ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಭಾರತದ ಟೀಸರ್‌ಗಳ ಪಟ್ಟಿ; ಕೆಜಿಎಫ್‌ಗಿಲ್ಲ ಸರಿಸಾಟಿ!
ನಿನ್ನೆ ( ಜುಲೈ 6 ) ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಸಲಾರ್‌ನ ಟೀಸರ್ ಬಿಡುಗಡೆಗೊಂಡಿತು. ಮುಂಜಾನೆ 5.12ಕ್ಕೆ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಈ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ಗೆ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸೂರ್ಯ ಹುಟ್ಟುವುದಕ್ಕೂ ಮುನ್ನವೇ ಬಿಡುಗಡೆಗೊಂಡ ಈ ಟೀಸರ್ ವೀಕ್ಷಿಸಲು ಪ್ರಭಾಸ್ ಅಭಿಮಾನಿಗಳು ರಾತ್ರಿಯಿಡೀ ನಿದ್ರೆ ಬಿಟ್ಟು ಸಲಾರ್ ಭಜನೆ ಮಾಡುತ್ತಾ ಕಾಯುತ್ತಾ ಕುಳಿತಿದ್ದರು. ಟೀಸರ್ ಬಿಡುಗಡೆಯಾದ ಬಳಿಕ ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಟೀಸರ್ ಮೆಚ್ಚಿಕೊಂಡರೆ, ಇನ್ನೂ ಕೆಲ ಸಿನಿ ರಸಿಕರು ಚಿತ್ರದ ಟೀಸರ್ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ, ಕೆಜಿಎಫ್ ಡಿಲೀಟೆಡ್ ಸೀನ್‌ಗಳನ್ನು ಬಳಸಿ ಮಾಡಿದಂತಿದೆ, ಉಗ್ರಂ ಚಿತ್ರದ ರಿಮೇಕ್ ಎಂದೆಲ್ಲಾ ಕಾಮೆಂಟ್ ಮಾಡಿದರು.

ಹೀಗೆ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿರುವ ಸಲಾರ್ ಟೀಸರ್ ನೆಗೆಟಿವ್ ಕಾಮೆಂಟ್‌ಗಳ ನಡುವೆಯೂ ದಾಖಲೆ ಬರೆದಿದೆ. ಹೌದು, ಸಲಾರ್ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 83 ಮಿಲಿಯನ್ ವ್ಯೂಸ್ ಪಡೆದುಕೊಳ್ಳುವ ಮೂಲಕ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದ ಭಾರತದ ಟೀಸರ್ ಎಂಬ ದಾಖಲೆ ಬರೆದಿದೆ.
ಆದರೆ ಸಲಾರ್ ಟೀಸರ್ ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಭಾರತದ ಟೀಸರ್ ಎಂಬ ದಾಖಲೆ ನಿರ್ಮಿಸುವಲ್ಲಿ ವಿಫಲಗೊಂಡಿದೆ. ಹೌದು, ಸಲಾರ್ ಚಿತ್ರದ ಟೀಸರ್ ಮೊದಲ 24 ಗಂಟೆಗಳಲ್ಲಿ 1.67 ಮಿಲಿಯನ್ ಲೈಕ್ಸ್ ಪಡೆದಿದ್ದು, ಕೆಜಿಎಫ್ ಚಾಪ್ಟರ್ 2 ಹಾಗೂ ಮಾಸ್ಟರ್ ದಾಖಲೆಗಳನ್ನು ಮುರಿಯುವಲ್ಲಿ ವಿಫಲಗೊಂಡಿದೆ.
ಹಾಗಿದ್ದರೆ ಯುಟ್ಯೂಬ್‌ನಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಭಾರತದ ಟೀಸರ್‌ಗಳ ಪಟ್ಟಿಯಲ್ಲಿ ಟಾಪ್ 5 ಸ್ಥಾನಗಳನ್ನು ಯಾವ ಚಿತ್ರಗಳ ಟೀಸರ್‌ಗಳು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಕೆಜಿಎಫ್ ಚಾಪ್ಟರ್ 2 - 4.27 ಮಿಲಿಯನ್ ಲೈಕ್ಸ್
2. ಮಾಸ್ಟರ್ - 1.85 ಮಿಲಿಯನ್ ಲೈಕ್ಸ್
3. ಸಲಾರ್ - 1.67 ಮಿಲಿಯನ್ ಲೈಕ್ಸ್
4. ಸರ್ಕಾರ್ - 1.18 ಮಿಲಿಯನ್ ಲೈಕ್ಸ್
5. ಪಠಾಣ್ - 1.13 ಮಿಲಿಯನ್ ಲೈಕ್ಸ್
ಇನ್ನು ಬಿಡುಗಡೆಯಾದ 24 ಗಂಟೆಗಳಲ್ಲಿ ಸಲಾರ್ ಟೀಸರ್ ಎಷ್ಟು ವೀಕ್ಷಣೆ ಪಡೆದುಕೊಂಡಿದೆ ಹಾಗೂ ಅತಿಹೆಚ್ಚು ವ್ಯೂಸ್ ಪಡೆದುಕೊಂಡ ಟಾಪ್ 5 ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಸಲಾರ್ ಚಿತ್ರದ ಟೀಸರ್ 24 ಗಂಟೆಗಳಲ್ಲಿ 83 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, 24 ಅತಿಹೆಚ್ಚು ವೀಕ್ಷಣೆ ಪಡೆದ ಭಾರತದ ಟೀಸರ್ ಎನಿಸಿಕೊಂಡಿದೆ.
2. ಆದಿಪುರುಷ್ ಟೀಸರ್ 24 ಗಂಟೆಗಳಲ್ಲಿ 68.9 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, 2ನೇ ಸ್ಥಾನದಲ್ಲಿದೆ.
3. ಕೆಜಿಎಫ್ ಚಾಪ್ಟರ್ 2 ಟೀಸರ್ 24 ಗಂಟೆಗಳಲ್ಲಿ 68.83 ಮಿಲಿಯನ್ ವ್ಯೂಸ್ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ.
4. ರಾಧೆ ಶ್ಯಾಮ್ ಚಿತ್ರದ ಟೀಸರ್ 24 ಗಂಟೆಗಳಲ್ಲಿ 42.66 ಮಿಲಿಯನ್ ವ್ಯೂಸ್ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ.
5. ಮಾರ್ಟಿನ್ ಚಿತ್ರದ ಟೀಸರ್ 24 ಗಂಟೆಗಳಲ್ಲಿ 31.5 ಮಿಲಿಯನ್ ವ್ಯೂಸ್ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ.


Click it and Unblock the Notifications











