ಚೀಪ್ ನಟಿ ಎಂದವನಿಗೆ ತಕ್ಕ ಉತ್ತರ ಕೊಟ್ಟ ಲಾವಣ್ಯ ತ್ರಿಪಾಠಿ!

ನಟಿ‌ ಲಾವಣ್ಯ ತ್ರಿಪಾಠಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಇತ್ತೀಚೆಗೆ ನಟಿ ಲಾವಣ್ಯ ಹೆಚ್ಚಾಗಿ ಸುದ್ದಿ ಆಗಿದ್ದು ಅಂದರೆ ತಮ್ಮ ಮದುವೆ ವಿಚಾರದಲ್ಲಿ. ತೆಲುಗು ನಟ ವರುಣ್ ತೇಜ್ ಜೊತೆಗೆ ಲಾವಣ್ಯ ಮದುವೆ ಆಗ್ತಾರೆ ಎನ್ನುವ ವಿಚಾರ ಸದ್ದು ಮಾಡಿತ್ತು.

ಈಗ ಲಾವಣ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಲಾವಣ್ಯ ಟ್ರೋಲ್ ಆಗುತ್ತಿದ್ದ ಹಾಗೆ ಅದಕ್ಕೆ ಉತ್ತರ ನೀಡಿದ್ದಾರೆ. ಟ್ರೋಲ್ ಹೆಸರಲ್ಲಿ ಆಕೆಯನ್ನು ನಾನಾ ರೀತಿ ನಿಂದಿಸಲಾಗುತ್ತಿದೆ. ಹಾಗಾಗಿ ಈ ಬಗ್ಗೆ ಮೌನ ಮುರಿದಿರುವ ಲಾವಣ್ಯ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಆಕೆಯನ್ನು ಚೀಪ್ ನಟಿ ಎಂದು ಕೂಡ ಕರೆಯಲಾಗಿದೆ. ಹೀಗೆ ಚೀಪ್ ಎಂದು ಕರೆದವನಿಗೆ ನಟಿ ಲಾವಣ್ಯ ತಕ್ಕ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಆಕೆ ಟ್ರೋಲ್ ಆಗುತ್ತಲಿರುವುದು ಯಾಕೆ? ಎನ್ನುವ ಬಗ್ಗೆ ಸುದ್ದಿ ಇಲ್ಲಿದೆ ಮುಂದೆ ಓದಿ...

ಲಾವಣ್ಯ ತ್ರಿಪಾಠಿ ಹ್ಯಾಶ್ ಟ್ಯಾಗ್ ವೈರಲ್!

ಲಾವಣ್ಯ ತ್ರಿಪಾಠಿ ಹ್ಯಾಶ್ ಟ್ಯಾಗ್ ವೈರಲ್!

ಇದ್ದಕ್ಕಿದ್ದ ಹಾಗೆ ಲಾವಣ್ಯ ತ್ರಿಪಾಟಿ ಹೆಸ್ರಲ್ಲಿ ಹ್ಯಾಶ್ ಟ್ಯಾಗ್ ವೈರಲ್ ಆಗುತ್ತಿದೆ. ಈ ಹ್ಯಾಶ್ ಟ್ಯಾಗ್ ಬಳಸಿ ಸಾಲು ಸಾಲು ಟ್ವೀಟ್‌ಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಕಾರಣ ತಮಿಳು ನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಲಾವಣ್ಯ ಎಂಬ ಹುಡುಗಿ. ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಹಿಂಸೆ ನೀಡುತ್ತಿದ್ದ ಹಿನ್ನೆಲೆ ಲಾವಣ್ಯ ಎನ್ನುವ ಹುಡುಗಿ ಆತ್ಮ ಹತ್ಯೆಗೆ ಶರಣಾಗಿದ್ದಾಳೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಆಕೆಯ ಹೆಸರು ಲಾವಣ್ಯ ಆದ ಕಾರಣ ಲಾವಣ್ಯ ತ್ರಿಪಾಠಿ ಹೆಸರು ಬಳಸಿ, ಸಾಕಷ್ಟು ಮಂದಿ ಈ ವಿಚಾರವಾಗಿ ಹಲವು ಟ್ವೀಟ್‌ಗಳನ್ನು ಮಾಡಿದ್ದಾರೆ.

ಚೀಪ್ ನಟಿಯ ಹೆಸರು ಬಳಸಬೇಡಿ ಎಂದು ಕಮೆಂಟ್!

