Liger 2 : 'ಲೈಗರ್': ಮೊದಲ ಭಾಗ ಬಿಡುಗಡೆಗೆ ಮುನ್ನವೇ ಎರಡನೇ ಭಾಗ ಘೋಷಣೆ
ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಜೋರಾಗಿ ನಡೆಸುತ್ತಿದೆ. ಆದರೆ ಈ ಸಿನಿಮಾದ ಎರಡನೇ ಭಾಗ ಸಹ ಬರಲಿದೆ ಎಂದು ಸ್ವತಃ ವಿಜಯ್ ದೇವರಕೊಂಡ ಸ್ಪಷ್ಟಪಡಿಸಿದ್ದಾರೆ.
ಈಗಂತೂ ಸೀಕ್ವೆಲ್‌ಗಳ ಕಾಲ, 'ಬಾಹುಬಲಿ' ಸಿನಿಮಾದಿಂದ ಪ್ರೇರಿತವಾಗಿ ಹಲವು ಸಿನಿಮಾಗಳು ಎರಡೆರಡು ಭಾಗಗಳಲ್ಲಿ ಬಿಡುಗಡೆ ಆಗುತ್ತಿವೆ ಮತ್ತು ಯಶಸ್ಸನ್ನೂ ಗಳಿಸುತ್ತಿವೆ. ಹಾಗಾಗಿ 'ಲೈಗರ್' ಅನ್ನೂ ಎರಡು ಭಾಗದಲ್ಲಿ ಬಿಡುಗಡೆ ಬಿಡುಗಡೆ ಮಾಡಲು ನಿರ್ಧರಿಸಿದಂತಿದೆ ಚಿತ್ರತಂಡ.
ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ವಿಜಯ್ ದೇವರಕೊಂಡ, ಸಂದರ್ಶನವೊಂದರಲ್ಲಿ ಮಾತನಾಡಿ, 'ಲೈಗರ್' ಸಿನಿಮಾದ ಎರಡನೇ ಭಾಗ ನಿರ್ಮಿಸುವ ಯೋಜನೆ ಚಿತ್ರತಂಡಕ್ಕಿದೆ. ಆದರೆ ಅದು ಈಗಲೇ ಆಗುವುದಿಲ್ಲ ಅದಕ್ಕೆ ಹೆಚ್ಚಿನ ಸಮಯ ಹಿಡಿಯಲಿದೆ'' ಎಂದಿದ್ದಾರೆ.

ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಸ್ಪರ್ಧಿಯಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಅದ್ಭುತವಾಗಿ ಬಾಡಿ ಮಾಡಿಕೊಂಡು ಬಾಕ್ಸಿಂಗ್ ರಿಂಗ್‌ನಲ್ಲಿ ಎದುರಾಳಿಗಳ ಎದೆಗೆ ಒದೆಯುತ್ತಿದ್ದಾರೆ.
'ಬಾಹುಬಲಿ', 'ಕೆಜಿಎಫ್ 2' ಸಿನಿಮಾಗಳು ಎರಡೆರಡು ಭಾಗಗಳಲ್ಲಿ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿವೆ. ಇದೀಗ 'ಪುಷ್ಪ' ಸಿನಿಮಾದ ಎರಡನೇ ಭಾಗ ಸಹ ತಯಾರಾಗುತ್ತಿದೆ. ಇನ್ನೂ ಬಿಡುಗಡೆ ಆಗದ 'ಪೊನ್ನಿಯಿನ್ ಸೆಲ್ವನ್' ಸಹ ಎರಡು ಭಾಗದಲ್ಲಿ ಬರಲಿದೆ. ಇದೀಗ 'ಲೈಗರ್' ಸಹ ಎರಡು ಭಾಗದಲ್ಲಿ ಬರಲಿದೆ ಎನ್ನಲಾಗುತ್ತಿರುವುದು ಎರಡೂ ಸಿನಿಮಾಗಳ ಕತೆ ಒಂದೇ ಆಗಿರಲಿದೆಯೇ ಅಥವಾ ಭಿನ್ನವೇ ಕಾದು ನೋಡಬೇಕಿದೆ.
'ಲೈಗರ್' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ತಾಯಿಯಾಗಿ ರಮ್ಯಕೃಷ್ಣ ನಟಿಸಿದ್ದು ವಿಶೇಷ ಪಾತ್ರವೊಂದರಲ್ಲಿ ಜಗತ್ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ ಪುರಿ ಜಗನ್ನಾಥ್.


Click it and Unblock the Notifications











