NTR30 ಸೆಟ್‌ನಲ್ಲಿ ರಕ್ತದ ಟ್ಯಾಂಕ್ ನೋಡಿ ಫ್ಯಾನ್ಸ್ ಶಾಕ್: ರಕ್ತಸಿಕ್ತ ಅಧ್ಯಾಯದಲ್ಲಿ ನೆತ್ತರ ಕೋಡಿ ಹರಿಸ್ತಾರಾ ತಾರಕ್?
ಯಂಗ್ ಟೈಗರ್ ಎನ್‌ಟಿಆರ್ ನಟನೆಯ 30ನೇ ಸಿನಿಮಾ ಚಿತ್ರೀಕರಣ ಶುರುವಾಗಿದೆ. 'RRR' ತೆರೆಕಂಡು ವರ್ಷ ಕಳೆದ ಮೇಲೆ ಹೊಸ ಚಿತ್ರಕ್ಕೆ ತಾರಕ್ ಕೈ ಹಾಕಿದ್ದಾರೆ. ಇತ್ತೀಚೆಗೆ ಮುಹೂರ್ತ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿತ್ತು. 2 ದಿನ ಚಿತ್ರೀಕರಣ ನಡೆದಿದೆ. ಸಿನಿಮಾ ಶೂಟಿಂಗ್ ಸೆಟ್‌ನ ಫೋಟೊವೊಂದು ಲೀಕ್ ಆಗಿದ್ದು ಸೆಟ್‌ನಲ್ಲಿ ನಕಲಿ ರಕ್ತದ ಟ್ಯಾಂಕ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ನಿರ್ದೇಶಕ ಕೊರಟಾಲ ಶಿವ 'ಆಚಾರ್ಯ' ಸಿನಿಮಾ ಸೋಲಿನಿಂದ ಎದ್ದು ಬರುವ ಲೆಕ್ಕಾಚಾರದಲ್ಲಿದ್ದಾರೆ. ಕಳೆದೊಂದು ವರ್ಷದಿಂದ NTR30 ಸಿನಿಮಾ ಕಥೆಯನ್ನು ತಿದ್ದಿ ತೀಡಿ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಸ್ ಹೀರೊ ಎನ್‌ಟಿಆರ್‌ಗಾಗಿ ಒಂದು ಔಟ್ ಅಂಡ್ ಔಟ್ ಮಾಸ್ ಮಸಾಲಾ ಸಬ್ಜೆಕ್ಟ್ ರೆಡಿ ಮಾಡಿದ್ದಾರೆ. ಸಿನಿಮಾ ಮುಹೂರ್ತದ ವೇಳೆಯೂ ಸಿನಿಮಾ ಥೀಮ್ ಬಗ್ಗೆ ಹಿಂಟ್ ಕೊಟ್ಟಿದ್ದರು. ತಾರಕ್ ಸಿನಿಮಾ ಅಂದ್ಮೇಲೆ ಆಕ್ಷನ್ ಸೀನ್ಸ್ ಇರಲೇಬೇಕು. ಇನ್ನು ಯಂಗ್ ಟೈಗರ್ ಕತ್ತಿ ಹಿಡ್ದು ದುಷ್ಟರ ತಲೆಗಳನ್ನು ಚೆಂಡಾಡಿದರೆ ಅಭಿಮಾನಿಗಳಿಗೆ ಹಬ್ಬ.

