ಪ್ರೀ ಬುಕಿಂಗ್‌ನಲ್ಲೇ ಕೋಟ್ಯಂತರ ಬಾಚಿದ 'ಲೈಗರ್': ಫುಲ್ ಖುಷಿಯಲ್ಲಿ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಇನ್ನೆರಡು ದಿನಗಳಲ್ಲಿ ಅಂದರೆ ಆಗಸ್ಟ್ 25ಕ್ಕೆ ಬಿಡುಗಡೆ ಆಗಲಿದೆ. ಪ್ರೀ ಬುಕಿಂಗ್ ಈಗಾಗಲೇ ಆರಂಭವಾಗಿದ್ದು ಸಿನಿಮಾ ಒಳ್ಳೆಯ ಓಪನಿಂಗ್ ಪಡೆವ ಎಲ್ಲ ಲಕ್ಷಗಳನ್ನು ತೋರಿಸಿದೆ.
ತೆಲುಗಿನ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾ ಆಗಸ್ಟ್ 25ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಸಿನಿಮಾದ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು ಸಾಕಷ್ಟು ಚಿತ್ರಮಂದಿರಗಳಲ್ಲಿ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆ ಮೂಲಕ ಒಳ್ಳೆಯ ಓಪನಿಂಗ್ ಅನ್ನು 'ಲೈಗರ್' ಪಡೆಯುವ ನಿರೀಕ್ಷೆ ಹುಟ್ಟಿಸಿದೆ.
ಹೈದರಾಬಾದ್, ತೆಲಂಗಾಣ ಇನ್ನಿತರೆ ಕಡೆಗಳಲ್ಲಿ 'ಲೈಗರ್' ಸಿನಿಮಾದ ಬಹುತೇಕ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಅದರಲ್ಲಿಯೂ ಹೈದರಾಬಾದ್, ಗುಂಟೂರು, ವಿಜಯವಾಡ ಇಂಥಹಾ ಟೈರ್ 1 ನಗರಗಳಲ್ಲಿ ಸಿನಿಮಾದ ಬಗ್ಗೆ ಉತ್ಸುಕತೆ ಇದೆ. ಮಲ್ಟಿಪ್ಲೆಕ್ಸ್‌ಗಳಲ್ಲಿಯೂ 'ಲೈಗರ್' ಸಿನಿಮಾದ ಟಿಕೆಟ್‌ಗೆ ಭಾರಿ ಡಿಮ್ಯಾಂಡ್ ಇರುವುದು ಬುಕ್‌ಮೈ ಶೋನಿಂದ ತಿಳಿದುಬರುತ್ತಿದೆ.

ಮುಂಬೈನಲ್ಲಿ 'ಲೈಗರ್' ಕಮಾಲ್ ಮಾಡಲಿದೆ ಎನ್ನಲಾಗಿತ್ತು. ಆದರೆ ಅಲ್ಲಿ ಈ ಸಿನಿಮಾದ ಹೆಚ್ಚು ಟಿಕೆಟ್‌ಗಳು ಪ್ರೀ ಬುಕ್ ಆಗಿಲ್ಲ. ಮುಂಬೈನಲ್ಲಿ ಸಾಕಷ್ಟು ಚಿತ್ರಮಂದಿರಗಳು 'ಲೈಗರ್'ಗೆ ದೊರಕಿವೆ ಆದರೆ ಟಿಕೆಟ್ ಖರೀದಿಗೆ ಜನ ಮುಗಿಬಿದ್ದಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಚೆನ್ನೈ, ಕೊಚ್ಚಿಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.
'ಲೈಗರ್' ಸಿನಿಮಾ ವಿಶ್ವದಾದ್ಯಂತ ಪ್ರೀಬುಕಿಂಗ್‌ನಿಂದ ಸುಮಾರು 15 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಆದರೆ ಬುಕ್‌ಮೈಶೋ ಮೇಲೆ ಕಣ್ಣಾಡಿಸಿದರೆ ಆಂಧ್ರ-ತೆಲಂಗಾಣದ ಹೊರತಾಗಿ ಇನ್ನಾವ ರಾಜ್ಯದಲ್ಲಿಯೂ 'ಲೈಗರ್' ವೀಕ್ಷಿಸಲು ವೀಕ್ಷಕರು ಆತುರ ತೋರಿಲ್ಲ. ಆದರೆ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿ ಇದ್ದು, ಈ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆಯಬಹುದೇ ಎಂದು ನೋಡಬೇಕಿದೆ.


Click it and Unblock the Notifications











