ಟಾಲಿವುಡ್‌ನ ಮುಂಬರುವ ಸೀಕ್ವೆಲ್ ಚಿತ್ರಗಳ ಪಟ್ಟಿ ಇಲ್ಲಿದೆ

ಒಂದು ಚಿತ್ರ ಹಿಟ್ ಆದರೆ ಆ ಚಿತ್ರಗಳ ಸೀಕ್ವೆಲ್ ಸಿದ್ಧವಾಗುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಟ್ರೆಂಡ್ ಆಗಿದೆ. ಅದರಲ್ಲಿಯೂ ಈ ಟ್ರೆಂಡ್ ತೆಲುಗಿನಲ್ಲಿ ತುಸು ಹೆಚ್ಚೇ ಎನ್ನಬಹುದು. ತೊಂಬತ್ತರ ದಶಕಗಳಲ್ಲಿ ಹೆಚ್ಚಾಗಿದ್ದ ಈ ಸೀಕ್ವೆಲ್ ಟ್ರೆಂಡ್ ಇತ್ತೀಚಿಗೆ ಬಂದ ಚಿತ್ರಗಳನ್ನೂ ಬಿಟ್ಟಿಲ್ಲ. ಇನ್ನು ಕನ್ನಡದಲ್ಲಿ ಇತ್ತೀಚೆಗಷ್ಟೆ ಬಿಡುಗಡೆಗೊಂಡ ಕಾಂತಾರ ಚಿತ್ರದ ಸೀಕ್ವೆಲ್ ಕೂಡ ತಯಾರಾಗುತ್ತಿದ್ದು, ಇದೇ ವರ್ಷದ ಆರಂಭದಲ್ಲಿ ಲವ್ ಮಾಕ್ಟೇಲ್ ಸೀಕ್ವೆಲ್ ಕೂಡ ಬಿಡುಗಡೆಯಾಗಿತ್ತು.
ಅತ್ತ ತೆಲುಗು ಚಿತ್ರರಂಗದಲ್ಲಿ ಗೆಲುವು ಕಂಡಿದ್ದ ಹಿಟ್ ಚಿತ್ರದ ಸೀಕ್ವೆಲ್ ಹಿಟ್ ದ ಸೆಕೆಂಡ್ ಕೇಸ್ ಕೂಡ ಬಿಡುಗಡೆಗೊಂಡು ಗೆದ್ದಿದ್ದು, ಮತ್ತೊಂದಷ್ಟು ತೆಲುಗು ಸೀಕ್ವೆಲ್ ಚಿತ್ರಗಳು ಈ ಪಟ್ಟಿ ಸೇರಲು ಸಿದ್ಧವಾಗಿವೆ. ಹೀಗೆ ಟಾಲಿವುಡ್ ಅಂಗಳದಲ್ಲಿ ಮೂಡಿ ಬರಲಿರುವ ಸೀಕ್ವೆಲ್ ಚಿತ್ರಗಳು ಯಾವುವು ಹಾಗೂ ಸೀಕ್ವೆಲ್ ಬರಬಹುದು ಎಂಬ ಟಾಕ್ ಹುಟ್ಟುಹಾಕಿರುವ ಚಿತ್ರಗಳು ಯಾವುವು ಎಂಬುದರ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ.
ಖಚಿತವಾಗಿರುವ ತೆಲುಗಿನ ಸೀಕ್ವೆಲ್ ಚಿತ್ರಗಳು
> ಪುಷ್ಪ ದ ರೂಲ್
> ಹಿಟ್ ಭಾಗ 3
> ಗೂಢಾಚಾರಿ 2
> ಬಿಂಬಿಸಾರ 2
> ಟಿಲ್ಲು ಸ್ಕ್ವೇರ್
> ಏಜೆಂಟ್ ಸಾಯಿ ಶ್ರೀನಿವಾಸ ಆತ್ರೇಯ
ಸಾಧ್ಯತೆ ಇರುವ ತೆಲುಗು ಸೀಕ್ವೆಲ್ ಚಿತ್ರಗಳು
> ಆರ್ ಆರ್ ಆರ್ 2
> ಧೃವ 2
> ಜಾತಿ ರತ್ನಲು 2
> ಎಫ್ 4
> ಅಖಂಡ 2


Click it and Unblock the Notifications











