Lakshmi Manchu: ನಿಮ್ಮ* ಎಂದು ಬೈದು ಕ್ಯಾಮರಾಗೆ ಅಡ್ಡ ಬಂದವನಿಗೆ ಹೊಡೆದ ನಟಿ ಲಕ್ಷ್ಮೀ ಮಂಚು

ಇತ್ತೀಚೆಗೆ ದುಬೈನಲ್ಲಿ ಬಹಳ ಅದ್ಧೂರಿಯಾಗಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ತೆಲುಗು ನಟಿ ಲಕ್ಷ್ಮೀ ಮಂಚು ಕೂಡ ಭಾಗಿ ಆಗಿದ್ದರು.

ಈವೆಂಟ್ ವೇಳೆ ತೆಲುಗು ವಾಹಿನಿಯೊಂದಕ್ಕೆ ಲಕ್ಷ್ಮೀ ಮಂಚು ಮಾತನಾಡುತ್ತಿದ್ದರು. ಈ ವೇಳೆ ಕ್ಯಾಮರಾ ಮುಂದೆ ಒಂದಿಬ್ಬರು ಓಡಾಡಿದ್ದಾರೆ. ಕ್ಯಾಮರಾಗೆ ಆ ರೀತಿ ಅಡ್ಡ ಬಂದವರನ್ನು ನೋಡಿ ಆಕೆ ಗರಂ ಆಗಿದ್ದಾರೆ. ನಿಮ್ಮ* ಎಂದು ಬೈದು ಮೆಲ್ಲಗೆ ಹೊಡೆದಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

Lakshmi-Manchu-hits-man-siima

ಆಕೆ ಮಾತನಾಡುತ್ತಿದ್ದಾಗ ಮೊದಲು ಒಬ್ಬ ಅಡ್ಡವಾಗಿ ನಡೆದು ಹೋಗಿದ್ದಾನೆ. ತಕ್ಷಣ ರಿಯಾಕ್ಟ್ ಆದ ಲಕ್ಷ್ಮೀ ಆತನ ಭುಜಕ್ಕೆ ಹೊಡೆದಿದ್ದಾರೆ. ಕೋಪದಿಂದ ಅಸಹನೆ ವ್ಯಕ್ತಪಡಿಸಿದರು. ಅಷ್ಟರಲ್ಲಿ ಮತ್ತೊಬ್ಬ ಅದೇ ರೀತಿ ಮತ್ತೊಬ್ಬ ಬಂದಿದ್ದು ಆಕೆ ಪ್ರಾಣಿಗಳನ್ನು ಬೆದರಿಸುವಂತೆ ಶಬ್ಧ ಮಾಡಿ ನಾವು ಕ್ಯಾಮರಾ ಮುಂದೆ ಇದ್ದೀನಿ ಸ್ವಲ್ಪ ನೋಡಿ ಕೊಂಡು ಓಡಾಡಿ ಡ್ಯೂಡ್ ಎಂದು ಹೇಳಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಕ್ಷ್ಮಿ ಮಂಚು ಹೀಗೆ ಮಾಡಿದ್ದು ಸರಿಯಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇತ್ತೀಚೆಗೆ ನಡೆದ ಅಕ್ಕಿನೇನಿ ನಾಗೇಶ್ವರ ರಾವ್ ಶತಜಯಂತೋತ್ಸವದಲ್ಲಿ ಲಕ್ಷ್ಮಿ ಮಂಚು ತಂದೆ ನಟ ಮೋಹನ್ ಬಾಬು ಕೂಡ ಇದೇ ರೀತಿ ವರ್ತಿಸಿದ್ದರು. ಆ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.

ಕಾರ್ಯಕ್ರಮದಲ್ಲಿ ಮೋಹನ್ ಬಾಬು ಜೊತೆಗೆ ಹಿರಿಯ ನಟಿ ಜಯಸುಧಾ ಕೂಡ ಭಾಗಿ ಆಗಿದ್ದರು. ಇಬ್ಬರು ಅಕ್ಕ ಪಕ್ಕ ಕೂತಿದ್ದಾಗ ಆಕೆ ಮೊಬೈಲ್ ನೋಡುತ್ತಿದ್ದರು. ಕೂಡಲೇ ಆ ಮೊಬೈಲ್‌ ಅನ್ನು ಮೋಹನ್ ಬಾಬು ಕಿತ್ತುಕೊಳ್ಳಲು ಯತ್ನಿಸಿದ್ದರು. ಏನು ಹೇಳಲಾಗದೇ ಜಯಸುಧಾ ಸುಮ್ಮನಾಗಿಬಿಟ್ಟಿದ್ದರು. ಆ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೀಗ ಈ 2 ವಿಡಿಯೋಗಳನ್ನು ಸೇರಿಸಿ ಏನೇ ಆದ್ರೂ ಮಂಚು ಫ್ಯಾಮಿಲಿ ಕೊಂಚ ವಿಚಿತ್ರ ಅಂತ ಟ್ರೋಲ್ ಮಾಡುತ್ತಿದ್ದಾರೆ.

ಒಂದ್ಕಾಲದಲ್ಲಿ ಟಾಲಿವುಡ್‌ ಕಲೆಕ್ಷನ್ ಕಿಂಗ್ ಎನಿಸಿಕೊಂಡಿದ್ದ ನಟ ಮೋಹನ್ ಬಾಬು ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ಮಂಚು ಭಕ್ತವತ್ಸಲಂ ಬಳಿಕ ಖಳನಟನಾಗಿ ಆ ನಂತರ ಹೀರೊ ಆಗಿ ಸಕ್ಸಸ್ ಕಂಡರು.

ನಟ ಮೋಹನ್‌ ಬಾಬುಗೆ ವಿಷ್ಣು, ಮನೋಜ್ ಹಾಗೂ ಲಕ್ಷ್ಮಿ ಮೂವರು ಮಕ್ಕಳು. ಮೂರು ಜನ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಆದರೆ ದೊಡ್ಡಮಟ್ಟದಲ್ಲಿ ಸಕ್ಸಸ್ ಸಿಗಲಿಲ್ಲ. ಇತ್ತೀಚೆಗೆ ವಿಷ್ಣು ಹಾಗೂ ಮನೋಜ್ ಕಿರಿಕ್ ಮಾಡಿಕೊಂಡು ದೂರಾಗಿದ್ದಾರೆ. ಮನೋಜ್ ಮೊದಲ ಪತ್ನಿಗೆ ಡಿವೋರ್ಸ್ ನೀಡಿ ಕೆಲ ತಿಂಗಳ ಹಿಂದೆ 2ನೇ ಮದುವೆ ಆಗಿದ್ದರು.

ಮೋಹನ್ ಬಾಬು ಪುತ್ರ ವಿಷ್ಣುನ ಹೀರೊ ಮಾಡಿ 'ಭಕ್ತ ಕಣ್ಣಪ್ಪ' ಎನ್ನುವ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಚಿತ್ರದಲ್ಲಿ ಬೇಡರ ಕಣ್ಣಪ್ಪನ ಕಥೆ ಹೇಳಲಾಗುತ್ತಿದೆ. 100 ಕೋಟಿ ರೂ. ಬಜೆಟ್‌ನಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಬಾಹುಬಲಿ ಪ್ರಭಾಸ್ ಕೂಡ ಅತಿಥಿ ಪಾತ್ರದಲ್ಲಿ ನಟಿಸ್ತಿದ್ದಾರೆ.

More from Filmibeat

English summary
Lakshmi Manchu hits man walking in front of camera, video goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X