ಲಾಕ್‌ಡೌನ್ ವಿಸ್ತರಿಸಿದ ಮೋದಿಗೆ ಸಾಲು-ಸಾಲು ಪ್ರಶ್ನೆ ಕೇಳಿದ ನಟಿ ಶ್ರೀರೆಡ್ಡಿ
ಪ್ರಧಾನಿ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮಾತನಾಡಿ, ಇಂದು ಏಪ್ರಿಲ್ 14 ಕ್ಕೆ ಮುಗಿಯಬೇಕಿದ್ದ ಕೊರೊನಾ ಲಾಕ್‌ಡೌನ್ ಅನ್ನು ಮೇ 3 ರ ವರೆಗೆ ವಿಸ್ತರಿಸಿದ್ದಾರೆ.
ಕೊರೊನಾ ಪ್ರಕರಣಗಳು ದೇಶದಾದ್ಯಂತ ಹೆಚ್ಚಾಗುತ್ತಿರುವ ಕಾರಣ ಈ ವಿಸ್ತರಣೆ ಅನಿವಾರ್ಯ ಎಂದು ಮೋದಿ ಹೇಳಿದ್ದಾರೆ. ಯಾವುದೇ ವಿನಾಯಿತಿಗಳನ್ನು ಸಹ ಅವರು ನೀಡಿಲ್ಲ. ಲಾಕ್‌ಡೌನ್ ಕುರಿತ ಮಾರ್ಗಸೂಚಿ ನಾಳೆ ಬಹಿರಂಗವಾಗಲಿದೆ.
ದೇಶದ ಜನರ ಒಳಿತಾಗಿ ಮೋದಿ ಅವರು ತೆಗೆದುಕೊಂಡಿರುವ ಈ ನಿರ್ಣಯವನ್ನು ಬಹುತೇಕರು ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನ ಸೆಲೆಬ್ರಿಟಿಗಳು ಸಹ ಮೋದಿ ನಿರ್ಣಯದ ಬಗ್ಗೆ ಚಕಾರ ಎತ್ತಿಲ್ಲ.
ಆದರೆ ತನ್ನ ವಿವಾದಿತ ಹೇಳಿಕೆ, ವಿವಾದಿತ ನಡೆಗಳಿಂದಲೇ ಸುದ್ದಿಯಲ್ಲಿರುವ ಟಾಲಿವುಡ್ ನಟಿ ಶ್ರೀರೆಡ್ಡಿ ಲಾಕ್‌ಡೌನ್ ವಿಸ್ತರಿಸಿದ ಬಗ್ಗೆ ಮೋದಿ ಅವರಿಗೆ ಸಾಲು-ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.

ಮೋದಿ ಹೇಳಿಕೆಗೆ ಎರಡು ಅರ್ಥ ಕಲ್ಪಿಸಿದ ಶ್ರೀರೆಡ್ಡಿ
ಮೋದಿ ಅವರು ಮೇ 3 ರವರೆಗೆ ಲಾಕ್‌ಡೌನ್ ವಿಸ್ತರಿಸುವಂತೆ ಹೇಳಿದ್ದಾರೆ. ಇದರ ನೇರ ಅರ್ಥ ಆರೋಗ್ಯವಾಗಿರಿ ಎಂದು, ಆದರೆ ಇದರ ಇನ್ನೊಂದು ಅರ್ಥ, 'ನಾವು ಬಡವರಿಗೆ ಆಹಾರ ನೀಡಲಾಗುವುದಿಲ್ಲ' ಎಂಬುದು ಎಂದು ಶ್ರೀ ರೆಡ್ಡಿ ಫೇಸ್‌ಬುಕ್ ನಲ್ಲಿ ಬರೆದಿದ್ದಾರೆ.

''ಮೇ 3 ರ ನಂತರ ಕೊರೊನಾ ವೈರಸ್ ಏನು ಆಕಾಶಕ್ಕೆ ಸೇರಿಬಿಡುತ್ತದೆಯೇ?''
ಮೇ 3 ರ ನಂತರ ಕೊರೊನಾ ವೈರಸ್ ಏನು ಆಕಾಶಕ್ಕೆ ಸೇರಿಬಿಡುತ್ತದೆಯೇ? ಬಡವರಿಗೆ, ಕೂಲಿ ಕಾರ್ಮಿಕರಿಗೆ ದಿನಸಿ ಕೊಂಡುಕೊಳ್ಳಲಾದರೂ ಹಣ ಕೊಡಿ ಎಂದು ರೆಡ್ಡಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.

''ಮೇ 3 ರ ನಂತರ ಕೊರೊನಾ ಸೋಂಕಿತ ಇರುವುದೇ ಇಲ್ಲವೆ?''
ಮೇ 3 ರ ನಂತರ ಒಬ್ಬನೇ ಒಬ್ಬ ಕೊರೊನಾ ಪೀಡಿತ ವ್ಯಕ್ತಿ ಹೊರಗೆ ಇದ್ದರೆ ಅವನಿಂದ ಮತ್ತೆ ಸೋಂಕು ಹರಡುತ್ತದೆ ಆಗ ಏನು ಮಾಡುವುದು? ಎಂದು ಶ್ರೀ ರೆಡ್ಡಿ ಪ್ರಶ್ನೆ ಕೇಳಿದ್ದಾರೆ.

ಶ್ರೀರೆಡ್ಡಿಗೆ ನೆಟ್ಟಿಗರಿಂದ ತರಾಟೆ
ವಿವಾದಗಳಿಂದಲೇ ಸುದ್ದಿಯಲ್ಲಿರುವ ಶ್ರೀರೆಡ್ಡಿ ಗೆ ಲಾಕ್‌ಡೌನ್ ಮಾಡಿರುವುದು ಸರಿಯೇ? ತಪ್ಪೆ? ಎಂಬ ಬಗ್ಗೆ ಸ್ವತಃ ಅವರಿಗೇ ಸ್ಪಷ್ಟತೆ ಇದ್ದಂತಿಲ್ಲ. ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದ ಶ್ರೀರೆಡ್ಡಿ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.


Click it and Unblock the Notifications