ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವ್ಯೂಸ್ ಪಡೆದ 5 ಟೀಸರ್‌ಗಳ ಪಟ್ಟಿ; ಕೆಜಿಎಫ್‌ಗೆ ಎಷ್ಟನೇ ಸ್ಥಾನ?

ನಿನ್ನೆ ( ಜುಲೈ 6 ) ಮುಂಜಾನೆ 5.12ಕ್ಕೆ ಸರಿಯಾಗಿ ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಸಲಾರ್ ಚಿತ್ರದ ಟೀಸರ್ ಬಿಡುಗಡೆಗೊಂಡಿತು. ಬಾಹುಬಲಿ ಸರಣಿ ಬಳಿಕ ನಟಿಸಿದ ಸಾಹೋ, ರಾಧೆ ಶ್ಯಾಮ್ ಹಾಗೂ ಆದಿಪುರುಷ್ ಚಿತ್ರಗಳಲ್ಲಿ ಸತತವಾಗಿ ಸೋತು ಹಿನ್ನಡೆ ಅನುಭವಿಸಿರುವ ಪ್ರಭಾಸ್‌ಗೆ ಸಲಾರ್ ಕೈಹಿಡಿಯಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇದೆ.

ಇನ್ನು ಸಲಾರ್ ಚಿತ್ರ ಇದೇ ಸೆಪ್ಟೆಂಬರ್ 28ರಂದು ತೆರೆಗೆ ಅಪ್ಪಳಿಸಿದ್ದು, ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಹೀಗೆ ಬಿಡುಗಡೆಗೆ ದಿನಗಣನೆ ಆರಂಭಗೊಳ್ಳುತ್ತಿದ್ದಂತೆಯೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲು ಸಲಾರ್ ಚಿತ್ರತಂಡ ಟೀಸರ್ ಬಿಡುಗಡೆಗೊಳಿಸಿತು.

List of top 5 most viewed Indian teasers; Salaar tops the list

1.13 ನಿಮಿಷ ಇರುವ ಈ ಟೀಸರ್ ವೀಕ್ಷಿಸಲು ಸಿನಿ ರಸಿಕರು ಹಾಗೂ ಪ್ರಭಾಸ್ ಅಭಿಮಾನಿಗಳು ಹಿಂದಿನ ದಿನದ ರಾತ್ರಿಯಿಂದಲೇ ಕಾದು ಕುಳಿತಿದ್ದರು. ಮುಂಜಾನೆ ಬಿಡುಗಡೆಯಾದ ಟೀಸರ್ ವೀಕ್ಷಿಸಲು ನಿದ್ರೆಗೆಟ್ಟು ಕಾದು ಕುಳಿತಿದ್ದ ಪ್ರಭಾಸ್ ಅಭಿಮಾನಿಗಳು ಟೀಸರ್ ವೀಕ್ಷಿಸಿದ ಬಳಿಕ ಸಿಕ್ಕಾಪಟ್ಟೆ ಖುಷ್ ಆಗಿದ್ದಾರೆ. ಬಹು ದಿನಗಳ ಬಳಿಕ ತಮ್ಮ ನಟ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಸಂಭ್ರಮಿಸಿದ್ದಾರೆ.

ಟೀಸರ್‌ನಲ್ಲಿ ಎಲ್ಲಿಯೂ ಸಹ ಪ್ರಭಾಸ್ ಮುಖ ದರ್ಶನವನ್ನು ಪ್ರಶಾಂತ್ ನೀಲ್ ಮಾಡಿಸದೇ ಇದ್ದರೂ ಸಹ ಕೇವಲ ಆಕ್ಷನ್ ದೃಶ್ಯಗಳು ಹಾಗೂ ನಾಯಕನಿಗೆ ಸಂಭಾಷಣೆಯ ಮೂಲಕ ಹೈಪ್ ನೀಡಿ ಟೀಸರ್ ಸಿನಿ ರಸಿಕರಿಗೆ ಇಷ್ಟವಾಗುವ ಹಾಗೆ ಮಾಡಿದ್ದಾರೆ.

ಹೀಗೆ ಪುಟ್ಟ ಟೀಸರ್ ಪ್ರಭಾಸ್ ಅಭಿಮಾನಿಗಳು ಹಾಗೂ ಕೆಲ ಸಿನಿ ರಸಿಕರಿಗೆ ಇಷ್ಟವಾಗಿದ್ದು, ಇನ್ನೂ ಕೆಲ ಸಿನಿ ರಸಿಕರು ಸಲಾರ್ ಟೀಸರ್ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಸರ್‌ನಲ್ಲಿ ಏನೂ ಇಲ್ಲ, ಸುಖಾಸುಮ್ಮನೆ ಬಿಲ್ಡಪ್ ಕೊಡುವ ಬದಲು ಏನಾದರೂ ವಿಶೇಷವೆನಿಸುವ ಕಂಟೆಂಟ್ ಇರಬೇಕಿತ್ತು ಎಂದು ನೆಗೆಟಿವ್ ಕಾಮೆಂಟ್ ಹಾಕಿದ್ದಾರೆ.

