ಲೈವ್ ಡಿಬೇಟ್ ವೇಳೆ ನಟ ರಾಜ್ ತರುಣ್ ಸ್ನೇಹಿತನಿಗೆ ಲಾವಣ್ಯ ಚಪ್ಪಲಿ ಏಟು
ರಿಲೇಷನ್‌ಶಿಪ್ ವಿಚಾರದಲ್ಲಿ ತೆಲುಗು ನಟ ರಾಜ್ ತರುಣ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತನೊಟ್ಟಿಗೆ ನಾನು ರಿಲೇಷನ್‌ಶಿಪ್‌ನಲ್ಲಿದ್ದೆ, ಈಗ ನನಗೆ ಅವನು ಮೋಸ ಮಾಡಿದ್ದಾನೆ ಎಂದು ಲಾವಣ್ಯ ಎಂಬ ಯುವತಿ ದೂರು ನೀಡಿದ್ದರು.
"ನನ್ನೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ರಾಜ್ ತರುಣ್ ನನಗೆ ಮೋಸ ಮಾಡಿದ್ದಾನೆ" ಎಂದು ಲಾವಣ್ಯ ಆರೋಪಿಸಿದ್ದಾರೆ. ನನಗೆ ಮೋಸ ಮಾಡಿ ನಟಿ ಮಾಲ್ವಿ ಮಲ್ಹೋತ್ರಗೆ ರಾಜ್ ತರುಣ್ ಹತ್ತಿರವಾಗಿದ್ದಾನೆ. ಈಗ ನನಗೆ ಅನ್ಯಾಯ ಮಾಡಿದ್ದಾನೆ ಎಂದು ಆಕೆ ದೂರಿದ್ದರು. ಇದಕ್ಕೆ ಪ್ರತಿಯಾಗಿ ಮಾಲ್ವಿ ಮಲ್ಹೋತ್ರ ಕೂಡ ದೂರು ನೀಡಿದ್ದಾರೆ.

ಲಾವಣ್ಯ ಜೊತೆಗಿನ ರಿಲೇಷನ್‌ಶಿಪ್ ವಿಚಾರವನ್ನು ಒಪ್ಪಿಕೊಂಡಿದ್ದ ರಾಜ್ ತರುಣ್ ಬಹಳ ಹಿಂದೆಯೇ ತಾವಿಬ್ಬರು ದೂರಾಗಿರುವುದಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ನಟಿ ಮಾಲ್ವಿ ಜೊತೆಗೆ ನನಗೆ ಸಂಬಂಧ ಇದೆ ಎನ್ನುವ ಆರೋಪ ಸತ್ಯಕ್ಕೆ ದೂರವಾದ ಮಾತು, ಲಾವಣ್ಯಗೆ ಡ್ರಗ್ಸ್ ಚಟ ಇದೆ ಎಂದು ರಾಜ್ ತರುಣ್ ಹೇಳುತ್ತಾ ಬರುತ್ತಿದ್ದಾರೆ. ಕೆಲ ದಿನಗಳಿಂದ ರಾಜ್ ತರುಣ್ ಹಾಗೂ ಲಾವಣ್ಯ ಪ್ರೇಮ್ ಕಹಾನಿ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.
ಲಾವಣ್ಯ ಸಾಕಷ್ಟು ಸಾಕ್ಷಾಧಾರಗಳ ಸಮೇತ ದಿನಕ್ಕೊಂದು ವಿಚಾರವನ್ನು ಬಹಿರಂಗ ಪಡಿಸುತ್ತಾ ಬರುತ್ತಿದ್ದಾರೆ. ಇತ್ತೀಚಿಗೆ 'ತಿರಗಬಡರಾ ಸಾಮಿ' ಸಿನಿಮಾ ಪ್ರಮೋಷನ್ ವೇಳೆ ನಟ ರಾಜ್ ತರುಣ್‌ಗೆ ಲಾವಣ್ಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿತ್ತು. ಈ ವೇಳೆ ಅಲ್ಲಿಗೆ ಲಾವಣ್ಯ ಬಂದು ಭಾರೀ ರಾದ್ದಾಂತವಾಗಿತ್ತು. ರಾಜ್ ತರುಣ್ ಒಬ್ಬ ನಟಿ ಜೊತೆಗೆ ಆತ್ಮೀಯವಾಗಿರುವ ಫೋಟೊ ಸಹ ಲಾವಣ್ಯ ಪ್ರದರ್ಶಿಸಿದ್ದರು.
ಬಹಳ ದಿನಗಳಿಂದ ಟಾಲಿವುಡ್‌ನಲ್ಲಿ ಈ ಲವ್ ದೋಖಾ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಆದರೆ ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಳ್ಳದೇ ಇದ್ದ ರಾಜ್ ತರುಣ್ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿದ್ದರು. ಲಾವಣ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇನ್ನು ಈ ವಿಚಾರದಲ್ಲಿ ಕೆಲವರು ಲಾವಣ್ಯ ಪರ ಮತ್ತೆ ಕೆಲವರು ಆಕೆಯ ವಿರುದ್ಧವಾಗಿ ಮಾತನಾಡುತ್ತಿದ್ದಾರೆ.
ರಾಜ್ ತರುಣ್ ಹಾಗೂ ಲಾವಣ್ಯ ವಿಚಾರದ ಬಗ್ಗೆ ಇತ್ತೀಚೆಗೆ ಸುದ್ದಿ ವಾಹಿನಿಯೊಂದರಲ್ಲಿ ಲೈವ್ ಡಿಬೇಟ್ ನಡೆಯಿತು. ಈ ವೇಳೆ ನಟ ರಾಜ್ ತರುಣ್ ಪರವಾಗಿ ಸ್ನೇಹಿತ ಆರ್‌ಜೆ ಶೇಖರ್ ಭಾಷಾ ಲೈವ್‌ನಲ್ಲಿ ಭಾಗವಹಿಸಿದ್ದರು. ಆರ್‌ಜೆ ಶೇಖರ್ ಮಾತನಾಡುತ್ತಾ "ಲಾವಣ್ಯ ಚಿಕ್ಕ ಮಕ್ಕಳಿಗೆ ಡ್ರಗ್ಸ್ ಕೊಟ್ಟು ಚಟಕ್ಕೆ ಒಳಪಡಿಸುತ್ತಿದ್ದಾಳೆ ಎಂದು ಆರೋಪಿಸಿದರು. ಇದರಿಂದ ಕೋಪಗೊಂಡ ಲಾವಣ್ಯ ಆತನಿಗೆ ಶೂನಿಂದ ಹೊಡೆದಿದ್ದಾರೆ"
ಲೈವ್‌ನಲ್ಲೇ ಈ ಘಟನೆ ನಡೆದಾಗ ಪಕ್ಕದಲ್ಲಿ ಇದ್ದವರು ಶಾಕ್ ಆಗಿದ್ದಾರೆ. ಕೂಡಲೇ ಎದ್ದ ಆರ್‌ಜೆ ಶೇಖರ್ ಲಾವಣ್ಯ ಕಡೆ ಹೋಗಿ ಆಕೆಯನ್ನು ತಳ್ಳಿದ್ದಾರೆ. ಸ್ಟುಡಿಯೋ ಒಳಗಿದ್ದವರು ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸಿದರು. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.


Click it and Unblock the Notifications











