Samantha- Vijay: ಮಧ್ಯರಾತ್ರಿ ಸಮಂತಾಗೆ ದೇವರಕೊಂಡ ವಿಡಿಯೋ ಕಾಲ್: ಸನ್‌ಗ್ಲಾಸ್ ತೊಟ್ಟು ಸಿಕ್ಕಿಬಿದ್ದ ಸ್ಯಾಮ್

ವಿಜಯ್ ದೇವರಕೊಂಡ ಹಾಗೂ ಸಮಂತಾ ರುತ್‌ಪ್ರಭ್ ನಟನೆಯ 'ಖುಷಿ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಸೋಲಿನ ಸುಳಿಗೆ ಸಿಲುಕಿರುವ ಇಬ್ಬರಿಗೂ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇದೆ. ಅಭಿಮಾನಿಗಳು ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಇನ್ನು ವಿಜಯ್- ಸ್ಯಾಮ್ ಭರ್ಜರಿಯಾಗಿ ಈ ಪ್ಯಾನ್ ಇಂಡಿಯಾ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.

ಶಿವ ನಿರ್ವಾಣ ಆಕ್ಷನ್ ಕಟ್ ಹೇಳಿರುವ ರೊಮ್ಯಾಂಟಿಕ್ ಎಂಟರ್‌ಟೈನರ್ 'ಖುಷಿ' ಸಿನಿಮಾ ಇದೇ ಶುಕ್ರವಾರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಜಯರಾಮ್, ಸಚಿನ್ ಖಡೇಕರ್, ಮುರಳಿ ಶರ್ಮಾ, ರೋಹಿಣಿ, ವೆನ್ನೆಲ ಕಿಶೋರ್ ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್ ಮತ್ತು ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಸಿನಿಮಾ ಕನ್ನಡದಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ.

Kushi: Vijay devarakondas cute video call with Samantha goes viral

ಇನ್ನು 'ಖುಷಿ' ಸಿನಿಮಾ ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ ಹಾಗೂ ಸಮಂತಾ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಸಮಂತಾ ಅಮೆರಿಕಾದಲ್ಲಿದ್ದರೆ ವಿಜಯ್ ಹೈದರಾಬಾದ್‌ನಲ್ಲಿದ್ದಾರೆ. ಹಾಗಾಗಿ ವಿಡಿಯೋ ಕಾಲ್ ವಿಜಯ್ ಜೋಕ್ ಹೇಳಿದ್ದಾರೆ. ನನ್ನ ಬಳಿ ಒಂದು ನಾಕ್ ನಾಕ್ ಜೋಕ್ ಇದೆ ಎಂದು ವಿಜಯ್ ಹೇಳಿದ್ದಾರೆ. ಅಮೆರಿಕದಲ್ಲಿ ಈಗ ಎಷ್ಟು ಸಮಯ ಗೊತ್ತಾ? ನಿನ್ನ ಜೋಕ್ ಅದೇನೋ ಬೇಗ ಹೇಳು ಸ್ಯಾಮ್ ಹೇಳಿದ್ದಾರೆ. ಇನ್ನು ವಿಜಯ್ ದೇವರಕೊಂಡ 'ನಾಕ್ ನಾಕ್' ಎಂದಾಗ ನಿಯಮದಂತೆ ಸಮಂತಾ, 'ಯಾರದು?' ಅಥವಾ ಹೂ? ಎಂದಿದ್ದಾರೆ. ವಿಜಯ್ ನಾನು 'ನಾ' ಎಂದದ್ದು, ನಾ ಎಂದರೆ ಯಾರು? ಎಂದು ಸ್ಯಾಮ್ ಕೇಳಿದಾಗ, 'ನಾ ರೋಜಾ ನುವ್ವೆ' ಎಂದು ವಿಜ್ಯ ಹಾಡು ಹಾಡಿದ್ದಾರೆ.

