twitter
    For Quick Alerts
    ALLOW NOTIFICATIONS  
    For Daily Alerts

    ಟಾಲಿವುಡ್‌ನಲ್ಲಿ ದಸರಾಗೆ ಕ್ಯೂ ಕಟ್ಟಿದ ಸಿನಿಮಾಗಳು!

    By ರವೀಂದ್ರ ಕೊಟಕಿ
    |

    ನಿನ್ನೆ ಮೊನ್ನೆಯವರೆಗೂ ಥಿಯೇಟರ್ನಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ನಿರ್ಮಾಪಕರೆಲ್ಲ ಈಗ ದಿಡೀರ್ ಆಗಿ ತಮ್ಮ ಆಲೋಚನೆಗಳನ್ನು ಬದಲಾಯಿಸಿದ್ದಾರೆ. ನಿನ್ನೆಯವರೆಗೂ OTT ಕಡೆಗೆ ನೋಡುತ್ತಿದ್ದ ಅನೇಕ ನಿರ್ಮಾಪಕರು ಈಗ ಧೈರ್ಯವಾಗಿ ಮತ್ತೆ ಸಿನಿಮಾ ಹಾಲ್ ಗಳಲ್ಲಿ ಪ್ರದರ್ಶನ ಮಾಡಲು ಮುಂದೆ ಬರುತ್ತಿದ್ದಾರೆ.

    ಇದಕ್ಕೆ ಮೂಲ ಕಾರಣ 50% ನಿಯಮದಡಿಯಲ್ಲಿ ಬಿಡುಗಡೆಯಾದ 'ಸೀಟಿಮಾರ್' ಕೊಟ್ಟ ದೊಡ್ಡ ಯಶಸ್ಸು. ಈ ಚಿತ್ರ ಯಶಸ್ಸಿನ ನಂತರ ಈಗ ಅನೇಕ ನಿರ್ಮಾಪಕರು ಮತ್ತು ಪ್ರದರ್ಶಕರು ಸಿನಿಮಾಗಳನ್ನು ಥಿಯೇಟರುಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಇದೇ ಕ್ರಮದಲ್ಲಿ ಈಗ ಬಹುನಿರೀಕ್ಷಿತ ಶೇಕರ್ ಕಮಲ ನಿರ್ದೇಶನದ ನಾಗಚೈತನ್ಯ-ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಚಿತ್ರ ಇದೇ ಸೆಪ್ಟೆಂಬರ್ 24ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಟೀಸರ್ ,ಹಾಡುಗಳು ಬಹಳಷ್ಟು ನಿರೀಕ್ಷೆಗಳನ್ನು ಚಿತ್ರದ ಮೇಲೆ ಹುಟ್ಟುಹಾಕಿದೆ. ಈ ಚಿತ್ರ ಬಿಡುಗಡೆಗೊಂಡು ಯಶಸ್ಸನ್ನು ಕಂಡರೆ ಮತ್ತಷ್ಟು ಸಿನಿಮಾಗಳ ಬಿಡುಗಡೆಗೆ ಇದು ನಾಂದಿ ಹಾಡುತ್ತದೆ.

    ಮೆಗಾ ಕಾರ್ಯಕ್ರಮಗಳತ್ತ 'ಸಿರಿಕನ್ನಡ' ವಾಹಿನಿಯ ಚಿತ್ತಮೆಗಾ ಕಾರ್ಯಕ್ರಮಗಳತ್ತ 'ಸಿರಿಕನ್ನಡ' ವಾಹಿನಿಯ ಚಿತ್ತ

    ತೆಲುಗು ಸಿನಿಮಾ ರಂಗದಲ್ಲಿ ಸಂಕ್ರಾಂತಿ ಮತ್ತು ದಸರಾಗೆ ವಿಶೇಷವಾದ ಸ್ಥಾನವಿದೆ. ದೊಡ್ಡ ಸ್ಟಾರ್‌ಗಳು ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೆಚ್ಚಿನ ಒಲವನ್ನು ತೋರುತ್ತಾರೆ. ಇವರೆಡು ತೆಲುಗು ಭಾಷಿಕರ ಎರಡು ಪ್ರಮುಖ ಹಬ್ಬಗಳು. ಹಬ್ಬದ ಜೊತೆಗೆ ಸಿನಿಮಾ ಕಡ್ಡಾಯ, ಹೀಗಾಗಿ ಈ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಚಿತ್ರಮಂದಿರಗಳ ಕಡೆಗೆ ಜನರು ಬರುತ್ತಾರೆ. ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಸದಾ ಸ್ಟಾರ್ ನಟರ ಸಿನಿಮಾಗಳು ಎದುರು ನೋಡುತ್ತಿರುತ್ತವೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಈ ಎರಡೂ ಸಂದರ್ಭಗಳಲ್ಲಿ ಯಾವುದೇ ದೊಡ್ಡ ಚಿತ್ರಗಳು ಬಿಡುಗಡೆಗೆ ಅವಕಾಶ ಸಿಕ್ಕಿರಲಿಲ್ಲ. ಮುಂದೆ ಓದಿ....

