ಅಮೆರಿಕಾದಲ್ಲಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದ ಚಿತ್ರಗಳು; ಪ್ಯಾನ್ ಇಂಡಿಯಾ ಮಾಡದಿದ್ರೂ ಈತ ಕಿಂಗ್!

List of telugu actors with highest number of 2 million movies in USA; Mahesh Babu tops the list

ಭಾರತದ ಚಿತ್ರಗಳು ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೇ ಸಾಗರದಾಚೆಗೂ ದೊಡ್ಡ ಮಾರುಕಟ್ಟೆಯನ್ನು ಹೊಂದಿವೆ. ಅದರಲ್ಲೂ ಈ ಹಿಂದೆ ಹಿಂದಿ ಚಿತ್ರಗಳನ್ನು ವಿದೇಶಿಗರು ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸುತ್ತಿದ್ದರು. ನಂತರದ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರಗಳು ಸಹ ಸಾಗರದಾಚೆಗೆ ಮಾರುಕಟ್ಟೆಯನ್ನು ಕಂಡುಕೊಂಡವು. ಯಾವಾಗ ದಕ್ಷಿಣ ಭಾರತದ ಚಿತ್ರಗಳನ್ನು ಆಸ್ಟ್ರೇಲಿಯಾ ಹಾಗೂ ಅಮೆರಿಕಾ ರೀತಿಯ ದೊಡ್ಡ ದೇಶಗಳಲ್ಲಿ ಬಿಡುಗಡೆ ಮಾಡಲು ಆರಂಭಿಸಿದರೋ ಆಗಿನಿಂದ ದಕ್ಷಿಣ ಭಾರತದ ಚಿತ್ರರಂಗಗಳ ಚಿತ್ರಗಳು ಅಲ್ಲಿ ಸದ್ದು ಮಾಡಲಾರಂಭಿಸಿದವು.

ಅದರಲ್ಲಿಯೂ ಈ ಪ್ಯಾನ್ ಇಂಡಿಯಾ ಎಂಬ ಟ್ರೆಂಡ್ ಆರಂಭವಾದ ಬಳಿಕ ಮಾರುಕಟ್ಟೆ ಮತ್ತಷ್ಟು ವಿಸ್ತರಿಸಲ್ಪಟ್ಟಿತು ಎಂದೇ ಹೇಳಬಹುದು. ಹೌದು, ಬಾಹುಬಲಿ ಚಿತ್ರ ಬಿಡುಗಡೆಯಾದ ಬಳಿಕ ವಿದೇಶಿ ಮಂದಿ ದಕ್ಷಿಣ ಭಾರತದ ಚಿತ್ರರಂಗಗಳ ಚಿತ್ರಗಳನ್ನು ಹೆಚ್ಚು ವೀಕ್ಷಿಸಲು ಆರಂಭಿಸಿದ್ದು ನಿಜ. ಬಾಹುಬಲಿ 1 ಹಾಗೂ ಬಾಹುಬಲಿ 2 ಈ ಎರಡೂ ಚಿತ್ರಗಳೂ ಸಹ ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ 2 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಕೆ ಮಾಡಿದವು. ಬಳಿಕ ಬಂದ ಹಲವು ಟಾಲಿವುಡ್ ಚಿತ್ರಗಳು ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ 2 ಮಿಲಿಯನ್‌ಗಿಂತ ಹೆಚ್ಚು ಕಲೆಕ್ಷನ್ ಮಾಡಿದವು.

ಸದ್ಯ ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ತೆಲುಗು ಚಿತ್ರಗಳ ಪೈಕಿ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಸಹ ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ 2 ಮಿಲಿಯನ್ ಡಾಲರ್‌ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಹೀಗೆ ವಾಲ್ತೇರು ವೀರಯ್ಯ ಅಮೆರಿಕಾದಲ್ಲಿ 2 ಮಿಲಯನ್ ಡಾಲರ್ ಕ್ಲಬ್ ಸೇರಿದ ಬೆನ್ನಲ್ಲೇ ತೆಲುಗಿನ ಯಾವ ನಟರ ಚಿತ್ರಗಳು ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಬಾರಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿವೆ ಎಂಬ ಚರ್ಚೆ ಹೆಚ್ಚಾಗಿದ್ದು, ಅದರ ಪಟ್ಟಿ ಬಿಡುಗಡೆಗೊಂಡಿದೆ.

ಅತಿಹೆಚ್ಚು ಬಾರಿ 2 ಮಿಲಿಯನ್ ಡಾಲರ್ ಕಲೆಕ್ಷನ್

ಅತಿಹೆಚ್ಚು ಬಾರಿ 2 ಮಿಲಿಯನ್ ಡಾಲರ್ ಕಲೆಕ್ಷನ್

ಅಮೆರಿಕಾ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಬಾರಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದ ತೆಲುಗು ನಟರ ಪಟ್ಟಿ ಈ ಕೆಳಕಂಡಂತಿದೆ..
ಮಹೇಶ್ ಬಾಬು - 4 ಚಿತ್ರಗಳು
ಪ್ರಭಾಸ್ - 4 ಚಿತ್ರಗಳು
ಜೂನಿಯರ್ ಎನ್‌ಟಿಆರ್ - 3 ಚಿತ್ರಗಳು
ಚಿರಂಜೀವಿ - 3 ಚಿತ್ರಗಳು
ಪವನ್ ಕಲ್ಯಾಣ್ - 2 ಚಿತ್ರಗಳು
ರಾಮ್ ಚರಣ್ - 2 ಚಿತ್ರಗಳು
ಅಲ್ಲು ಅರ್ಜುನ್ - 2 ಚಿತ್ರಗಳು
ವರುಣ್ ತೇಜ್ - 2 ಚಿತ್ರಗಳು
ವಿಕ್ಟರಿ ವೆಂಕಟೇಶ್ - 1 ಚಿತ್ರ
ವಿಜಯ್ ದೇವರಕೊಂಡ - 1 ಚಿತ್ರ
ನಿತಿನ್ - 1 ಚಿತ್ರ

ಪ್ಯಾನ್ ಇಂಡಿಯಾ ಚಿತ್ರ ಮಾಡದಿದ್ರೂ ಮಹೇಶ್ ಕಿಂಗ್!

