For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಟ್ರೈಲರ್ ನೋಡಲು ಅಭಿಮಾನಿಗಳ ನೂಕುನುಗ್ಗಲು; ಚಿತ್ರಮಂದಿರದ ಗ್ಲಾಸ್ ಪುಡಿಪುಡಿ

  |

  ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಚಿತ್ರದ ಟ್ರೈಲರ್ ನೋಡಲು ಸೇರಿದ್ದ ಅಸಂಖ್ಯಾತ ಅಭಿಮಾನಿಗಳ ನಡುವೆ ನೂಕುನುಗ್ಗಲು ಉಂಟಾಗಿ ಭಾರಿ ಗದ್ದಲ ಸಂಭವಿಸಿದೆ. ವಿಶಾಖಪಟ್ಟಣಂನ ಸಂಗಮ್ ಶರತ್ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ್ ನೋಡಲು ಅಭಿಮಾನಿಗಳು ಒಮ್ಮೆಗೆ ಚಿತ್ರಮಂದಿರದ ಒಳಗೆ ನುಗ್ಗಿದ್ದಾರೆ.

  ಈ ಸಮಯದಲ್ಲೇ ತಳ್ಳಾಟ, ನೂಕಾಟ ನಡೆದು ಚಿತ್ರಮಂದಿರದ ಗಾಜಿನ ಗೋಡೆ ಪುಡಿಪುಡಿ ಆಗಿದೆ. ಮಾರ್ಚ್ 29 ಸಂಜೆ 4 ಗಂಟೆಗೆ ಟ್ರೈಲರ್ ಲಾಂಚ್ ಆಗಿದ್ದು, ಈ ವೇಳೆ ನೂಕುನುಗ್ಗಲು ನಡೆದಿದೆ. ಟ್ರೈಲರ್‌ಗಾಗಿ ಅಭಿಮಾನಿಗಳು ಬೆಳಗ್ಗೆಯಿಂದ ಚಿತ್ರಮಂದಿರದ ಮುಂದೆ ಕ್ಯುನಿಂತಿದ್ದರು. ಪವನ್ ಕಲ್ಯಾಣ್ ಫೋಟೋಗೆ ಪೂಜೆ ಮಾಡಿ ಸಂಭ್ರಮಿಸಿದ್ದಾರೆ.

  ''Are you a virgin?'' ಪ್ರಶ್ನೆ ಕೇಳುತ್ತಿದ್ದಾರೆ ಪವನ್ ಕಲ್ಯಾಣ್!

  ಬಳಿಕ 4ಗಂಟೆೆಗೆ ಟ್ರೈಲರ್ ವೀಕ್ಷಣೆಗೆ ಚಿತ್ರಮಂದಿರದ ಒಳಗೆ ನುಗ್ಗಲು ಒಮ್ಮೆಗೆ ಮುಗಿಬಿದ್ದಿದ್ದಾರೆ. ಗಾಜು ಒಡೆದು ಪುಡಿಪುಡಿ ಆದರೂ ಲೆಕ್ಕಿಸದೆ ಅಭಿಮಾನಿಗಳು ಪವನ್ ಕಲ್ಯಾಣ್ ನೋಡಲು ಮುನ್ನುಗ್ಗಿದ್ದಾರೆ. ಹೋಳಿ ಹಬ್ಬದ ಪ್ರಯುಕ್ತ ಚಿತ್ರತಂಡ ವಕೀಲ್ ಸಾಬ್ ಟ್ರೈಲರ್ ರಿಲೀಸ್ ಮಾಡಲು ಸಿನಿಮಾ ಪ್ಲಾನ್ ಮಾಡಿ, ಬಿಡುಗಡೆ ಮಾಡಿದೆ.

  ಅಮೆರಿಕದಲ್ಲಿ ಒಂದು ದಿನ ಮುಂಚಿತವಾಗಿ ರಿಲೀಸಾಗ್ತಿದೆ ಯುವರತ್ನ ಸಿನಿಮಾ | Yuvarathnaa | Filmibeat Kannada

  ಸಿನಿಮಾ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಎರಡು ವರ್ಷಗಳ ಬಳಿಕ ತೆರೆಮೇಲೆ ಬರ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ವಕೀಲ್ ಸಾಬ್ ಸದ್ಯದಲ್ಲೇ ತೆರೆಗೆ ಬರಲಿದೆ. ಅಂದಹಾಗೆ ವಕೀಲ್ ಸಾಬ್ ಹಿಂದಿಯ ಅಮಿತಾಬ್ ಬಚ್ಚನ್ ನಟನೆಯ ಪಿಂಕ್ ಸಿನಿಮಾದ ರಿಮೇಕ್.

  English summary
  Large number of fans gathered for the launch of vakeel saab trailer. The glass of Theater broken when the fans went inside to watch trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X