ಯುಎಸ್‌ಎಯಲ್ಲಿ ಯಾವ ತೆಲುಗು ನಟನಿಗೆ ಹೆಚ್ಚು ಕ್ರೇಜ್? ಯಾರ ಚಿತ್ರಗಳು ಹೆಚ್ಚು ಕಲೆಕ್ಷನ್ ಮಾಡಿವೆ?

ಮೊನ್ನೆ ಶ್ರೀ ರಾಮನವಮಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹು ನಿರೀಕ್ಷಿತ ಚಿತ್ರ ದಸರಾ ಎಲ್ಲೆಡೆ ಅಬ್ಬರಿಸುತ್ತಿದೆ. ಈ ಚಿತ್ರದ ಕ್ರೇಜ್ ಹಾಗೂ ಮಾಡುತ್ತಿರುವ ಕಲೆಕ್ಷನ್ ಕಂಡ ಸಿನಿ ರಸಿಕರು ಇನ್ನುಮುಂದೆ ನಾನಿ ಎರಡನೇ ಶ್ರೇಣಿಯ ನಟನಲ್ಲ ಮೊದಲ ಶ್ರೇಣಿಯ ನಟ ಎನ್ನುತ್ತಿದ್ದಾರೆ.

ಹೌದು, ತೆಲುಗಿನಲ್ಲಿ ಈಗಿನ ತಲೆಮಾರಿನ ನಟರಾದ ಮಹೇಶ್ ಬಾಬು, ಪವನ್ ಕಲ್ಯಾಣ್, ಜೂನಿಯರ್ ಎನ್ ಟಿ ಆರ್, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಇವರನ್ನು ಮೊದಲ ಶ್ರೇಣಿಯ ನಟರೆಂದು ಕರೆಯುತ್ತಾರೆ. ಇವರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡುವ ಹಾಗೂ ಹಾಕಿದ ಹಣ ವಾಪಸ್ ಬರುತ್ತದೆ ಎಂಬ ಮಿನಿಮಮ್ ಗ್ಯಾರೆಂಟಿಯ ನಟರು ಇವರಾಗಿರುವ ಕಾರಣ ಮೊದಲ ಶ್ರೇಣಿಯ ನಟರು ಎನಿಸಿಕೊಂಡಿದ್ದಾರೆ.

List of telugu actors with highest number of million dollar films in USA; Mahesh Babu tops the list

ಇನ್ನು ವಿಜಯ್ ದೇವರಕೊಂಡ, ರವಿತೇಜಾ, ನಾನಿ, ರಾಮ್ ಪೋತಿನೇನಿ ಈ ನಟರನ್ನು ಎರಡನೇ ಶ್ರೇಣಿಯ ನಟರೆಂದು ಕರೆಯುತ್ತಾರೆ. ಆದರೆ ದಸರಾ ಚಿತ್ರ ಬಿಡುಗಡೆಯಾದ ಬಳಿಕ ನಾನಿ ಇಂದಿನಿಂದ ಎರಡನೇ ಶ್ರೇಣಿಯ ನಟನಲ್ಲ, ಪ್ರಥಮ ಶ್ರೇಣಿಯ ನಟ ಎಂದು ಕರೆಯಲಾಗುತ್ತಿದೆ. ಕಾರಣ ದಸರಾ ಚಿತ್ರ ಮಾಡುತ್ತಿರುವ ಬೃಹತ್ ಕಲೆಕ್ಷನ್.

ಹೌದು, ಮೊದಲ ದಿನ 38 ಕೋಟಿ ಗಳಿಕೆ ಮಾಡಿ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ ದಸರಾ ಸಿನಿಮಾ ನಾನಿ ಸಿನಿ ಕೆರಿಯರ್‌ನಲ್ಲಿ ಅತಿದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಎನಿಸಿಕೊಂಡಿತ್ತು. ಹೀಗೆ ಬಿಡುಗಡೆ ದಿನ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ದಸರಾ ಎರಡನೇ ದಿನ 15 ಕೋಟಿ ರೂಪಾಯಿಗಳನ್ನು ಗಳಿಸಿತು, ಮೂರನೇ ದಿನ 18 ಕೋಟಿ ರೂಪಾಯಿಗಳನ್ನು ಗಳಿಸಿತು ಹಾಗೂ ನಾಲ್ಕನೇ ದಿನವಾದ ಭಾನುವಾರವೂ ಸಹ ಚಿತ್ರ ದೊಡ್ಡ ಕಲೆಕ್ಷನ್ ಮಾಡಿದ್ದು, 16 ಕೋಟಿ ರೂಪಾಯಿಗಳನ್ನು ಗಳಿಸಿದೆ. ಹೀಗೆ ಮೊದಲ 4 ದಿನಗಳಲ್ಲಿ 87 ಕೋಟಿ ಗಳಿಕೆ ಮಾಡಿರುವ ದಸರಾ ಚಿತ್ರ ಅಮೆರಿಕಾದಲ್ಲಿ ಅಬ್ಬರಿಸಿದೆ.

