ಆ ಒಬ್ಬರ ಮಾತಿಗೆ ಬೆಲೆ ಕೊಟ್ಟ ರಾಜಮೌಳಿ RRR ಸಿನಿಮಾ ಪೋಸ್ಟ್ ಪೋನ್ ಮಾಡಿದ್ರು!

ಟಾಲಿವುಡ್‌ನಲ್ಲಿ ಅದೆಷ್ಟೋ ಮಂದಿ ಆರ್ಆರ್ಆರ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತರರಾರಿದ್ದಾರೆ. ಟಾಲಿವುಡ್‌ನಲ್ಲಿ ಮಾತ್ರವಲ್ಲದೇ ರಾಜಮೌಳಿ ಅಭಿಮಾನಿಗಳು ಸೇರದಂತೆ ದೇಶದಾದ್ಯಂತ ಹಲವರು ಈ ಚಿತ್ರವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಈ ಹಿಂದೆ ಮಾರ್ಚ್ 18ರಂದು ತೆರೆಗೆ ಬರೋದಾಗಿ ಅನೌನ್ಸ್ ಮಾಡಿಲಾಗಿತ್ತು. ನಂತದರಲ್ಲಿ ಅಪ್ಪು ಅವರ ಮೇಲಿನ ಅಭಿಮಾನದಿಂದ ಚಿತ್ರವನ್ನು ಪೋಸ್ಟ್ ಪೋನ್ ಮಾಡಲಾಗಿದೆ. ಆರ್ಆರ್ಆರ್ ಸಿನಿಮಾ ಹೀಗೆ ನಿಗದಿ ಆಗಿದ್ದ ದಿನಾಂಕವನ್ನು ಬದಲಾಯಿಸಿರೋದು ಅಪ್ಪುಗಾಗಿ ಅನ್ನುವಂತದ್ದು ಒಂದು ಕಾರಣವಾದರೇ ಮತ್ತೊಂದು ಬಲವಾದ ಕಾರಣ ಕೂಡ ಈಗ ಸಿಕ್ಕಿದೆ. ಅದುವೆ ಕೆವಿಎನ್ ಪ್ರೊಡಕ್ಷನ್ ಹೌಸ್.

ಆರ್ಆರ್ಆರ್ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ತನ್ನ ಟೀಸರ್, ಟ್ರೇಲರ್ ಮೂಲಕವೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ರಾಜಮೌಳಿ ನಿರ್ದೇಶನದ ಸಿನಿಮಾ ಅಂದರೇ ಅಲ್ಲಿ ಈ ಕ್ರೇಝ್, ಜೋಶ್ ಇರೋದು ಕಾಮನ್. ಅದರಂತೆ ಆರ್ಆರ್ಆರ್ ಸಿನಿಮಾ ಮಾರ್ಚ್ 18ಕ್ಕೆ ರಿಲೀಸ್ ಆಗುತ್ತೆ ಎಂದುಕೊಂಡ ಹಲವರಿಗೆ ಇದೀಗ ನಿರಾಸೆಯಾಗಿದೆ. ಎಸ್ ರಾಜಮೌಳಿ ನಿರ್ದೇಶನದ ದೃಶ್ಯ ವೈಭೋಗದ RRR ಸಿನಿಮಾ ಬಿಡುಗಡೆಗೆ ಹೊಸ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 18 ಹಾಗೂ ಎಪ್ರಿಲ್ 28 ಎರಡು ಪ್ರಮುಖ ದಿನಗಳನ್ನು ಲಾಕ್ ಮಾಡಿದ್ದ ರಾಜಮೌಳಿ ಈ ಎರಡು ದಿನಗಳನ್ನು ಬಿಟ್ಟು ಈಗ ಮಾರ್ಚ್ 25ರಂದು ಹೊಸ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಅದಕ್ಕೆ ಕಾರಣ ಜೇಮ್ಸ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ ಜೇಮ್ಸ್ ಸಿನಿಮಾ ಮಾರ್ಚ್ 17 ಅಪ್ಪು ಬರ್ತ್ ಡೇ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಈಗಾಗಲೇ ಸಜ್ಜಾಗಿದೆ. ಹೀಗಾಗಿ ರಾಜಮೌಳಿ ಅಪ್ಪುಗಾಗಿ ತಮ್ಮ ದಾರಿ ಬದಲಿಸಿದ್ದಾರೆ.