ಅಲ್ಲದೇ ಈ ಟೀಸರ್‌ನ ದೃಶ್ಯಗಳನ್ನು ಕೆಜಿಎಫ್ ಹಾಗೂ ಉಗ್ರಂ ಚಿತ್ರಗಳ ದೃಶ್ಯಗಳಿಗೆ ಹೋಲಿಕೆ ಮಾಡಿಯೂ ಸಹ ಟ್ರೋಲ್ ಮಾಡುತ್ತಿದ್ದಾರೆ. ಸಲಾರ್ ಚಿತ್ರದ ಟೀಸರ್ ಅನ್ನು ಕೆಜಿಎಫ್ ಡಿಲೀಟೆಡ್ ಸೀನ್‌ಗಳನ್ನು ಇಟ್ಟುಕೊಂಡು ಮಾಡಲಾಗಿದೆ, ಚಿತ್ರದಲ್ಲಿ ಉಗ್ರಂ ಚಿತ್ರವನ್ನೇ ಹೋಲುವಂತಹ ಹಲವಾರು ದೃಶ್ಯಗಳಿವೆ ಎಂದು ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.

ಹೀಗೆ ಸಲಾರ್ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವೊಂದು ಇದೇ ಮೊದಲ ಬಾರಿಗೆ ಇಷ್ಟು ದೊಡ್ಡಮಟ್ಟದ ಟ್ರೋಲ್‌ಗೆ ಒಳಗಾಗಿದೆ ಎನ್ನಬಹುದು. ಹೀಗಿದ್ದರೂ ಸಹ ಸಲಾರ್ ಟೀಸರ್ ಅಬ್ಬರವನ್ನು ಯಾರಿಂದಲೂ ತಡೆಯಲಾಗಿಲ್ಲ. ಸಲಾರ್ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವ್ಯೂಸ್ ಪಡೆದುಕೊಂಡ ಭಾರತದ ಟೀಸರ್ ಎಂಬ ದಾಖಲೆಯನ್ನು ಬರೆದಿದೆ. ಹಾಗಿದ್ದರೆ ಬಿಡುಗಡೆಯಾದ 24 ಗಂಟೆಗಳಲ್ಲಿ ಸಲಾರ್ ಟೀಸರ್ ಎಷ್ಟು ವೀಕ್ಷಣೆ ಪಡೆದುಕೊಂಡಿದೆ ಹಾಗೂ ಅತಿಹೆಚ್ಚು ವ್ಯೂಸ್ ಪಡೆದುಕೊಂಡ ಟಾಪ್ 5 ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಸಲಾರ್ ಚಿತ್ರದ ಟೀಸರ್ 24 ಗಂಟೆಗಳಲ್ಲಿ 83 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, 24 ಅತಿಹೆಚ್ಚು ವೀಕ್ಷಣೆ ಪಡೆದ ಭಾರತದ ಟೀಸರ್ ಎನಿಸಿಕೊಂಡಿದೆ.

2. ಆದಿಪುರುಷ್ ಟೀಸರ್ 24 ಗಂಟೆಗಳಲ್ಲಿ 68.9 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, 2ನೇ ಸ್ಥಾನದಲ್ಲಿದೆ.

3. ಕೆಜಿಎಫ್ ಚಾಪ್ಟರ್ 2 ಟೀಸರ್ 24 ಗಂಟೆಗಳಲ್ಲಿ 68.83 ಮಿಲಿಯನ್ ವ್ಯೂಸ್ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ.

4. ರಾಧೆ ಶ್ಯಾಮ್ ಚಿತ್ರದ ಟೀಸರ್ 24 ಗಂಟೆಗಳಲ್ಲಿ 42.66 ಮಿಲಿಯನ್ ವ್ಯೂಸ್ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ.

5. ಮಾರ್ಟಿನ್ ಚಿತ್ರದ ಟೀಸರ್ 24 ಗಂಟೆಗಳಲ್ಲಿ 31.5 ಮಿಲಿಯನ್ ವ್ಯೂಸ್ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ.

More from Filmibeat

English summary
List of top 5 most viewed Indian teasers; Salaar tops the list, Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X