For Quick Alerts
  ALLOW NOTIFICATIONS  
  For Daily Alerts

  ಪ್ರಶಾಂತ್‌ ನೀಲ್ ಪಕ್ಕ ನಿಂತು 'ಭಯವಾಗುತ್ತಿದೆ' ಎಂದ ವಿಜಯ್ ದೇವಕೊಂಡ!

  |

  ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಆಕ್ಷನ್ ಎಂಟರ್‌ಟ್ರೈನರ್ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸ್ತಿದೆ. ಈಗಾಗಲೇ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಮುಗಿದಿದೆ. ಬೆಳ್ಳಂಬೆಳಗ್ಗೆ ಆಂಧ್ರ, ತೆಲಂಗಾಣ ಸೇರಿದಂತೆ ಹಲವೆಡೆ ಶೋಗಳು ಶುರುವಾಗಿದೆ. ಇದೆಲ್ಲದರ ನಡುವೆ ವಿಜಯ್ ದೇವರಕೊಂಡ ಹಾಗೂ ಪ್ರಶಾಂತ್ ನೀಲ್ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗಿದೆ. ಸ್ವತಃ ವಿಜಯ್ ದೇವರಕೊಂಡ ಫೋಟೊ ಶೇರ್ ಮಾಡಿದ್ದಾರೆ.

  'ಲೈಗರ್' ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಹಾಕಿರುವ ಶ್ರಮ ಅಷ್ಟಿಷ್ಟಲ್ಲ. ಬಾಕ್ಸರ್ ಆಗಿ ನಟಿಸಲು ದೇಹ ದಂಡಿಸಿ, ಮಾರ್ಷಲ್ ಆರ್ಟ್ಸ್ ಕಲಿತು ಹಗಲಿರುಳು ಕಷ್ಟಪಟ್ಟಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಈ ಚಿತ್ರಕ್ಕಾಗಿ ಪೂರಿ ಅಂಡ್ ಟೀಮ್ ಕೆಲಸ ಮಾಡಿದೆ. ಅವರ ಶ್ರಮಕ್ಕೆ ಪ್ರತಿಫಲ ಸಿಗಲು ದಿನ ಬಂದೇ ಬಿಟ್ಟಿದೆ. ಇದೇ ಸಮಯದಲ್ಲಿ ಇಡೀ ಟೀಂ ಭರ್ಜರಿ ಪಾರ್ಟಿ ಮಾಡಿ ಎಂಜಾಯ್ ಮಾಡಿದೆ. ಅ ಪಾರ್ಟಿಯಲ್ಲಿ 'ಕೆಜಿಎಫ್' ಸಾರಥಿ ಪ್ರಶಾಂತ್ ನೀಲ್ ಕೂಡ ಭಾಗಿಯಾಗಿದ್ದಾರೆ. ವಿಜಯ್ ದೇವರಕೊಂಡ, ಪ್ರಶಾಂತ್‌ ನೀಲ್, ಅನನ್ಯಾ ಪಾಂಡೆ, ಚಾರ್ಮಿ, ಪೂರಿ ಜಗನ್ನಾಥ್, ಕೋನ ವೆಂಕಟ್, ಆಕಾಶ್ ಪೂರಿ ಸೇರಿದಂತೆ ಹಲವರು ಫೋಟೊಗೆ ಪೋಸ್ ಕೊಟ್ಟಿದ್ದಾರೆ.

