"ನಾನು ಕದ್ದುಮುಚ್ಚಿ ಚರಣ್ ಮನೇಲಿದ್ದೆ, ವಾಟ್ಸಪ್‌ ಗ್ರೂಪ್‌ನಲ್ಲಿ 140 ಜನ ಇದ್ದೀವಿ": ಮಂಚು ಲಕ್ಷ್ಮಿ

ತೆಲುಗು ನಟ ಮೋಹನ್ ಬಾಬು ಹಾದಿಯಲ್ಲಿ ಮೂವರು ಮಕ್ಕಳು ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ಯಾರೊಬ್ಬರೂ ದೊಡ್ಡದಾಗಿ ಸಕ್ಸಸ್ ಆಗಲಿಲ್ಲ. ಆಗಂತ ಪ್ರಯತ್ನ ನಿಲ್ಲಿಸಿಲ್ಲ. ಮಂಚು ವಿಷ್ಣು ಬೆಂಬಲಕ್ಕೆ ತಂದೆ ನಿಂತಿದ್ದಾರೆ. ಇತ್ತ ಮಂಚು ಲಕ್ಷ್ಮಿ ಅವಕಾಶಕ್ಕಾಗಿ ಬಾಲಿವುಡ್‌ ಪ್ರವೇಶಿಸಿದ್ದಾರೆ.

ತೆಲುಗಿನಲ್ಲಿ ಅವಕಾಶಗಳು ಸಿಗುತ್ತಿಲ್ಲ. ಹಾಗಾಗಿ ಮುಂಬೈಗೆ ಬಂದು ಬಾಲಿವುಡ್‌ನಲ್ಲಿ ಅವಕಾಶಗಳ ಹುಡುಕಾಟದಲ್ಲಿದ್ದೀನಿ ಎಂದು ಮಂಚು ಲಕ್ಷ್ಮಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಹಾಗೂ ರಕುಲ್ ಪ್ರೀತ್‌ಸಿಂಗ್‌ ಮುಂಬೈಗೆ ಬಾ ಎಂದು ಹೇಳುತ್ತಿದ್ದರು. ಅವರ ಮಾತು ಕೇಳಿ ಅಲ್ಲಿಗೆ ಹೋದೆ. ಕೆಲ ದಿನ ರಕುಲ್ ಮನೆಯಲ್ಲಿದ್ದೆ. ಬಳಿಕ ರಾಮ್‌ಚರಣ್ ಮುಂಬೈ ಫ್ಲಾಟ್‌ನಲ್ಲಿ ಯಾರಿಗೂ ಗೊತ್ತಿಲ್ಲದೇ ವಾಸವಾಗಿದ್ದೆ ಎಂದಿದ್ದಾರೆ.

Lakshmi Manchu interesting comments on Ramcharan and their friendship

ಸದ್ಯ ಮುಂಬೈನಲ್ಲಿ ಫ್ಲಾಟ್‌ ಖರೀಸಿದಿ ಮಂಚು ಲಕ್ಷ್ಮಿ ನೆಲೆಸಿದ್ದಾರೆ. ಅದಕ್ಕೂ ಮುನ್ನ ರಾಮ್‌ಚರಣ್ ಫ್ಲಾಟ್‌ನಲ್ಲಿದ್ದೆ. ಆದರೆ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಅದನ್ನು ರಸಹ್ಯವಾಗಿ ಇಟ್ಟಿದ್ದೆ. ಈ ವಿಚಾರ ಯಾರಿಗೂ ಹೇಳಬೇಡ ಎಂದು ರಾಮ್‌ಚರಣ್‌ಗೂ ಹೇಳಿದ್ದೆ. ನಾನು ಯಾಕೆ ಹೇಳ್ತೀನಿ. ನೀನು ಆರಾಮಾಗಿ ಇರು ಎಂದು ರಾಮ್‌ಚರಣ್ ಹೇಳಿದ್ದಾಗಿ ಲಕ್ಷ್ಮಿ ನೆನಪಿಸಿಕೊಂಡಿದ್ದಾರೆ.

