ನಟ ರವಿತೇಜ ಜೊತೆ ಲಿಪ್‌ಲಾಕ್: ಬೋಲ್ಡ್ ಉತ್ತರ ನೀಡಿದ ಮೀನಾಕ್ಷಿ
ತೆಲುಗು ಸಿನಿಮಾ ರಂಗದ ಸ್ಟಾರ್ ನಟ ರವಿತೇಜ ನಟಿಸಿರುವ 'ಖಿಲಾಡಿ' ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿದೆ.
ಈ ಟ್ರೇಲರ್ ವೈರಲ್ ಆಗಲು ಮುಖ್ಯ ಕಾರಣ ರವಿತೇಜ ಲಿಪ್‌ಲಾಕ್. ಟ್ರೇಲರ್‌ನಲ್ಲಿ ರವಿತೇಜ ನಟಿ ಮೀನಾಕ್ಷಿ ಜೊತೆ ಮಾಡಿರುವ ಲಿಪ್‌ಲಾಕ್ ಹಲವರ ಹುಬ್ಬೇರಿಸಿದೆ.
54 ವರ್ಷದ ನಟ ರವಿತೇಜ ಈ ವಯಸ್ಸಿನಲ್ಲಿ ಚುಂಬನ ದೃಶ್ಯಗಳಲ್ಲಿ ನಟಿಸುವ ಅವಶ್ಯಕತೆ ಏನಿತ್ತು ಎಂಬ ಚರ್ಚೆಯ ಜೊತೆಗೆ ನಟಿ ಮೀನಾಕ್ಷಿ, ಚುಂಬನ ದೃಶ್ಯದಲ್ಲಿ ನಟಿಸಿದ ಬಗ್ಗೆಯೂ ಟೀಕೆಗಳು ವ್ಯಕ್ತವಾಗುತ್ತಿವೆ. ರವಿತೇಜ ಜೊತೆಗೆ ಲಿಪ್‌ಲಾಕ್ ಬಗ್ಗೆ ತುಟಿ ಬಿಚ್ಚಿರುವ ಮೀನಾಕ್ಷಿ ಬೋಲ್ಡ್ ಹೇಳಿಕೆಯನ್ನೇ ನೀಡಿದ್ದಾರೆ.
''ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕೆಂದು, ಸಿನಿಮಾದಲ್ಲಿ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳೂ ಇರಲಿವೆಯೆಂದೂ ನಿರ್ದೇಶಕರು ನನಗೆ ಮೊದಲೇ ಹೇಳಿದ್ದರು. ಚುಂಬನ ದೃಶ್ಯಗಳ ಬಗ್ಗೆಯೂ ಹೇಳಿದ್ದರು. ಕಮರ್ಶಿಯಲ್ ಸಿನಿಮಾದಲ್ಲಿ ಇವೆಲ್ಲವೂ ಮಾಮೂಲಾದ್ದರಿಂದ ನಾನು ಒಪ್ಪಿಕೊಂಡೆ. ಚುಂಬನ ದೃಶ್ಯಗಳಲ್ಲಿ ನಟಿಸಲು ನನಗೆ ಸಂಕೋಚವೇನೂ ಇಲ್ಲ'' ಎಂದಿದ್ದಾರೆ ನಟಿ ಮೀನಾಕ್ಷಿ ಚೌಧರಿ. ಆ ಮೂಲಕ ತಾವು ಮುಂದಿನ ಸಿನಿಮಾಗಳಲ್ಲಿಯೂ ಅವಶ್ಯಕತೆ ಇದ್ದರೆ ಚುಂಬನ ದೃಶ್ಯಗಳಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದಾರೆ.

ಎರಡನೇ ಯೋಚನೆ ಮಾಡದೆ ಒಪ್ಪಿಕೊಂಡೆ: ಮೀನಾಕ್ಷಿ
''ಖಿಲಾಡಿ' ಸಿನಿಮಾದ ಅವಕಾಶ ಬಂದಾಗ ಎರಡನೇ ಬಾರಿ ಯೋಚನೆ ಮಾಡದೆ ನಾನು ಓಕೆ ಹೇಳಿದೆ. ನನ್ನ ಎರಡನೇಯ ಸಿನಿಮಾದಲ್ಲಿಯೇ ರವಿತೇಜ ಅಂಥಹಾ ದೊಡ್ಡ ನಟರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಹಾಗಾಗಿ ಮರು ಯೋಚನೆ ಮಾಡದೆ ಸಿನಿಮಾ ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ನನಗೆ ಬಹಳ ಖುಷಿಯಿದೆ. ಸಿನಿಮಾ ಯಶಸ್ಸು ಗಳಿಸುವ ವಿಶ್ವಾಸವಿದೆ. ನನ್ನ ಭವಿಷ್ಯದ ಬಗ್ಗೆಯೂ ಸಾಕಷ್ಟು ಭರವಸೆ ಇದೆ'' ಎಂದಿದ್ದಾರೆ ಮೀನಾಕ್ಷಿ.

