For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ತಂದೆ ಮೊಬೈಲ್‌ನಲ್ಲಿ ಹಿಟ್ ನಿರ್ದೇಶಕನ ಚಿತ್ರ ವಾಲ್‌ಪೇಪರ್! ಯಾರದು?

  |

  ಹಲವು ವರ್ಷಗಳು ಚಿತ್ರರಂಗಲ್ಲಿದ್ದು, ಸತತವಾಗಿ ಸಿನಿಮಾ ಮಾಡಿಯೂ ನೂರಕ್ಕೆ ನೂರು ಪ್ರತಿಶತಃ ಯಶಸ್ಸು ಕಂಡಿರುವ ನಿರ್ದೇಶಕರು ಕೇವಲ ಇಬ್ಬರೇ, ಒಂದು ಹಿಂದಿಯ ರಾಜ್‌ ಕುಮಾರ್ ಹಿರಾನಿ, ಮತ್ತೊಬ್ಬರು ರಾಜಮೌಳಿ.

  ರಾಜಮೌಳಿಯ ಈ ಭರ್ಜರಿ ಯಶಸ್ಸಿನ ಹಿಂದೆ ಅವರ ತಂದೆ ವಿಯೇಂದ್ರ ಪ್ರಸಾದ್ ಅವರು ದೊಡ್ಡ ಯೋಗದಾನವಿದೆ. ರಾಜಮೌಳಿ ಈವರೆಗೆ ನಿರ್ದೇಶಿಸಿರುವ 11 ಸಿನಿಮಾಗಳಲ್ಲಿ ಎರಡು ಸಿನಿಮಾಗಳಿಗೆ ಬಿಟ್ಟು ಮಿಕ್ಕೆಲ್ಲ ಸಿನಿಮಾಗಳಿಗೆ ಕತೆ ಬರೆದಿರುವುದು ಕೆವಿ.ವಿಜಯೇಂದ್ರ ಪ್ರಸಾದ್.

  ರಾಜಮೌಳಿ ಮೊದಲ ಸಿನಿಮಾ 'ಸ್ಟೂಡೆಂಟ್ ನಂಬರ್ 1', ಹಾಗೂ 'ಮರ್ಯಾದ ರಾಮನ್ನ' ಬಿಟ್ಟು ಇನ್ನೆಲ್ಲ ಸಿನಿಮಾಗಳಿಗೆ ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ತಮ್ಮ ಮಗನೇ ದೇಶವೇ ಮೆಚ್ಚುವ ನಿರ್ದೇಶಕನಾಗಿದ್ದರೂ ಸಹ ವಿಜಯೇಂದ್ರ ಪ್ರಸಾದ್‌ರ ಮೆಚ್ಚಿನ ನಿರ್ದೇಶಕ ಬೇರೆಯವರೇ ಇದ್ದಾರೆ. ಅದೂ ಈ ಹೊಸ ಕಾಲದ ನಿರ್ದೇಶಕನೇ ಆ ವ್ಯಕ್ತಿ.

  ಪುರಿ ಚಿತ್ರ ವಿಜಯೇಂದ್ರ ಮೊಬೈಲ್‌ ವಾಲ್‌ಪೇಪರ್

  ಪುರಿ ಚಿತ್ರ ವಿಜಯೇಂದ್ರ ಮೊಬೈಲ್‌ ವಾಲ್‌ಪೇಪರ್

  ವಿಜಯೇಂದ್ರ ಪ್ರಸಾದ್‌ಗೆ ತೆಲುಗಿನ ಸೂಪರ್ ಹಿಟ್‌ ನಿರ್ದೇಶಕ ಪುರಿ ಜಗನ್ನಾಥ್ ಎಂದರೆ ಬಹಳ ಇಷ್ಟವಂತೆ. ಪುರಿ ಜಗನ್ನಾಥ್ ಎಷ್ಟು ಇಷ್ಟವೆಂದರೆ ಆತನ ಚಿತ್ರವನ್ನು ಮೊಬೈಲ್‌ಗೆ ವಾಲ್‌ಪೇಪರ್‌ ಆಗಿ ಇಟ್ಟುಕೊಂಡಿದ್ದಾರೆ ಕೆ.ವಿ.ವಿಜಯೇಂದ್ರ ಪ್ರಸಾದ್. ಈ ವಿಷಯವನ್ನು 'ಅಲಿ ತೋ ಸರದಾಗ' ಹೆಸರಿನ ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ತಮ್ಮ ಮೊಬೈಲ್‌ನಲ್ಲಿ ಪುರಿ ಜಗನ್ನಾಥ್ ಚಿತ್ರವನ್ನು ವಾಲ್‌ಪೇಪರ್ ಆಗಿಟ್ಟುಕೊಂಡಿರುವ ಚಿತ್ರವನ್ನು ಸಹ ತೋರಿಸಿದ್ದಾರೆ.