KVN production house requested to Rajamouli

ಹಾಗಿದ್ದರೆ ರಾಜಮೌಳಿಗೆ ಹೀಗೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹಾಕಲು ಅವರಿಗೆ ಸಲಹೆ ನೀಡಿದ್ದು ಯಾರು ಅನ್ನೋದನ್ನು ಹುಡುಕಿಕೊಂಡು ಹೋದರೆ ಅಲ್ಲಿ ಸಿಗೋದೇ ಕೆವಿಎನ್ ಪ್ರೊಡಕ್ಷನ್ ಹೌಸ್. ಹೌದು ಆರ್ಆರ್ಆರ್ ಸಿನಿಮಾದ ಪಾಲುದಾರರಲ್ಲಿ ಒಂದಾಗಿರುವ ಕೆವಿಎನ್ ಸಂಸ್ಥೆ ರಾಜಮೌಳಿ ಅವರಿಗೆ ಒಂದು ಸಲಹೆಯನ್ನು ನೀಡಿತ್ತು. ಹೌದು ಮಾರ್ಚ್ 18 ರಂದು ರಿಲೀಸ್‌ಗೆ ಸಜ್ಜಾಗಿದ್ದ ಈ ಸಿನಿಮಾ ಅಂದೇ ರಿಲೀಸ್ ಆಗಿದ್ದರೆ ಜೇಮ್ಸ್ ಮತ್ತು ಆರ್ಆರ್ಆರ್ ಸಿನಿಮಾಗೆ ಖಂಡಿತಾ ಕ್ಲ್ಯಾಶ್ ಆಗುತ್ತಿತ್ತು. ಅಲ್ಲದೇ ಪುನೀತ್ ಅಭಿನಯದ ಜೇಮ್ಸ್ ಚಿತ್ರದ ಎದುರು ಆರ್ಆರ್ಆರ್ ಸಿನಿಮಾ ಜನರನ್ನು ಸೆಳೆಯೋದು ಕಷ್ಟ ವಾಗುತ್ತಿತ್ತು. ಹೀಗಾಗಿ ಈ ಸಮಸ್ಯೆ ಬೇಡ. ಪುನೀತ್ ಅವರ ಅಭಿನಯದ ಕೊನೆಯ ಸಿನಿಮಾ ಇದು ಹೀಗಾಗಿ ಅಪ್ಪುಗೆ ಮೊದಲು ಬರಲು ಅವಕಾಶ ಮಾಡಿಕೊಡೋಣ ಎಂದು ತೀರ್ಮಾನಿಸಿ ರಾಜಮೌಳಿ ಬಳಿ ಈ ಬಗ್ಗೆ ಚರ್ಚೆ ಮಾಡಿದ್ದರು ಕೆವಿಎನ್ ಸಂಸ್ಥೆಯ ಒಡತಿ ನಿಶಾ ವೆಂಕಟ್ ಕೊನಾಂಕಿ. ಅವರು ಏನು ಮನವಿ ಮಾಡಿದ್ದರು ಅಂತ ಮುಂದೆ ಓದಿ.

