Kriti shetty: ಬಾಲಯ್ಯನನ್ನು ಬಿಟ್ಟು ಪವನ್ ಕಲ್ಯಾಣ್ ಹಿಂದೆ ಕೃತಿ ಶೆಟ್ಟಿ!

ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅತಿ ವೇಗವಾಗಿ ಯಶಸ್ಸು ಪಡೆದು ಕೃತಿ ಶೆಟ್ಟಿ ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ. ಮೊದಲ ಚಿತ್ರದ ಮೂಲಕವೇ ನಾಯಕಿ ಕೃತಿ ಶೆಟ್ಟಿ ಲಕ್ ಕುದುರಿದೆ. ಚೊಚ್ಚಲ ಚಿತ್ರ 'ಉಪ್ಪೇನ' ಆಕೆಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿದೆ. ಬಳಿಕ ಕೃತಿಗೆ ಸಾಲು ಸಾಲು ದೊಡ್ಡ ಚಿತ್ರಗಳ ಆಫರ್‌ಗಳು ಬರ್ತಿವೆ. ಹಾಗೆ ಇಲ್ಲಿ ತನಕ ಕೃತಿ ಮಾಡಿರುವ ಚಿತ್ರಗಳು ಕೂಡ ಯಶಸ್ಸು ಕಂಡಿವೆ.

ಕೃತಿ ಶೆಟ್ಟಿ ಹೆಸರು ಈಗ ಬಿಗ್‌ ಸ್ಟಾರ್‌ಗಳ ಜೊತೆಗೆ ಕೇಳಿ ಬರ್ತಿದೆ. ಆದರೆ ಬಂದ ಸಿನಿಮಾಗಳನ್ನೆಲ್ಲ ಕೃತಿ ಒಪ್ಪಿಕೊಳ್ಳುತ್ತಿಲ್ಲ ಸಿನಿಮಾಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುವ ಕೃತಿ, ಇತ್ತೀಚೆಗೆ ಸಿನಿಮಾಗಳನ್ನು ರಿಜೆಕ್ಟ್ ಮಾಡಿಯೇ ಹೆಚ್ಚು ಸುದ್ದಿ ಆಗಿದ್ದರು. ತನ್ನ ಪಾಲಿಗೆ ಬಂದ ಸ್ಟಾರ್ ಸಿನಿಮಾಗಳನ್ನು ಕೂಡ ಕೃತಿ ರಿಜೆಕ್ಟ್ ಮಾಡಿದ್ದರು ಎಂದು ಸುದ್ದಿ ಆಗಿತ್ತು.

ನಟ ಬಾಲಯ್ಯನ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಕೃತಿ ಎಂದು ಸುದ್ದಿ ಆಗಿದ್ದರು. ಆದರೆ ಈಗ ಪವನ್ ಕಲ್ಯಾಣ್ ಚಿತ್ರವನ್ನು ಒಪ್ಪಿಕೊಂಡು ಸುದ್ದಿ ಆಗಿದ್ದಾರೆ. ಬಾಲಯ್ಯ ಬೇಡ ಆದರೆ ಪವನ್ ಕಲ್ಯಾಣ್ ಚಿತ್ರ ಯಾಕೆ ಒಪ್ಪಿಕೊಂಡರು ಎನ್ನುವ ಚರ್ಚೆ ಹುಟ್ಟಿ ಕೊಂಡಿದೆ. ಇದಕ್ಕೆ ಕಾರಣ ಅಂದು ಕೃತಿ ಬಾಲಯ್ಯ ಚಿತ್ರವನ್ನು ತಿರಸ್ಕರಿಸಲು ನೀಡಿದ್ದ ಕಾರಣ.

ಪವನ್ ಕಲ್ಯಾಣ್ ಚಿತ್ರವನ್ನು ಒಪ್ಪಿದ ಕೃತಿ ಶೆಟ್ಟಿ!

ಪವನ್ ಕಲ್ಯಾಣ್ ಚಿತ್ರವನ್ನು ಒಪ್ಪಿದ ಕೃತಿ ಶೆಟ್ಟಿ!

ನಟಿ ಕೃತಿ ಶೆಟ್ಟಿ ಸದ್ಯ ಸಿನಿಮಾರಂಗದಲ್ಲಿ ಬೇಡಿಕೆ ಇರುವ ನಟಿ. ಆದರೆ ಬಂದ ಸಿನಿಮಾಗಳನ್ನೆಲ್ಲಾ ಕೃತಿ ಒಪ್ಪಿಕೊಳ್ಳುತ್ತಾ ಇಲ್ಲ. ಈಗ ಪವನ್ ಕಲ್ಯಾಣ್ ಜೊತೆಗೆ ಅಭಿನಯಿಸಲು ಕೃತಿ ಒಪ್ಪಿಕೊಂಡಿದ್ದಾರೆ. ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಕೃತಿ ನಾಯಕಿ ಆಗುತ್ತಿದ್ದಾರೆ. ಪವನ್ ಕಲ್ಯಾಣ್ ಅಂತಹ ಸ್ಟಾರ್ ಚಿತ್ರ ಸಿಕ್ಕರೆ ಯಾವ ನಟಿ ತಾನೆ ಬೇಡ ಎನ್ನುತ್ತಾರೆ, ಹಾಗಾಗಿ ಕೃತಿ ಕೂಡ ಕಣ್ಣು ಮುಚ್ಚಿಕೊಂಡು ಈ ಚಿತ್ರ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಅದರೆ ಇಲ್ಲಿಯೂ ವಯಸ್ಸಿನ ಅಂತರದ ಬಗ್ಗೆ ಹೆಚ್ಚಾಗಿ ಚರ್ಚೆ ಆಗುತ್ತಿದೆ.