    ಅಧಿಕೃತವಾಗಿ ಆರ್‌ಆರ್‌ಆರ್‌ ಬಿಡುಗಡೆ ಮುಂದಕ್ಕೆ: ಹೊಸ ದಿನಾಂಕ ಯಾವುದು? ಅಧಿಕೃತವಾಗಿ ಆರ್‌ಆರ್‌ಆರ್‌ ಬಿಡುಗಡೆ ಮುಂದಕ್ಕೆ: ಹೊಸ ದಿನಾಂಕ ಯಾವುದು?

    ಹಿಂದೆ ಸರಿದ ಆರ್‌ ಆರ್‌ ಆರ್

    ಹಿಂದೆ ಸರಿದ ಆರ್‌ ಆರ್‌ ಆರ್

    ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'RRR'ಚಿತ್ರ ಅಕ್ಟೋಬರ್ 13ಕ್ಕೆ ಬಿಡುಗಡೆ ಮಾಡುವ ಬಗ್ಗೆ ಅನೌನ್ಸ್ ಮಾಡಿತ್ತು ಚಿತ್ರತಂಡ. ಆದರೆ 50% ನಿಯಮ ಮುಂದುವರೆದಿರುವ ಕಾರಣಕ್ಕೆ ಚಿತ್ರತಂಡ ಹಿಂದೆ ಸರಿಯಿತು. ಈಗ ಇದನ್ನೇ ಅವಕಾಶ ಮಾಡಿಕೊಂಡಿರುವ ಹಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಳೆದ ತಿಂಗಳಿನಿಂದ ಸಿನಿಮಾಗಳು ಬಿಡುಗಡೆಯಾಗುತ್ತಿದ್ದರೂ, ಜನರು ಈ ತಿಂಗಳು ಬಿಡುಗಡೆಯಾಗಿರುವ ಸಿನಿಮಾಗಳನ್ನು ನೋಡಲು ಥಿಯೇಟರ್‌ಗಳಿಗೆ ಸಾಲುಗಟ್ಟಿ ನಿಂತಿದ್ದಾರೆ. ದೊಡ್ಡ ಜನಸಮೂಹವು ಚಿತ್ರಮಂದಿರಗಳಿಗೆ ಬರಲು ತಯಾರಾಗುತ್ತಿರುವ ಹಿನ್ನೆಲೆಯಲ್ಲಿ ತಯಾರಕರು ದೊಡ್ಡ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಾಗುತ್ತಿದ್ದಾರೆ.

    ಸಕ್ಸಸ್ ಕಂಡ ಸೀಟಿಮಾರ್

    ಸಕ್ಸಸ್ ಕಂಡ ಸೀಟಿಮಾರ್

    ಇತ್ತೀಚಿಗೆ ಬಂದ 'ಸೀಟಿಮಾರ್' ಚಲನಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು. ಹಾಗಾಗಿ ದಸರಾಕ್ಕೆ ಹೌಸ್ ಫುಲ್ ಬೋರ್ಡ್‌ಗಳು ಸಾಮಾನ್ಯವಾಗಿ ಕಾಣುತ್ತವೆ ಎಂಬ ನಂಬಿಕೆಯಿಂದ ಅವರು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ಧರಾಗುತ್ತಿದ್ದಾರೆ. ಮುಂದಿನ ತಿಂಗಳು ದಸರಾ ರಜಾದಿನಗಳು ಮತ್ತು ಇತರ ವಿಶೇಷ ದಿನಗಳನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಪ್ರಮಾಣದ ಚಲನಚಿತ್ರಗಳು ಬಿಡುಗಡೆಯಾಗುತ್ತವೆ ಎಂದು ತಿಳಿದುಬಂದಿದೆ.