ಪ್ಯಾನ್ ಇಂಡಿಯಾ ಚಿತ್ರ ಮಾಡದಿದ್ರೂ ಮಹೇಶ್ ಕಿಂಗ್!

ಇನ್ನು ಯುಎಸ್ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಬಾರಿ 2 ಮಿಲಿಯನ್ ಡಾಲರ್‌ಗೂ ಅಧಿಕ ಕಲೆಕ್ಷನ್ ಮಾಡಿರುವ ಚಿತ್ರಗಳನ್ನು ಹೊಂದಿರುವ ಟಾಲಿವುಡ್ ನಟರ ಪಟ್ಟಿಯಲ್ಲಿ ಮಹೇಶ್ ಬಾಬು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಯುಎಸ್ ಬಾಕ್ಸ್ ಆಫೀಸ್‌ನಲ್ಲಿ ಮಹೇಶ್ ಬಾಬು ಅಭಿನಯದ 4 ಚಿತ್ರಗಳು 2 ಮಿಲಿಯನ್ ಡಾಲರ್‌ಗೂ ಅಧಿಕ ಕಲೆಕ್ಷನ್ ಮಾಡಿವೆ. ಇನ್ನು ಮಹೇಶ್ ಬಾಬು ಒಂದೇ ಒಂದು ಪ್ಯಾನ್ ಇಂಡಿಯಾ ಚಿತ್ರ ಮಾಡದೆಯೇ ಈ ಸಾಧನೆ ಮಾಡಿರುವುದು ವಿಶೇಷ.

ಮಿಲಿಯನ್ ಡಾಲರ್ ಪಟ್ಟಿಯಲ್ಲೂ ಮಹೇಶ್ ಬಾಬು ಟಾಪ್

ಮಿಲಿಯನ್ ಡಾಲರ್ ಪಟ್ಟಿಯಲ್ಲೂ ಮಹೇಶ್ ಬಾಬು ಟಾಪ್

ಇನ್ನು ಯುಎಸ್‌ನಲ್ಲಿ ಎರಡು ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಮಹೇಶ್ ಬಾಬು ಸಿನಿಮಾಗಳು ಅಗ್ರಸ್ಥಾನ ಪಡೆದುಕೊಂಡಿದ್ದು, ಅಮೆರಿಕಾದಲ್ಲಿ ಅತಿಹೆಚ್ಚು ಬಾರಿ ಒಂದು ಮಿಲಿಯನ್‌ಗಿಂತ ಅಧಿಕ ಕಲೆಕ್ಷನ್ ಮಾಡಿದ ಚಿತ್ರಗಳನ್ನು ಹೊಂದಿರುವ ನಟ ಯಾರು ಎಂಬ ಪಟ್ಟಿಯಲ್ಲೂ ಸಹ ಮಹೇಶ್ ಬಾಬು ದೊಡ್ಡ ಅಂತರದಲ್ಲಿ ಅಗ್ರಸ್ಥಾನ ಗಳಿಸಿ ಮಿಂಚಿದ್ದಾರೆ. ಯುಎಸ್‌ನಲ್ಲಿ ಅತಿಹೆಚ್ಚು ಬಾರಿ ಮಿಲಿಯನ್ ಡಾಲರ್ ಚಿತ್ರಗಳನ್ನು ಹೊಂದಿರುವ ನಟರ ಪಟ್ಟಿ ಈ ಕೆಳಕಂಡಂತಿದೆ
ಮಹೇಶ್ ಬಾಬು - 11 ಚಿತ್ರಗಳು
ಜೂನಿಯರ್ ಎನ್‌ಟಿಆರ್ - 7 ಚಿತ್ರಗಳು
ನಾನಿ - 7 ಚಿತ್ರಗಳು
ಪವನ್ ಕಲ್ಯಾಣ್ - 6 ಚಿತ್ರಗಳು
ಅಲ್ಲು ಅರ್ಜುನ್ - 5 ಚಿತ್ರಗಳು
ಚಿರಂಜೀವಿ - 4 ಚಿತ್ರಗಳು
ಪ್ರಭಾಸ್ - 4 ಚಿತ್ರಗಳು
ವರುಣ್ ತೇಜ್ - 4 ಚಿತ್ರಗಳು
ಬಾಲಕೃಷ್ಣ - 3 ಚಿತ್ರಗಳು
ರಾಮ್‌ ಚರಣ್ - 3 ಚಿತ್ರಗಳು
ವಿಜಯ್ ದೇವರಕೊಂಡ - 3 ಚಿತ್ರಗಳು
ನಾಗಾರ್ಜುನ, ವಿಕ್ಟರಿ ವೆಂಕಟೇಶ್ ಹಾಗೂ ಅಡಿವಿ ಸೇಷ್ - ತಲಾ 2 ಚಿತ್ರಗಳು

More from Filmibeat

English summary
List of telugu actors with highest number of 2 million movies in USA; Mahesh Babu tops the list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X