List of telugu actors with highest number of million dollar films in USA; Mahesh Babu tops the list

ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳೇ ಯುಎಸ್ಎ ನೆಲದಲ್ಲಿ ಒಳ್ಳೆಯ ಪ್ರದರ್ಶನ ಕಾಣಲು ಪರದಾಡುವಾಗ ದಸರಾ ಒಂದು ಮಿಲಿಯನ್ ಡಾಲರ್ ಕಲೆಕ್ಷನ್ ಅನ್ನು ದಾಟಿದೆ. ಈ ಮೂಲಕ ಯುಎಸ್ಎ ನೆಲದಲ್ಲಿ ನಾನಿ ನಟನೆಯ ಎಂಟನೇ ಚಿತ್ರ ಒಂದು ಮಿಲಿಯನ್ ಡಾಲರ್‌ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗೆ ಯುಎಸ್ಎಯಲ್ಲಿ ನಾನಿಯ ಎಂಟು ಚಿತ್ರಗಳು ಒಂದು ಮಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದ್ದರೆ, ಪ್ರಿನ್ಸ್ ಮಹೇಶ್ ಬಾಬು ನಟನೆಯ ಬರೋಬ್ಬರಿ 11 ಚಿತ್ರಗಳು ಯುಎಸ್ಎ ನೆಲದಲ್ಲಿ ಒಂದು ಮಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಸಿವೆ.

ಈ ಮೂಲಕ ಯುಎಸ್ಎ ನೆಲದಲ್ಲಿ ಒಂದು ಮಿಲಿಯನ್‌ಗಿಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳನ್ನು ಹೆಚ್ಚಾಗಿ ಹೊಂದಿರುವ ನಟರ ಪೈಕಿ ಮಹೇಶ್ ಬಾಬು ಅಗ್ರಸ್ಥಾನದಲ್ಲಿದ್ದು, ಓವರ್‌ಸೀಸ್ ಕಿಂಗ್ ಎನಿಸಿಕೊಂಡರೆ, ನಟ ನಾನಿ ಎರಡನೇ ಸ್ಥಾನದಲ್ಲಿದ್ದಾರೆ. ಮಹೇಶ್ ಬಾಬು ನಟನೆಯ 11 ಚಿತ್ರಗಳು, ನಾನಿಯ 8 ಚಿತ್ರಗಳು, ಜೂನಿಯರ್ ಎನ್‌ಟಿಆರ್ ನಟನೆಯ 7 ಚಿತ್ರಗಳು, ಪವನ್ ಕಲ್ಯಾಣ್ ನಟನೆಯ 6 ಚಿತ್ರಗಳು, ಅಲ್ಲು ಅರ್ಜುನ್ ನಟನೆಯ 5 ಚಿತ್ರಗಳು, ಪ್ರಭಾಸ್, ಚಿರಂಜೀವಿ ಹಾಗೂ ವರುಣ್ ತೇಜ್ ನಟನೆಯ 4 ಚಿತ್ರಗಳು, ರಾಮ್ ಚರಣ್, ವಿಜಯ್ ದೇವರಕೊಂಡ, ವೆಂಕಟೇಶ್, ಬಾಲಕೃಷ್ಣ ಅವರ ತಲಾ 3 ಚಿತ್ರಗಳು, ನಾಗಾರ್ಜುನ ಹಾಗೂ ನಾಗಚೈತನ್ಯ ಅವರ ತಲಾ ಎರಡು ಚಿತ್ರಗಳು ಮತ್ತು ನಿತಿನ್, ನಿಖಿಲ್, ದುಲ್ಕರ್ ಸಲ್ಮಾನ್, ನವೀನ್ ಪೊಲಿಶೆಟ್ಟಿ, ಅಡಿವಿ ಸೇಷ್ ಹಾಗೂ ಅಖಿಲ್ ನಟನೆಯ ತಲಾ ಒಂದು ಚಿತ್ರ ಯುಎಸ್ಎ ನೆಲದಲ್ಲಿ ಒಂದು ಮಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಸಿವೆ.

More from Filmibeat

English summary
List of telugu actors with highest number of million dollar films in USA; Mahesh Babu tops the list. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X