NTR30 ಚಿತ್ರದಲ್ಲೂ ಸಾಕಷ್ಟು ಆಕ್ಷನ್ ಸೀಕ್ವೆನ್ಸ್ ಇರಲಿದೆ. ತಾರಕ್ ಕತ್ತಿ ಹಿಡಿದು ರಕ್ತದ ಕೋಡಿ ಹರಿಸುವುದು ಗ್ಯಾರೆಂಟಿ ಎನ್ನುವಂತಿದೆ. ಸದ್ಯ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿರುವ ನಕಲಿ ರಕ್ತ ತುಂಬಿದ ಟ್ಯಾಂಕ್ ಇದನ್ನು ಸಾರಿ ಸಾರಿ ಹೇಳುತ್ತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಬಾಟಲ್ ಲೆಕ್ಕದಲ್ಲಿ ನಕಲಿ ರಕ್ತ ಬಳಸಿ ಸಿನಿಮಾ ಚಿತ್ರೀಕರಣ ನಡೆಸುತ್ತಾರೆ. ಮೂರ್ಲಾಲ್ಕು ಸಾವಿರ ಲೀಟರ್ ಟ್ಯಾಂಕ್‌ನಲ್ಲಿ ನಕಲಿ ರಕ್ತ ಸಿದ್ಧಪಡಿಸಿ ಚಿತ್ರೀಕರಣ ನಡೆಸುತ್ತಿದ್ದಾರಾ? ಎಂದು ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಸೆಟ್‌ನಿಂದ ಲೀಕ್ ಆಗಿರುವ ಫೋಟೊ ಸಖತ್ ವೈರಲ್ ಆಗ್ತಿದೆ.
ಫಸ್ಟ್ ಶೆಡ್ಯೂಲ್ ಶೂಟಿಂಗ್‌ನಲ್ಲಿ ಈ ಡ್ಯೂಪ್ ಬ್ಲಡ್ ಬಳಸಿ ಚಿತ್ರೀಕರಣ ನಡೆಸಲಾಗ್ತಿದೆ. ಸದ್ಯ ಲೀಕ್ ಆಗಿರುವ ಫೋಟೊ ನೋಡಿ ಫ್ಯಾನ್ಸ್ ಸಿನಿಮಾದಲ್ಲಿ ಬ್ಲಡ್ ಬಾತ್ ಗ್ಯಾರೆಂಟಿ ಎಂದು ಪೋಸ್ಟ್ ಮಾಡುತ್ತಿದ್ದಾರೆ. ತಾರಕ್ ಅಂದರೆ ಆಕ್ಷನ್ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್. ಮಾಸ್ ಸಿನಿಮಾಗಳ ಡೈರೆಕ್ಟರ್ ಸಿಕ್ಕಿದ್ರೆ, ಇಬ್ಬರ ಕಾಂಬಿನೇಷನ್‌ನಲ್ಲಿ ಸಿಲ್ವರ್ ಸ್ಕ್ರೀನ್ ಶೇಕ್ ಆಗೋದು ಫಿಕ್ಸ್. ಈ ಚಿತ್ರಕ್ಕಾಗಿ ಕೊರಟಾಲ ಶಿವ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ 'ಜನತಾ ಗ್ಯಾರೇಜ್' ಸಿನಿಮಾ ಬಂದು ಗೆದ್ದಿತ್ತು.

ಇತ್ತೀಚೆಗೆ NTR30 ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಕೊರಟಾಲ ಶಿವ, ಮೃಗಗಳನ್ನು ಬೇಟೆ ಆಗುವ ವೀರನಾಗಿ ಎನ್‌ಟಿಆರ್ ರೋಲ್ ಬಹಳ ಪವರ್‌ಫುಲ್ ಆಗಿ ಇರುತ್ತದೆ ಎಂದಿದ್ದರು. "ಒಂದು ಸಮುದ್ರ ತೀರದ ಪ್ರಾಂತ್ಯ. ನಾವು ಮರೆತು ಹೋದ ಭೂ ಪ್ರದೇಶ. ಆ ಪ್ರದೇಶದಲ್ಲಿ ಮನುಷ್ಯರಿಗಿಂತ ಹೆಚ್ಚು ಮೃಗಗಳು(ಮೃಗದಂತಹ ಮನುಷ್ಯರು) ಇರ್ತಾವೆ. ಭಯ ಅಂದರೆ ಏನು ಎಂದು ಗೊತ್ತಿಲ್ಲದ ಮೃಗಗಳು ಅವು. ದೇವರು ಅಂದರೂ ಭಯ ಇಲ್ಲ. ಸಾವು ಅಂದರೂ ಭಯ ಇಲ್ಲ. ಆದರೆ ಅವನೊಬ್ಬ ಅಂದರೆ ಭಯ. ಆ ಭಯ (ಎನ್‌ಟಿಆರ್ ಪಾತ್ರದ ಬಗ್ಗೆ) ಏನು ಎನ್ನುವುದು ನಿಮಗೆ ಗೊತ್ತಿರುತ್ತದೆ ಎಂದು ಕಥೆಯ ಬಗ್ಗೆ ಸುಳಿವು ಕೊಟ್ಟಿದ್ದರು.
ಕೊರಟಾಲ ಶಿವ ಹೇಳಿದ ಕಥೆಯ ಜೊತೆಗೆ ಲೀಕ್ ಆಗಿರುವ ಬ್ಲಡ್ ಟ್ಯಾಂಕ್ ಫೋಟೋ ನೋಡಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಇತ್ತೀಚೆಗೆ ನಡೆದ ಸಿನಿಮಾ ಮುಹೂರ್ತ ಸಮಾರಂಭದಲ್ಲಿ ನಿರ್ಶೇಶಕರಾದ ರಾಜಮೌಳಿ ಹಾಗೂ ಪ್ರಶಾಂತ್ ನೀಲ್ ಭಾಗಿ ಆಗಿ ತಂಡಕ್ಕೆ ಶುಭ ಹಾರೈಸಿದ್ದರು. ಬಾಲಿವುಡ್ ಬ್ಯೂಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಈಕೆಯ ಚೊಚ್ಚಲ ಸೌತ್ ಸಿನಿಮಾ. ಎನ್‌ಟಿಆರ್ ಆರ್ಟ್ಸ್, ಯುವಸುಧ ಆರ್ಟ್ಸ್ ಬ್ಯಾನರ್‌ನಲ್ಲಿ ಇನ್ನು ಹೆಸರಿಡದ ಈ ಸಿನಿಮಾ ನಿರ್ಮಾಣವಾಗುತ್ತಿದೆ.


Click it and Unblock the Notifications