KVN production house requested to Rajamouli

"ರಾಜಮೌಳಿ ಅವರಿಗೆ ನಾನು ಆರ್ಆರ್ಆರ್ ಸಿನಿಮಾ ರಿಲೀಸ್ ವಿಚಾರದ ಬಗ್ಗೆ ಅಭಿಮಾನ ಪೂರಕವಾದ ಸಲಹೆ ನೀಡಿದ್ವಿ. ಅಪ್ಪು ಅವರ ಮೇಲೆ ನಮಗೆ ಅಪಾರ ಅಭಿಮಾನ ಇದೆ. ಅಪ್ಪು ಅವರ ಕಡೆಯ ಸಿನಿಮಾ ಆಗಿರುವ ಜೇಮ್ಸ್ ಸಿನಿಮಾ ಅಪ್ಪು ಬರ್ತ್‌ಡೇ ದಿನ ಅಂದರೇ ಮಾರ್ಚ್ 17ರಂದೇ ಬಿಡುಗಡೆ ಆಗಬೇಕು ಅನ್ನೋದು ಅಭಿಮಾನಿಗಳ ಆಸೆಯೂ ಹೌದು ಜೊತೆಗೆ ನಮ್ಮ ಅಭಿಮಾನದ ಆಸೆಯೂ ಹೌದು. ಹೀಗಾಗಿ ನೀವು ರಿಲೀಸ್ ಡೇಟ್ ಅನ್ನು ಬದಲಾಯಿಸೋದು ಉತ್ತಮ ಅನ್ನೋ ಅಭಿಪ್ರಾಯ ಮಂಡಿಸಿದ್ವಿ. ನಮ್ಮ ಅಭಿಪ್ರಾಯವನ್ನು ರಾಜಮೌಳಿ ಒಪ್ಪಿ ಮಾರ್ಚ್ 25ಕ್ಕೆ ಆರ್ಆರ್ಆರ್ ಸಿನಿಮಾ ರಿಲೀಸ್ ಡೇಟ್ ಫೈನಲ್ ಮಾಡಿದ್ದಾರೆ. ನಮ್ಮ ಸಂಸ್ಥೆ ವತಿಯಿಂದ ರಾಜಮೌಳಿ ಅವರಿಗೆ ಧನ್ಯವಾದಗಳು" ಎಂದು ಕೆವಿಎನ್ ಪ್ರೊಡಕ್ಷನ್ ಮುಖ್ಯಸ್ಥೆ ನಿಶಾ ವೆಂಕಟ್ ಕೊನಾಂಕಿ ಮನವಿ ಮಾಡಿದ್ದರು.

KVN production house requested to Rajamouli

ಇದಿಷ್ಟು ಕೆವಿಎನ್ ಪ್ರೋಡಕ್ಷನ್ ಮುಖ್ಯಸ್ಥೆ ನಿಶಾ ವೆಂಕಟ್ ಕೊನಾಂಕಿ ರಾಜಮೌಳಿ ಬಳಿ ಮಾಡಿಕೊಂಡಂತಹ ಮನವಿ. ಇವರ ಮನವಿಗೆ ಗೌರವ ನೀಡಿದ ರಾಜಮೌಳಿ ಸಿನಿಮಾವನ್ನು ಮುಂದಕ್ಕೆ ಹಾಕಿದ್ದಾರೆ. ಹಾಗೇ ಈ ನಿರ್ಧಾರದ ಬಗ್ಗೆ ಹೆಮ್ಮೆಗೊಂಡಿದ್ದಾರೆ. ಈ ಮೂಲಕ ಆಗುವಂತಹ ದೊಡ್ಡ ಸಿನಿಮಾ ಕ್ಲ್ಯಾಶ್ ತಪ್ಪಿಸುವಲ್ಲಿ ಕೆವಿಎನ್ ಪ್ರೋಡಕ್ಷನ್ ಹೌಸ್ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಹೀಗಾಗಿ ಅಪ್ಪು ಅಭಿಮಾನಿಗಳು ಸೇರಿದಂತೆ ಇಡೀ ದೇಶವೇ ಅಪ್ಪು ಅಭಿನಯದ ಜೇಮ್ಸ್ ಸಿನಿಮಾ ನೋಡಲು ಕಾತರರಾಗಿದ್ದಾರೆ.

More from Filmibeat

English summary
Here is another reason behind RRR movie postpone. KVN production house requested to Rajamouli.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X