್ತಿರುವ 'ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ' ಎಂಬ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ.

More from Filmibeat

English summary
Uppena star Krithi Shetty said no to Sai Dharam Tej's new movie. She already acting in three Telugu movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X