ಹೀಗೆ ಇದೇ ಹ್ಯಾಶ್‌ಟ್ಯಾಗ್‌ನ ಅಡಿಯಲ್ಲಿ ಸಾಲು ಸಾಲು ಟ್ವೀಟ್‌ಗಳನ್ನು ಮಾಡಲಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿ "ದಯವಿಟ್ಟು #ಲಾವಣ್ಯತ್ರಿಪಟಿ ಬಳಸಬೇಡಿ. ಆಕೆ ಒಬ್ಬ ನಟಿ, ಲಾವಣ್ಯ ತಮಿಳುನಾಡಿನ ಸಾಮಾನ್ಯ ದಲಿತ ಹುಡುಗಿ. ಆಕೆ ಧರ್ಮಕ್ಕಾಗಿ ಪರಮ ತ್ಯಾಗ ಮಾಡಿದ್ದಾಳೆ, ಆಕೆಯನ್ನು ಈ ರೀತಿ ಚೀಪ್ ನಟಿಯರೊಂದಿಗೆ ಹೋಲಿಸಬೇಡಿ." ಎಂದು ಟ್ವೀಟ್ ಮಾಡಿದ್ದಾನೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಗ್ಗದ ನಟಿ ಎಂದವನಿಗೆ ಉತ್ತರಿಸಿದ ಲಾವಣ್ಯ ತ್ರಿಪಾಠಿ!

ತನ್ನ ಹೆಸರಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದರು, ಟ್ವೀಟ್ ಆಗುತ್ತಲಿದ್ದರು ನಟಿ ಲಾವಣ್ಯ ತಲೆಕೆಡಿಸಿಕೊಂಡಿರಲಿಲ್ಲ. ಆಕೆ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ. ಆದರೆ ಈ ರೀತಿಯ ಕಮೆಂಟ್ ನೋಡಿ, ಲಾವಣ್ಯ ಕೆಂಡಾಮಂಡಲವಾಗಿದ್ದಾರೆ. "ನಿಮ್ಮಂತಹ ಗಂಡಸರು, ಏನಾದ್ರೂ ಅನಾಹುತವಾದಾಗ ಹೆಣ್ಣನ್ನು ಗೌರವಿಸೋಕೆ ಶುರು ಮಾಡ್ತಾರೆ, ಅದಕ್ಕೂ ಮುನ್ನ ಚೀಪ್ ಅಂತಾರೆ. ಎಲ್ಲರನ್ನು ಗೌರವಿಸೋಕೆ ಕಲಿ. ನಡೆದಿರುವುದು ಅತ್ಯಂತ ದುರದೃಷ್ಟಕರ ಘಟನೆ, ಆದರೆ ಇದೇ ನಮ್ಮ ಸಮಾಜದ ವಾಸ್ತವ." ಎಂದು ಲಾವಣ್ಯ ಟ್ವೀಟ್ ಮಾಡಿವ ಮೂಲಕ ಉತ್ತರ ನೀಡಿದ್ದಾರೆ.

ಮದುವೆ ಗಾಸಿಪ್ ಬಗ್ಗೆ ಮಾತನಾಡದ ನಟಿ!

ಮದುವೆ ಗಾಸಿಪ್ ಬಗ್ಗೆ ಮಾತನಾಡದ ನಟಿ!

ಇದಕ್ಕೆ ಉತ್ತರಿಸಿದ ನಟಿ ಲಾವಣ್ಯ ತಮ್ಮ ಮದುವೆ ಗಾಸಿಪ್ ಬಗ್ಗೆ ಮಾತ್ರ ಮಾತನಾಡಿಲ್ಲ. ನಟಿ ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಜೋರಾಗಿ ಹಬ್ಬಿತ್ತು. ಆದರೆ ಈ ಬಗ್ಗೆ ಇಬ್ಬರೂ ಕೂಡ ಮೌನ ವಹಿಸಿದ್ದಾರೆ. ಇದು ಕೇವಲ ಗಾಸಿಪ್ ಅಂತಲೂ ಹೇಳಿಕೊಂಡಿಲ್ಲ. ಹಾಗಾಗಿ ಇನ್ನೂ ಕೂಡ ಈ ಸುದ್ದಿಗೆ ಜೀವ ಇದೆ. ಈ ಬಗ್ಗೆ ಇಬ್ಬರ ಕಡೆಯಿಂದ ಪ್ರತಿಕ್ರಿಯೆ ಬರುವ ತನಕ ಮದುವೆ ಬಗ್ಗೆ ಖಚಿತ ನಿಲುವು ಸಿಗುವುದಿಲ್ಲ.

More from Filmibeat

English summary
Lavanya Tripathi Slaps For Being Called Cheap And Trolled Her Name,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X