    ಬಾಲಕೃಷ್ಣರ 'ಅಖಂಡ'

    ಬಾಲಕೃಷ್ಣರ 'ಅಖಂಡ'

    ಈ ಬಾರಿ ದಸರಾ ಸಂದರ್ಭದಲ್ಲಿ ಯಾವ ಯಾವ ಚಿತ್ರಗಳು ಬಿಡುಗಡೆಗೆ ಈಗಾಗಲೇ ಸಿದ್ಧವಾಗಿದೆ ಎಂಬುದನ್ನು ನೋಡಿದರೆ, ಅದರಲ್ಲಿ ಮೊದಲು ಕೇಳಿ ಬರುವ ಹೆಸರು ಬಹುನಿರೀಕ್ಷಿತ ಬಾಲಕೃಷ್ಣ 'ಅಖಂಡ' ಮೊದಲ ಸ್ಥಾನದಲ್ಲಿದೆ. ಇದು ಈಗಾಗಲೇ ದಸರಾ ಸಂದರ್ಭದಲ್ಲಿ ಅಕ್ಟೋಬರ್ 13ರಂದು ಬಿಡುಗಡೆಯ ಬಿಡುಗಡೆಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

    ಮೋಸ್ಟ್ ಎಲಿಜಿಬಲ್ ಬ್ಯಾಚುಲರ್

    ಮೋಸ್ಟ್ ಎಲಿಜಿಬಲ್ ಬ್ಯಾಚುಲರ್

    ಇದರ ಬೆನ್ನಲ್ಲೇ ಈಗ ನಾಗಾರ್ಜುನ್ ಕಿರಿಯಮಗ ಅಖಿಲ್ ಹಾಗೂ ಪೂಜಾ ಹೆಗಡೆ ನಟಿಸಿರುವ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಕೂಡಗೆ ದಸರಾಗೆ ಬರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರ ಮಧ್ಯೆ ಮತ್ತೊಂದು ಚಿತ್ರ ಈಗ ದಸರಾ ಸಮಯದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.

    ದೃಶ್ಯಂ-2 ಚಿತ್ರಮಂದಿರಗಳಲ್ಲಿ ಬಿಡುಗಡೆ?

    ದೃಶ್ಯಂ-2 ಚಿತ್ರಮಂದಿರಗಳಲ್ಲಿ ಬಿಡುಗಡೆ?

    ತಮಿಳಿನ 'ಅಸುರನ್' ಚಿತ್ರದ ರಿಮೇಕ್ ವೆಂಕಟೇಶ್ ನಟಿಸಿರುವ ನಾರಪ್ಪ OTT ಮೂಲಕ ಬಿಡುಗಡೆ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ವಿನಾಯಕ ಚತುರ್ಥಿಯ ಸಂದರ್ಭದಲ್ಲಿ ದೃಶ್ಯಂ- 2 ಅನ್ನು OTTಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಾಪಕರಿಂದ ಘೋಷಿಸಲಾಯಿತು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಮಲಯಾಳಂ ಚಿತ್ರ ದೃಶ್ಯಂ 2ನ ತೆಲುಗು ರಿಮೇಕ್ 'ದೃಶ್ಯಂ 2' ನಿರ್ಮಾಪಕರು ದೃಶ್ಯಂ- 2 ಅನ್ನು ಚಿತ್ರಮಂದಿರಗಳ ಮೂಲಕ ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಮುಂಬರುವ ಸಿನಿಮಾಗಳ ದಿನಾಂಕಗಳ ಬಗ್ಗೆ ಸ್ವಲ್ಪ ಗೊಂದಲವಿದೆ. ಅದಕ್ಕಾಗಿಯೇ ತಯಾರಕರು ದಿನಾಂಕಗಳು ಅಂತಿಮಗೊಂಡರೆ ದೃಶ್ಯ 2ರ ಬಿಡುಗಡೆಯ ದಿನಾಂಕದ ಬಗ್ಗೆ ಸ್ಪಷ್ಟತೆಯನ್ನು ನೀಡಲು ಬಯಸುತ್ತಿದ್ದಾರೆ. ಒಟ್ಟಾರೆಯಾಗಿ ದಸರಾ ಸೀಸನ್ ಸ್ಪರ್ಧೆಯು ದೃಶ್ಯಂ- 2 ಪ್ರವೇಶದೊಂದಿಗೆ ಮತ್ತಷ್ಟು ಹೆಚ್ಚಿದಂತೆ ತೋರುತ್ತದೆ. ಈ ಚಿತ್ರಗಳ ಹೊರತಾಗಿ ಇನ್ನೂ ಅನೇಕರು ದಸರಾ ಸಮಯದಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಸರದಿ ಸಾಲಿನಲ್ಲಿ ನಿಂತಿದ್ದಾರೆ.

    English summary
    List of Telugu movies queuing up to release this Dussehra.
    Wednesday, September 15, 2021, 16:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X