For Quick Alerts
  ALLOW NOTIFICATIONS  
  For Daily Alerts

  ನಟಿ ಚಾರ್ಮಿ ಕೌರ್ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ಪುರಿ ಜಗನ್ನಾಥ್!

  |

  ಟಾಲಿವುಡ್‌ನ ಡೇರಿಂಗ್ ಮತ್ತು ಡ್ಯಾಶಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್. ಹಲವು ವರ್ಷಗಳಿಂದ ಪುರಿ ಜಗನ್ನಾಥ್ ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಸೂಪರ್ ಡೂಪರ್ ಹಿಟ್ ಸಿನಿಮಾ ಮಾಡುವ ನಿರ್ದೇಶಕ ಪುರಿ ಜಗನ್ನಾಥ್.

  ಇತ್ತೀಚೆಗಷ್ಟೇ ಪುರಿ ನಿರ್ದೇಶಿಸಿದ 'ಇಸ್ಮಾರ್ಟ್‌ಶಂಕರ್' ಸೋಲಿನಿಂದ ಮೇಲೆದ್ದು ಬಂದಿದ್ದರು. ಈಗ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್' ನಿರ್ದೇಶಿಸಿದ್ದು, ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.

  ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಮೊದಲ ಸಿನಿಮಾವಿದು. ಈ ಸಿನಿಮಾದ ನಿರ್ಮಾಪಕಿಯಾಗಿ ಚಾರ್ಮಿ ಹಾಗೂ ನಿರ್ದೇಶಕನಾಗಿ ಪುರಿ ಜಗನ್ನಾಥ್ ಕೆಲಸ ಮಾಡಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಲಿ ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಇಬ್ಬರೂ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಿರ್ದೇಶಕ ಪುರಿ ಜಗನ್ನಾಥ್ ಕ್ಲಾರಿಟಿ ಕೊಟ್ಟಿದ್ದಾರೆ.

  ವಯಸ್ಸಾಗಿದ್ದರೆ ಹೀಗೆ ಹೇಳಲು ಸಾಧ್ಯವಿತ್ತೇ?

  ವಯಸ್ಸಾಗಿದ್ದರೆ ಹೀಗೆ ಹೇಳಲು ಸಾಧ್ಯವಿತ್ತೇ?

  ಚಿತ್ರರಂಗ ಅಂದ್ಮೇಲೆ ಗಾಸಿಪ್, ಸಂಬಂಧಗಳು ಸಹಜ. ಆಗಾಗ ಏನಾದರೂ ಒಂದು ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಸೆಲೆಬ್ರೆಟಿಗಳು ಇದ್ಯಾವುದರ ಬಗ್ಗೆನೂ ತೆಲೆಕೆಡಿಸಿಕೊಳ್ಳುವುದಿಲ್ಲ. ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ವಿಚಾರದಲ್ಲೂ ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ಚಾರ್ಮಿ ಕೌರ್ ಹಾಗೂ ಪುರಿ ಜಗನ್ನಾಥ್ ಲಿವ್ ಇನ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪುರಿ ಜಗನ್ನಾಥ್ ಸ್ಪಷ್ಟನೆ ನೀಡಿದ್ದಾರೆ." ಚಾರ್ಮಿಗೆ ವಯಸ್ಸು 50 ವರ್ಷ ಆಗಿದ್ದರೆ, ಜನರು ಅವಳ ಬಗ್ಗೆ ಇಷ್ಟೊಂದು ಕಾಳಜಿ ವಹಿಸುತ್ತಿರಲಿಲ್ಲ. ಆಕೆ ಸ್ಥೂಲಕಾಯದವಳಾಗಿದ್ದರೂ ಅಥವಾ ಬೇರೆಯವರನ್ನು ಮದುವೆಯಾದರೂ ಯಾರಿಗೂ ತೊಂದರೆಯಾಗುತ್ತಿರಲಿಲ್ಲ." ಎಂದು ಪುರಿ ಜಗನ್ನಾಥ್ ಪ್ರತಿಕ್ರಿಯಿಸಿದ್ದಾರೆ.