'ಖುಷಿ' ಚಿತ್ರದ 'ನಾ ರೋಜಾ ನುವ್ವೆ' ಸಾಂಗ್ ಈಗಾಗಲೇ ಹಿಟ್ ಆಗಿದೆ. ಹೆಶಮ್ ಅಬ್ದುಲ್ ವಹಾಬ್ ಮ್ಯೂಸಿಕ್ ಮಾಡಿ ಈ ಹಾಡು ಹಾಡಿದ್ದಾರೆ. ನಿರ್ದೇಶಕ ಶಿವ ನಿರ್ವಾಣ ಸಾಹಿತ್ಯ ಬರೆದು ಕೊರಿಯೋಗ್ರಫಿ ಮಾಡಿದ್ದಾರೆ. ಎಲ್ಲಾ ಸರಿ ಅಂದಹಾಗೆ ಈ ವಿಡಿಯೋ ಕಾಲ್‌ ಫೇಕ್ ಎಂದು ನೆಟ್ಟಿಗರು ಕಂಡು ಹಿಡಿದಿದ್ದಾರೆ. ಇಬ್ಬರು ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಂತೆ ವಿಡಿಯೋ ಇದೆ. ಆದರೆ ಸ್ಯಾಮ್ ವಿಡಿಯೋ ಕಾಲ್‌ನಲ್ಲಿ ಮಾತನಾಡಿಲ್ಲ. ಬದಲಿಗೆ ವಿಡಿಯೋ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ. ಅದನ್ನು ವಿಡಿಯೋ ಕಾಲ್ ರೀತಿ ಎಡಿಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಯಾಮ್ ಮೊಬೈಲ್ ಮುಂದೆ ಹಿಡಿದು ಮಾತನಾಡುವ ವೇಳೆ ಆಕೆಯ ಸನ್‌ಗ್ಲಾಸ್‌ನಲ್ಲಿ ಮೊಬೈಲ್ ಸ್ಕ್ರೀನ್ ಸ್ಪಷ್ಟವಾಗಿ ಕಾಣುತ್ತಿದೆ. ಅದರಲ್ಲಿ ಸ್ಯಾಮ್ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡುತ್ತಿರುವಂತಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಒಟ್ನಲ್ಲಿ ಪ್ರಚಾರಕ್ಕೆ ವಿಭಿನ್ನ ಐಡಿಯಾ ಏನೋ ಮಾಡಿದ್ದಾರೆ. ಆದರೆ ಈ ರೀತಿ ಸಿಕ್ಕಿ ಬಿದ್ದಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

'ಲೈಗರ್' ಸೋಲಿನ ಬಳಿಕ ವಿಜಯ್ ದೇವರಕೊಂಡ 'ಖುಷಿ' ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ಕಾಯುತ್ತಿದ್ದಾರೆ. ಸ್ಯಾಮ್ ಕೂಡ 'ಯಶೋದ', 'ಶಾಕುಂತಲಂ' ಸಿನಿಮಾಗಳ ಸೋಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದಾರೆ. 'ಖುಷಿ' ಸಿನಿಮಾ ಶೂಟಿಂಗ್ ನಡೆವೆಯೇ ಸಮಂತಾ ಮಯೋಸೈಟಿಸ್ ಸಮಸ್ಯೆಗೆ ತುತ್ತಾದರು. ಹಾಗಾಗಿ ಚಿತ್ರೀಕರಣ ತಡವಾಗಿತ್ತು. ಅಂತೂ ಇಂತೂ ಈ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.

ಪೋಷಕರ ವಿರೋಧದ ನಡುವೆಯೂ ಅಂತರ್‌ಧರ್ಮೀಯ ಜೋಡಿ ಮದುವೆ ಆಗುತ್ತಾರೆ. ಆ ಬಳಿಕ ಅವರ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ಈ ಸಿನಿಮಾ ಕಟ್ಟಿಕೊಡಲಾಗಿದೆ. ಟ್ರೈಲರ್ ನೋಡಿದಾಗಲೇ ಕಥೆ ಏನು ಅನ್ನುವುದು ಅರ್ಥವಾಗಿದೆ. ಆದರೆ ಸಿನಿಮಾ ಎಷ್ಟರಮಟ್ಟಿಗೆ ಪ್ರೇಕ್ಷಕರ ಗಮನ ಸೆಳೆಯುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

More from Filmibeat

English summary
Vijay devarakonda- Samantha video call video Goes Viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X