ತಿರುಳುಳ್ಳ ಪಾತ್ರದಲ್ಲಿ ನಟಿಸಿದ್ದೇನೆ: ಡಿಂಪಲ್
'ಖಿಲಾಡಿ' ಸಿನಿಮಾದಲ್ಲಿ ಮೀನಾಕ್ಷಿ ಜೊತೆಗೆ ಡಿಂಪಲ್ ಹಯಾತಿ ಸಹ ನಾಯಕಿಯಾಗಿ ನಟಿಸಿದ್ದು, ಸಿನಿಮಾದಲ್ಲಿನ ಕ್ಯಾಚ್ ಮೀ ಹಾಡಿಗಾಗಿಯೇ ಸುಮಾರು 6 ಕೆಜಿ ತೂಕ ಇಳಿಸಿಕೊಂಡಿದ್ದಾಗಿ ಹೇಳಿದ್ದಾರೆ ಡಿಂಪಲ್. ''ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳುವ, ಗ್ಲಾಮರ್‌ಗಾಗಿ ಮಾತ್ರವೇ ಸೀಮಿತವಾದ ಪಾತ್ರಗಳನ್ನು ಮಾಡುವ ಅವಕಾಶಗಳು ನನಗೆ ಬಂದಿದ್ದವು ಆದರೆ ನಾನು ಅವುಗಳನ್ನೆಲ್ಲ ನಿರಾಕರಿಸಿದೆ. ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದೆ. ನನಗೆ ರವಿತೇಜರ ಈ ಸಿನಿಮಾ ಸಿಕ್ಕಿತು. ಈ ಸಿನಿಮಾದಲ್ಲಿ ಮೂರು ಹಾಡುಗಳಲ್ಲಿ ನಾನು ನರ್ತಿಸಿದ್ದೇನೆ. ಮೂರು ಹಾಡುಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿವೆ. ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಮಹತ್ವವಿದೆ. ಒಳ್ಳೆಯ ತಿರುಳುಳ್ಳ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಈ ರೀತಿಯ ಪಾತ್ರದಲ್ಲಿ ನಾನು ನಟಿಸುತ್ತಿರುವುದು ಇದೇ ಮೊದಲು'' ಎಂದು ಮೀನಾಕ್ಷಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.

ಡಿಂಪಲ್ ಹಯಾತಿ ಸಹ ಇದ್ದಾರೆ
''ಕ್ಯಾಚ್ ಮೀ' ಹಾಡನ್ನು ಇಟಲಿಯಲ್ಲಿ ಚಿತ್ರೀಕರಣ ಮಾಡುವ ಯೋಜನೆಯಿತ್ತು, ಹಾಗಾಗಿ ಆರು ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ನಿರ್ದೇಶಕರು ಹೇಳಿದ್ದರು. ಅಂತೆಯೇ ನಾನು ನಿರ್ದಿಷ್ಟ ಡಯೆಟ್ ಪಾಲಿಸಿದೆ. ಸತತವಾಗಿ ಜಿಮ್‌ನಲ್ಲಿ ವರ್ಕೌಟ್ ಮಾಡಿ ತಯಾರಾದೆ. ಆದರೆ ಕೊರೊನಾ ಕಾರಣಕ್ಕೆ ಇಟಲಿ ಚಿತ್ರೀಕರಣ ರದ್ದಾಗಿ ಇಲ್ಲಿಯೇ ಸೆಟ್‌ನಲ್ಲಿ ಚಿತ್ರಿಕರಣ ಮಾಡಲಾಯ್ತು ಎಂದು ಡಿಂಪಲ್ ಹೇಳಿದ್ದಾರೆ. ಡಿಂಪಲ್ ಹಾಗೂ ಮೀನಾಕ್ಷಿ ಇಬ್ಬರಿಗೂ ಈ ಸಿನಿಮಾ ಮೊದಲ ದೊಡ್ಡ ಪ್ರಾಜೆಕ್ಟ್ ಆಗಿದ್ದು ಇಬ್ಬರೂ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಫೆಬ್ರವರಿ 11ಕ್ಕೆ ಸಿನಿಮಾ ಬಿಡುಗಡೆ
'ಖಿಲಾಡಿ' ಸಿನಿಮಾವು ಭಾರಿ ಮೊತ್ತದ ಹಣದ ಸುತ್ತ ಸುತ್ತುವ ಕತೆಯನ್ನು ಹೊಂದಿದೆ. ಆ ಭಾರಿ ಮೊತ್ತದ ಹಣವನ್ನು ತಮ್ಮದಾಗಿಸಿಕೊಳ್ಳಲು ನಾಯಕ ಸೇರಿದಂತೆ ವಿಲನ್‌ಗಳು ಸತತ ಪ್ರಯತ್ನ ಪಡುವುದು ಸಿನಿಮಾದ ಕತೆ ಅಂತಿಮವಾಗಿ ಆ ಹಣ ಯಾರ ಪಾಲಾಗುತ್ತದೆ ಎಂಬುದು ಟ್ವಿಸ್ಟ್. ಸಿನಿಮಾವನ್ನು ರಮೇಶ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರವಿತೇಜ ಜೊತೆಗೆ ಅರ್ಜುನ್ ಸರ್ಜಾ ಸಹ ನಟಿಸಿದ್ದಾರೆ. ಸಂಗೀತವನ್ನು ದೇವಿಶ್ರೀ ಪ್ರಸಾದ್ ನೀಡಿದ್ದಾರೆ. ಸಿನಿಮಾವು ಫೆಬ್ರವರಿ 11ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