  ಚಾರ್ಮಿ ಚಿಕ್ಕ ವಯಸ್ಸಿನವಳು

  ಚಾರ್ಮಿ ಚಿಕ್ಕ ವಯಸ್ಸಿನವಳು

  ಚಾರ್ಮಿ ಕೌರ್ ಇನ್ನೂ ಚಿಕ್ಕ ವಯಸ್ಸಿನವಳು. ಈ ಕಾರಣಕ್ಕಾಗಿ ಇಬ್ಬರ ನಡುವೆ ಏನಾದರೂ ಸಂಬಂಧವಿದೆ ಎಂದು ಜನರು ಮಾತಾಡುತ್ತಿದ್ದಾರೆ. ಪ್ರತಿ ಜೋಡಿಯೂ ಪ್ರೀತಿ, ಪ್ರೇಮ ಹಾಗೂ ಲೈಂಗಿಕ ಆಕರ್ಷಣೆಯನ್ನು ಹೊಂದಿರುತ್ತಾರೆ ಎಂದು ನಾನು ಒಪ್ಪುತ್ತೇನೆ. ಅದರ ಹೊರತಾಗಿಯೂ, ಈ ಎಲ್ಲಾ ಭಾವನೆಗಳು ಬಹಳ ಬೇಗನೆ ಸಾಯುತ್ತದೆ. ನಾವು ಮದುವೆಯಾದೆವು. ಕೆಲವು ದಿನಗಳ ಬಳಿಕ ಆ ಆಸೆಗಳು ನಮ್ಮಿಂದ ದೂರವಾಗುತ್ತಾ ಹೋಗುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.

  13ನೇ ವಯಸ್ಸಿನಿಂದ ಗೊತ್ತು

  13ನೇ ವಯಸ್ಸಿನಿಂದ ಗೊತ್ತು

  ಪ್ರೀತಿ, ಪ್ರೇಮ ಪ್ರಯಣ ಏನೇ ಇದ್ದರೂ ಸ್ನೇಹ ಮಾತ್ರ ಶಾಶ್ವತವಾಗಿ ಉಳಿಯುತ್ತೆ ಎಂದಿದ್ದಾರೆ. ' ನನಗೆ 13ನೇ ವಯಸ್ಸಿನಿಂದಲೂ ಚಾರ್ಮಿ ಕೌರ್ ಪರಿಚಯವಿದೆ. ಹೆಚ್ಚು ಕಡಿಮೆ ಎರಡು ದಶಕಗಳಿಂದ ಅವರು ಗೊತ್ತು. ಆಕೆ ಎಷ್ಟು ಕಷ್ಟಪಡುತ್ತಾಳೆ ಎಂಬುದು ನನಗೆ ಗೊತ್ತಿದೆ." ಎಂದು ಪೂರಿ ಜಗನ್ನಾಥ್ ಹೇಳಿದ್ದಾರೆ. ಇಬ್ಬರೂ ಸ್ನೇಹಿತರು ಅನ್ನೋದನ್ನು ನಿರ್ದೇಶಕ ಪುರಿ ಜಗನ್ನಾಥ್ ಇತ್ತೀಚೆಗೆ ತೆಲುಗು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಸಿನಿಮಾಗಾಗಿ ಆಸ್ತಿ ಮಾರಾಟ

  ಸಿನಿಮಾಗಾಗಿ ಆಸ್ತಿ ಮಾರಾಟ

  ಚಾರ್ಮಿ ಕೌರ್ ಸಿನಿಮಾ ನಿರ್ಮಾಣ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದರು. ಎಲ್ಲಿ ಕಳೆದು ಹೋಯ್ತೋ ಅಲ್ಲಿಂದಲೇ ಪಡೆದುಕೊಳ್ಳಲು ಮುಂದಾಗಿದ್ದರು. ಹೀಗಾಗಿ ಸಿನಿಮಾರಂಗದಲ್ಲಿ ಕಳೆದು ಹೋದ ಸ್ಥಾನವನ್ನು ಮರಳಿ ಪಡೆಯಲು ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಇಬ್ಬರೂ ಆಸ್ತಿಯನ್ನು ಮಾರಿ ಇಸ್ಮಾರ್ಟ್ ಶಂಕರ್ ಸಿನಿಮಾವನ್ನು ಮಾಡಿದ್ದರು. ಆ ಸಿನಿಮಾದಲ್ಲಿ ರಾಂಪೋತಿನೇನಿ, ನಿಧಿ ಅಗರ್ವಾಲ್ ಹಾಗೂ ನಭಾ ನಟೇಶ್ ನಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಸುಮಾರು 75 ಕೋಟಿ ರೂ. ಕಲೆ ಹಾಕಿತ್ತು.

  English summary
  Liger Director Puri Jagannadh Clarity On His Relationship With Charmy Kaur, Know More.
  Saturday, August 20, 2022, 9:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X