ವಯಸ್ಸಿನ ಅಂತರ: ಬಾಲಯ್ಯನನ್ನು ರಿಜೆಕ್ಟ್ ಮಾಡಿದ ನಟಿ!

ವಯಸ್ಸಿನ ಅಂತರ: ಬಾಲಯ್ಯನನ್ನು ರಿಜೆಕ್ಟ್ ಮಾಡಿದ ನಟಿ!

ನಟ ಬಾಲಯ್ಯ 107ನೇಕ್ಕಾಗಿ ನಟಿ ಕೃತಿ ಶೆಟ್ಟಿಯ ಕಾಲ್ ಶೀಟ್ ಕೇಳಲಾಗಿತ್ತಂತೆ. ಆದರೆ ಬಾಲಯ್ಯ ಜೊತೆಗಿನ ವಯಸ್ಸಿನ ಅಂತರದ ಕಾರಣ ಕೃತಿ ಬಾಲಯ್ಯ ಜೊತೆಗೆ ಅಭಿನಯಿಸಲು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಬಾಲಯ್ಯ ಚಿತ್ರರಂಗದಲ್ಲಿ, ಅಭಿನಯದ ಅನುಭವದಲ್ಲಿ ಮಾತ್ರ ಅಲ್ಲ ವಯಸ್ಸಿನಲ್ಲೂ ಕೂಡ ಕೃತಿಗಿಂತಾ ತುಂಬಾನೇ ಸೀನಿಯರ್. ಆದರೆ ಈಗ ಪವನ್ ಕಲ್ಯಾಣ್ ಸಿನಿಮಾ ಒಪ್ಪಿಕೊಂಡು ಅಚ್ಚರಿಗೆ ಕಾರಣ ಆಗಿದ್ದಾರೆ. ಪವನ್ ಕಲ್ಯಾಣ್ ಮತ್ತು ಕೃತಿ ನಡುವೆಯೂ ವಯಸ್ಸಿನ ಅಂತರ ಕಡಿಮೆ ಏನು ಇಲ್ಲ.

ಪವನ್ ಕಲ್ಯಾನ್ 50, ಕೃತಿಗೆ 18 ವರ್ಷ ವಯಸ್ಸು!

ಪವನ್ ಕಲ್ಯಾನ್ 50, ಕೃತಿಗೆ 18 ವರ್ಷ ವಯಸ್ಸು!

ನಟಿ ಕೃತಿಗೆ ನಟ ಪವನ್ ಕಲ್ಯಾಣ್ ವಯಸ್ಸಿನಲ್ಲಿ ಅರ್ಧದಷ್ಟು ಕೂಡ ವಯಸ್ಸಾಗಿಲ್ಲ. ಪವನ್ ಕಲ್ಯಾಣ್‌ಗೆ 50 ವರ್ಷ ಆದರೆ, ಕೃತಿಗೆ ಇನ್ನೂ 18. ಇವರ ನಡುವೆಯೂ ವಯಸ್ಸಿನ ಅಂತರ ಹೆಚ್ಚಾಗಿ ಇದೆ. ಆದರೂ ಕೂಡ ಕೃತಿ ಪವನ್ ಕಲ್ಯಾಣ್ ಸಿನಿಮಾ ಒಪ್ಪಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ. ಈ ಚಿತ್ರವನ್ನು ಬಿಟ್ಟರೆ ಮತ್ತೊಬ್ಬ ಯಂಗ್ ಹೀರೋ ಜೊತೆಗೆ ಕೃತಿ ಕಾಣಿಸಿಕೊಳ್ಳಲಿದ್ದಾರೆ.

ಸಾಯಿ ಧರಂ ತೇಜ ಜೊತೆಗೆ ಕೃತಿ ಶೆಟ್ಟಿ ಅಭಿನಯ!

ಸಾಯಿ ಧರಂ ತೇಜ ಜೊತೆಗೆ ಕೃತಿ ಶೆಟ್ಟಿ ಅಭಿನಯ!

ನಟಿ ಕೃತಿ ಶೆಟ್ಟಿ ಕೈಯಲ್ಲಿ ಈಗ ಸಾಲು, ಸಾಲು ಸಿನಿಮಾಗಳು ಇವೆ. ನಟಿ ಕೃತಿ ಶೆಟ್ಟಿ ತೆಲುಗಿ ನಟ ಸಾಯಿ ಧರಂ ತೇಜ ಜೊತೆಗೆ ಅಭಿನಯಿಸಲು ಸಜ್ಜಾಗಿದ್ದಾರೆ. ರಸ್ತೆ ಅಪಘಾತದ ಬಳಿಕ ಆಯಿ ಧರಮ ತೇಜ ಮಾಡುತ್ತಿರುವ ಮೊದಲ ಚಿತ್ರದಲ್ಲಿ ನಟಿ ಕೃತಿ ಶೆಟ್ಟಿ ನಾಯಕಿ ಆಗಿರಲಿದ್ದಾರೆ. ಸಾಯಿ ಧರಂ ತೇಜ ಸಹೋದರ ವೈಷ್ಣವ್ ತೇಜ್ ಜೊತೆಗೆ 'ಉಪ್ಪೆನ' ಚಿತ್ರದಲ್ಲಿ ಅಭಿನಯಿಸಿ ಕೃತಿ ಸೈ ಎನಿಸಿ ಕೊಂಡಿದ್ದಾರೆ.

More from Filmibeat

English summary
Krithi Shetty Ok to act with Pawan Kalyan, But This Time no age gap issues. She rejected Balakrishna movie considering age gap.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X