ಅತಿಹೆಚ್ಚು ನಷ್ಟ ಉಂಟುಮಾಡಿದ 10 ತೆಲುಗು ಚಿತ್ರಗಳಿವು; 100 ಕೋಟಿ ಲಾಸ್ ಮಾಡಿದ್ವು ಈ 2 ಸಿನಿಮಾ!
ಈ ವರ್ಷದ ಆರಂಭದಿಂದ ಇಲ್ಲಿಯ ತನಕ ತೆಲುಗು ಚಿತ್ರರಂಗ ಒಳ್ಳೆಯ ಹಂತದಲ್ಲಿಯೇ ಇದೆ. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ವಾಲ್ತೇರು ವೀರಯ್ಯ ಹಾಗೂ ವೀರಸಿಂಹ ರೆಡ್ಡಿ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಕೆ ಮಾಡಿ ಅಬ್ಬರಿಸಿದ್ದವು.
ವರ್ಷದ ಮೊದಲ ತಿಂಗಳಿನಲ್ಲಿಯೇ ಶುಭಾರಂಭ ಮಾಡಿದ ತೆಲುಗು ಚಿತ್ರರಂಗ ಬಳಿಕ ಧನುಷ್ ನಟನೆಯ ಸರ್, ನಾನಿ ನಟನೆಯ ದಸರಾ ಹಾಗೂ ಸಾಯಿ ಧರಂ ತೇಜ್ ನಟನೆಯ ವಿರೂಪಾಕ್ಷ ಚಿತ್ರಗಳೂ ಸಹ ನೂರು ಕೋಟಿ ಕ್ಲಬ್ ಸೇರಿದವು. ಇನ್ನುಳಿದಂತೆ ಹಿಟ್ ದ ಸೆಕೆಂಡ್ ಕೇಸ್, ಬಳಗಂ, ದಾಸ್ ಕಾ ಧಮ್ಕಿ, ರೈಟರ್ ಪದ್ಮಭೂಷಣ್ ಚಿತ್ರಗಳು ಒಳ್ಳೆಯ ವಿಮರ್ಶೆ ಪಡೆದುಕೊಂಡು ಲಾಭ ತಂದುಕೊಟ್ಟವು.

ಹೀಗೆ ಈ ವರ್ಷ ಹೆಚ್ಚು ಒಳ್ಳೆಯ ಸಿನಿಮಾಗಳನ್ನೇ ನೀಡಿರುವ ತೆಲುಗು ಚಿತ್ರರಂಗ ಹೀನಾಯ ಸೋಲನ್ನು ಕಂಡ ಚಿತ್ರಗಳನ್ನು ನೀಡಿದ ಉದಾಹರಣೆಯೂ ಸಹ ಇದೆ. ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ ಬರೋಬ್ಬರಿ 50 ಕೋಟಿ ನಷ್ಟ ಉಂಟು ಮಾಡಿತ್ತು. ಈ ಮೂಲಕ ಈ ಚಿತ್ರ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಅತಿಹೆಚ್ಚು ನಷ್ಟ ಉಂಟು ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.
ಹಾಗಿದ್ದರೆ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ನಷ್ಟು ಉಂಟು ಮಾಡಿದ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ರಾಧೆ ಶ್ಯಾಮ್ ಚಿತ್ರ ಬರೋಬ್ಬರಿ 100 ಕೋಟಿ ನಷ್ಟವನ್ನು ಉಂಟು ಮಾಡಿತ್ತು.
2. ಮೆಗಾಸ್ಟಾರ್ ಚಿರಂಜೀವಿ ಹಾಗೂ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಆಚಾರ್ಯ ಚಿತ್ರ ಸಹ 100 ಕೋಟಿ ನಷ್ಟವನ್ನು ಉಂಟು ಮಾಡಿತ್ತು.
3. ಮಹೇಶ್ ಬಾಬು ನಟನೆಯ, ಎ ಆರ್ ಮುರುಗದಾಸ್ ನಿರ್ದೇಶನದ ಸ್ಪೈಡರ್ ಚಿತ್ರ 65 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತ್ತು.
4. ಪವನ್ ಕಲ್ಯಾಣ್ ನಟನೆಯ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಅಜ್ಞಾತವಾಸಿ ಚಿತ್ರ 62 ಕೋಟಿ ನಷ್ಟವನ್ನು ಉಂಟು ಮಾಡಿತ್ತು.
5. ಪ್ರಭಾಸ್ ನಟನೆಯ ಮತ್ತೊಂದು ಬಿಗ್ ಬಜೆಟ್‌ನ ಚಿತ್ರ ಸಾಹೋ ಚಿತ್ರ 52 ಕೋಟಿ ನಷ್ಟ ಉಂಟು ಮಾಡಿತ್ತು.
6. ಸಮಂತಾ ರುತ್ ಪ್ರಭು ನಟನೆಯ ಶಾಕುಂತಲಂ ಚಿತ್ರ 50 ಕೋಟಿ ನಷ್ಟ ಉಂಟು ಮಾಡಿದೆ.
7. ಎನ್ ಟಿ ಆರ್ ಕಥಾನಾಯಕುಡು 50 ಕೋಟಿ ನಷ್ಟ ಉಂಟು ಮಾಡಿತ್ತು.
8. ಎನ್ ಟಿ ಆರ್ ಮಹಾ ನಾಯಕುಡು 47 ಕೋಟಿ ರೂಪಾಯಿ ನಷ್ಟು ಉಂಟು ಮಾಡಿತ್ತು.
9. ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರ 43 ಕೋಟಿ ನಷ್ಟ ಉಂಟು ಮಾಡಿತ್ತು.
10. ಮಹೇಶ್ ಬಾಬು ನಟನೆಯ 1 ನೇನೊಕ್ಕಡಿನೆ ಚಿತ್ರ 42 ಕೋಟಿ ನಷ್ಟು ಉಂಟು ಮಾಡಿತ್ತು.
ಹೀಗೆ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಹಾಗೂ ಚಿರಂಜೀವಿ ನಟನೆಯ ಆಚಾರ್ಯ ಈ ಎರಡು ಚಿತ್ರಗಳು ನೂರು ಕೋಟಿ ನಷ್ಟ ಅನುಭವಿಸಿದ ಚಿತ್ರಗಳು ಎನಿಸಿಕೊಂಡಿವೆ.


Click it and Unblock the Notifications