ಚರಣ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ವಿಚಾರ ಮರೆಮಾಚಲು ಕಾರಣವಿದೆಯಂತೆ. ಅದು ಗೊತ್ತಿದ್ದರೆ ಮುಂಬೈನಲ್ಲಿ ಯಾರು ಕೆಲಸ ಕೊಡಲ್ಲ. ನೀವು ರಾಮ್ ಚರಣ್ ಮನೆಯಲ್ಲಿ ಇದ್ದೀರಾ? ನಿಮಗೇನು ಕಮ್ಮಿಬಿಡಿ, ನಿಮಗೆ ಸಿನಿಮಾಗಳು ಯಾಕೆ ಬಿಡಿ ಎಂದುಬಿಡುತ್ತಾರೆ. ಆದ್ದರಿಂದಲೇ ಅದನ್ನು ಗೌಪ್ಯವಾಗಿಟ್ಟಿದ್ದೆ. ನಿನಗೆ ಇಷ್ಟ ಬಂದಷ್ಟು ದಿನ ನನ್ನ ಮನೆಯಲ್ಲಿ ಇರು, ಎಸಿ ಇದೆ, ನೀರು ಬರುತ್ತೆ ತಲೆಕೆಡಿಸಿಕೊಳ್ಳಬೇಡ ಎಂದು ಚರಣ್ ಹೇಳಿದ್ದರು. ನಾನು ಎಷ್ಟು ದಿನ ಅಲ್ಲಿದ್ದೆ ಎನ್ನುವುದು ಆತನಿಗೆ ಗೊತ್ತಿಲ್ಲ" ಎಂದಿದ್ದಾರೆ.

Lakshmi Manchu interesting comments on Ramcharan and their friendship

"ನಾನು, ರಾಣಾ, ರಾಮ್‌ಚರಣ್‌ ಎಲ್ಲರೂ ಒಟ್ಟಿಗ ಬೆಳೆದವರು. ನಮ್ಮ ನಡುವೆ ಉತ್ತಮ ಒಡನಾಟವಿದೆ. 142 ಜನ ಕಲಾವಿದರ ಒಂದು ವಾಟ್ಸಪ್ ಗ್ರೂಪ್ ಇದೆ. ಅದರಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ನಮ್ಮ ಸಿನಿಮಾಗಳ ಟೀಸರ್, ಟ್ರೈಲರ್, ಸಾಂಗ್ಸ್ ಲಿಂಕ್ ಹಾಕುತ್ತೇವೆ. ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತೇವೆ. ಅದಕ್ಕೆ ಆ ಗ್ರೂಪ್ ಕ್ರಿಯೇಟ್ ಮಾಡಿದ್ದು" ಎಂದು ಮಂಚು ಲಕ್ಷ್ಮಿ ವಿವರಿಸಿದ್ದಾರೆ.

ಅಮೆರಿಕದಲ್ಲಿ ಓದಿ ಬೆಳೆದ ಲಕ್ಷ್ಮಿ ಮಂಚು 2011ರಲ್ಲಿ 'ಅನಗನ ಓ ಧೀರುಡು' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು ಹಲವು ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ 'ಆದಿಪರ್ವಂ' ಚಿತ್ರದಲ್ಲಿ ನಟಿಸಿದ್ದಾರೆ.

ಮೊದಲಿನಿಂದಲೂ ಮಂಚು ಲಕ್ಷ್ಮಿ ಬಹಳ ಬೋಲ್ಡ್. ತೆರೆಮೇಲೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲ, ಬೋಲ್ಡ್ ಕಾಮೆಂಟ್‌ಗಳಿಂದ ಗಮನ ಸೆಳೆಯುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಮತ್ತಷ್ಟು ಹಾಟ್ ಹಾಟ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಂದಾಸ್ ಫೋಟೊಶೂಟ್‌ಗಳಲ್ಲಿ ಮಿಂಚಿಸುತ್ತಿದ್ದಾರೆ.

ನಿರ್ಮಾಪಕಿಯಾಗಿ, ಕಿರುತೆರೆ ನಿರೂಪಕಿಯಾಗಿಯೂ ಮಂಚು ಲಕ್ಷ್ಮಿ ಗುರ್ತಿಸಿಕೊಂಡಿದ್ದಾರೆ. 'ಶ್ರೀ', 'ನೇನು ಮೀಕು ತೆಲುಸಾ?', 'ಜುಮ್ಮಂದಿ ನಾದಂ', 'ಗುಂಡೆಲ್ಲೊ ಗೋದಾರಿ' ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. 'ಡಿಪಾರ್ಟ್‌ಮೆಂಟ್', 'ಕಡಲ್', 'ದೂಸುಕೆಳ್ತಾ', 'ದೊಂಗಾಟ', 'ಸೈಜ್ ಜೀರೊ', 'ಲಕ್ಷ್ಮಿ ಬಾಂಬ್', 'ಗುಂಟೂರು ಟಾಕೀಸ್', 'ಪಿಟ್ಟ ಕಥಲು' ಆಕೆ ನಟಿಸಿದ ಕೆಲ ಸಿನಿಮಾಗಳು.

More from Filmibeat

English summary
Lakshmi Manchu talk about when she was staying in ram charan mumbai flat;
Read more about: telugu tollywood ramcharan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X