  ಪುರಿ ಜಗನ್ನಾಥ್ ಪ್ರತಿಭೆ ಕಂಡು ಅಸೂಯೆ: ವಿಜಯೇಂದ್ರ ಪ್ರಸಾದ್

  ಪುರಿ ಜಗನ್ನಾಥ್ ಪ್ರತಿಭೆ ಕಂಡು ಅಸೂಯೆ: ವಿಜಯೇಂದ್ರ ಪ್ರಸಾದ್

  'ನನಗೆ ಇಷ್ಟವಾಗುವ ನಿರ್ದೇಶಕ ಪುರಿ ಜಗನ್ನಾಥ್. ಆತನೆಂದರೆ ನನಗೆ ಅಸೂಯೆ ಸಹ. ಹಾಗಾಗಿ ಆತನ ಚಿತ್ರವನ್ನು ನನ್ನ ಮೊಬೈಲ್‌ನಲ್ಲಿ ವಾಲ್‌ಪೇಪರ್ ಆಗಿ ಇಟ್ಟುಕೊಂಡಿದ್ದೀನಿ. ನನ್ನ ಶತ್ರುವನ್ನು ಸದಾ ನೋಡುತ್ತಿದ್ದು ಆತನಿಗಿಂತಲೂ ಚೆನ್ನಾಗಿ ಸಿನಿಮಾ ಮಾಡಬೇಕು ಎಂದು ನೆನಪು ಮಾಡಿಕೊಳ್ಳುತ್ತಿರುತ್ತೇನೆ ಎಂದಿದ್ದಾರೆ ಕೆ.ವಿ.ವಿಜಯೇಂದ್ರ ಪ್ರಸಾದ್.

  ರಾಜಮೌಳಿ ಪತ್ನಿ ಸಹ ಪುರಿ ಜಗನ್ನಾಥ್ ಅಭಿಮಾನಿ

  ರಾಜಮೌಳಿ ಪತ್ನಿ ಸಹ ಪುರಿ ಜಗನ್ನಾಥ್ ಅಭಿಮಾನಿ

  ವಿಜಯೇಂದ್ರ ಪ್ರಸಾದ್ ಮಾತ್ರವಲ್ಲ ರಾಜಮೌಳಿ ಪತ್ನಿ ರಮಾ ಸಹ ಪುರಿ ಜಗನ್ನಾಥ್ ಅಭಿಮಾನಿ. ಒಮ್ಮೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜಮೌಳಿ, 'ಒಂದು ಸಿನಿಮಾ ಮಾಡಲು ವರ್ಷಗಳೇ ತೆಗೆದುಕೊಳ್ಳುತ್ತೀಯ. ಹೋಗಿ ಪುರಿ ಜಗನ್ನಾಥ್ ಬಳಿ ಕಲಿ ಕೆಲವೇ ತಿಂಗಳಲ್ಲಿ ಇಂಡಸ್ಟ್ರಿ ರೆಕಾರ್ಡ್‌ ಹಿಟ್ ಆಗುವ ಸಿನಿಮಾ ಹೇಗೆ ಮಾಡುತ್ತಾರೆ ಎಂಬುದನ್ನು ಕಲಿತುಕೊ ಎಂದು ನನ್ನ ಪತ್ನಿ ಹೇಳುತ್ತಿರುತ್ತಾರೆ' ಎಂದಿದ್ದರು ರಾಜಮೌಳಿ.

  ನ್ಯಾಷನಲ್ ಕ್ರಶ್ ರಶ್ಮಿಕಾಗೆ ಪ್ರಭಾಸ್ ಮೇಲೆ ಕ್ರಶ್ | Filmibeat Kannada
  ಕನ್ನಡದಲ್ಲಿಯೂ ಸಿನಿಮಾ ನಿರ್ದೇಶಿಸಿದ್ದಾರೆ ಪುರಿ

  ಕನ್ನಡದಲ್ಲಿಯೂ ಸಿನಿಮಾ ನಿರ್ದೇಶಿಸಿದ್ದಾರೆ ಪುರಿ

  ಪುರಿ ಜಗನ್ನಾಥ್ ತೆಲುಗಿನ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಕನ್ನಡದಲ್ಲಿಯೂ 'ಅಪ್ಪು', 'ಯುವರಾಜ' ಸಿನಿಮಾಗಳನ್ನು ನಿರ್ದೇಶಿಸಿರುವ ಪುರಿ, ತೆಲುಗಿನಲ್ಲಿ 'ಪೋಕಿರಿ', 'ಅಮ್ಮಾ ನಾನ್ನ ಓ ತಮಿಳಮ್ಮಾಯಿ', 'ಟೆಂಪರ್', 'ಬ್ಯುಸಿನೆಸ್‌ ಮ್ಯಾನ್' ಇನ್ನೂ ಹಲವಾರು ಸಿನಿಮಾಗಳ್ನು ನಿರ್ದೇಶಕ ಮಾಡಿದ್ದಾರೆ.

  English summary
  Rajamouli father KS Vijayendra Prasad have Puri Jagannath photo as his mobile wallpaper. He said Puri Jagannadh is the best director and story writer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X