  ಫೋಟೊದಲ್ಲಿ ಪ್ರಶಾಂತ್ ನೀಲ್ ಪಕ್ಕದಲ್ಲೇ ನಿಂತಿರುವ ವಿಜಯ್ ದೇವರಕೊಂಡ 'ಎಲ್ಲರೂ ನಗುತ್ತಿದ್ದೀವಿ. ಆದರೆ ಒಳಗೊಳಗೆ ಭಯವಾಗುತ್ತಿದೆ. ಒಂದಂತೂ ನಿಜ ಇವತ್ತು ನನಗೆ ನಂಬಿಕೆ ಇದೆ" ಎಂದು ಬರೆದು ಫೋಟೊ ಶೇರ್ ಮಾಡಿದ್ದಾರೆ. ಎಂತಹ ದೊಡ್ಡ ಸಿನಿಮಾ ಮಾಡಿದರೂ ತೆರೆಮೇಲೆ ಮ್ಯಾಜಿಕ್ ಆಗಬೇಕು. ಹೆತ್ತವರಿಗೆ ಹೆಗ್ಗಣ್ಣ ಮುದ್ದು ಇರಬಹುದು. ಆದರೆ ಫಸ್ಟ್ ಡೇ ಸಿನಿಮಾ ನೋಡಿದವರು ಏನು ಹೇಳುತ್ತಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಅದೇ ಭಯ ವಿಜಯ್ ದೇರವಕೊಂಡ ಅಂಡ್ ಟೀಮ್‌ಗೂ ಇದೆ. ಪ್ರಶಾಂತ್‌ ನೀಲ್ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿರುವುದನ್ನು ನೋಡಿದವರು ಇಬ್ಬರು ಸೇರಿ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂದು ಅಂದುಕೊಂಡಿದ್ದಾರೆ. ಆದರೆ ಪ್ರಶಾಂತ್‌ ನೀಲ್‌ಗೆ ಇರುವ ಸದ್ಯದ ಕಮೀಟ್‌ಮೆಂಟ್‌ಗಳನ್ನು ನೋಡಿದರೆ ಅದು ಸಾಧ್ಯವಿಲ್ಲ ಎನ್ನಬಹುದು.

  ಪ್ರಶಾಂತ್ ನೀಲ್ ಸದ್ಯ 'ಸಲಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಂತರ ಜ್ಯೂ. ಎನ್‌ಟಿಆರ್ ಸಿನಿಮಾಗೆ ಕಮೀಟ್ ಆಗಿದ್ದಾರೆ. ಇದರ ನಡುವೆ 'ಕೆಜಿಎಫ್'-3 ಮಾಡುವ ಬಗ್ಗೆಯೂ ಚರ್ಚೆ ನಡೀತಿದೆ. ಹಾಗಾಗಿ ಇದೆಲ್ಲದರ ಊಹಾಪೋಹ ಅಷ್ಟೆ. 'ಸಲಾರ್' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿ ಬೀಡುಬಿಟ್ಟಿರುವ ಪ್ರಶಾಂತ್‌ ನೀಲ್ ಫಿಲ್ಮ್ ನಗರ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನ ಸೂಪರ್ ಸ್ಟಾರ್‌ಗಳ ಜೊತೆಗೆಲ್ಲಾ ಆತ್ಮೀಯತೆ ಬೆಳೆಯುತ್ತಿದೆ. ಈ ಹಿಂದೆ ಚಿರಂಜೀವಿ ಹಾಗೂ ರಾಮ್‌ಚರಣ್ ತೇಜಾ ಜೊತೆಗೂ ನೀಲ್ ಕಾಣಿಸಿಕೊಂಡಿದ್ದರು.

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಲೈಗರ್' ಸಿನಿಮಾ ತೆರೆಗಪ್ಪಳಿಸಿದೆ. ರಮ್ಯಾಕೃಷ್ಣ, ಮೈಕ್ ಟೈಸನ್‌ರಂತಹ ದಿಗ್ಗಜರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಕರಣ್‌ ಜೋಹರ್‌ ಸಹಯೋಗದಲ್ಲಿ ಚಾರ್ಲಿ, ಪೂರಿ ಜಗನ್ನಾಥ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತೆಲುಗು ಸಿನಿಮಾ ಅನ್ನುವುದಕ್ಕಿಂದ ಇದು ಬಾಲಿವುಡ್ ಸಿನಿಮಾ ಅನ್ನುವಂತೆ ಕಟ್ಟಿಕೊಡಲಾಗಿದೆ. ಈಗಾಗಲೇ ಸಿನಿಮಾ ನೋಡಿದವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಚಿತ್ರದ ಭವಿಷ್ಯ ಏನು ಅನ್ನುವುದರ ಸಂಪೂರ್ಣ ಚಿತ್ರಣ ಸಿಗಲಿದೆ.

  English summary
  Liger Actor Vijay Devarakonda Shares Photo With KGF Director Prashanth Neel Goes Viral.
  Thursday, August 25, 2022, 8:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X