ನಿರ್ದೇಶಕನ ಮದುವೆಯಲ್ಲಿ ಕೀರ್ತಿ ಸುರೇಶ್ ಡ್ರೆಸ್ ನೋಡಿ 'ಶಾಮಿಯಾನ'ದಂತಿದೆ ಎಂದ ನೆಟ್ಟಿಗರು!
ಟಾಲಿವುಡ್ ನಿರ್ದೇಶಕ ವೆಂಕಿ ಅಟ್ಲೂರಿ ಫೆಬ್ರವರಿ 1ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಇವರ ಅದ್ಧೂರಿ ವಿವಾಹ ಸಮಾರಂಭ ಜರುಗಿದ್ದು, ನಟಿ ಕೀರ್ತಿ ಸುರೇಶ್, ನಟ ನಿತಿನ್ ಹಾಗೂ ಅವರ ಪತ್ನಿ ಶಾಲಿನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ನಟಿ ಕೀರ್ತಿ ಸುರೇಶ್ ಧರಿಸಿದ್ದ ಡ್ರೆಸ್ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ನಿರ್ದೇಶಕ ವೆಂಕಿ ಅಟ್ಲೂರಿ ಮದುವೆಯಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಕೀತಿ ಸುರೇಶ್, ವೆಂಕಿ ಸ್ವಾಮಿ ಹಾಗೂ ಪೂಜಾಗೆ ಅಭಿನಂದನೆಗಳು. ನಿಮ್ಮಿಬ್ಬರ ಹೊಸ ಜೀವನಕ್ಕೆ ದೇವರು ಎಲ್ಲಾ ಪ್ರೀತಿಯನ್ನು ಧಾರೆ ಎರೆಯಲಿ ಎಂದು ಬರೆದುಕೊಂಡಿದ್ದರು. ಮದುವೆಯ ಫೋಟೋಗಳಲ್ಲಿ ಕೀರ್ತಿ ಸುರೇಶ್ ಡೀಪ್ ನೆಕ್ ಹಾಗೂ ಉದ್ದನೆಯ ತೋಳಿರುವ ಸ್ಯಾಟಿನ್ ಮಲ್ಟಿ ಕಲರ್ ಲೆಹಂಗಾವನ್ನು ಧರಿಸಿದ್ದರು. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ನಿಮ್ಮ ಡ್ರೆಸ್ ಶಾಮಿಯಾನದ ಹಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಓರ್ವ ಅಭಿಮಾನಿ 'ನಿಮ್ಮ ಸ್ಟೈಲಿಸ್ಟ್ ಗೆ ಬೆಂಕಿ ಹಚ್ಚಿ' ಎಂದು ಬರೆದುಕೊಂಡರೆ, ಇನ್ನೋರ್ವ 'ಶಾಮಿಯಾನ ಬಟ್ಟೆಯನ್ನು ಬಳಸಿ ನಿಮ್ಮ ಬಟ್ಟೆಯನ್ನು ಹೋಲಿಸಿದಾಗ' ಎಂದು ಕಾಮೆಂಟ್ ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ನೆಟ್ಟಿಗರು, ನಟಿ ಕೀರ್ತಿ ಸುರೇಶ್ ಲೆಹಂಗಾದ ಬಣ್ಣಕ್ಕೆ ಹೋಲಿಕೆಯಾಗುವ ಶಾಮಿಯಾನದ ಫೋಟೋಗಳನ್ನು ಟ್ಯಾಗ್ ಮಾಡಿದ್ದಾರೆ. ಮತ್ತೆ ಕೆಲವರು ಕೀರ್ತಿ ಸುರೇಶ ಸುಂದರವಾಗಿ ಕಾಣುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.
ಕೀರ್ತಿ ಸುರೇಶ್ ಮದುವೆ ಯಾವಾಗ?
ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ಮದುವೆಯ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಕೀರ್ತಿ ಮುದುವೆಯ ಬಗ್ಗೆ ಅನೇಕ ಗಾಸಿಪ್ ಕೇಳಿಬರುತ್ತಿದೆ. ನಟಿ ಕೀರ್ತಿ ಸುರೇಶ್ ತಮಿಳಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ, ನಟಿ ಅನಿರುದ್ಧ್ ಜೊತೆಗಿನ ಮದುವೆಯ ವಿಷಯವನ್ನು ತಳ್ಳಿಹಾಕಿದ್ದರು. ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ನಟಿ ಕೀರ್ತಿ 13 ವರ್ಷಗಳಿಂದ ರೆಸಾರ್ಟ್ ಮಾಲೀಕರೊಬ್ಬರನ್ನು ಪ್ರೀತಿಸುತ್ತಿದ್ದಾರೆ. ಇವರಿಬ್ಬರು ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಇವರ ಪ್ರೀತಿಗೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಮಹಾನಟಿ ಕೀರ್ತಿ ಯಾವುದೇ ಸ್ಪಷ್ಟನೆ ನೀಡಿಲ್ಲ.

'ದಸರಾ' ಸಿನಿಮಾ ರಿಲೀಸ್ ಗೆ ರೆಡಿ
ಕೀರ್ತಿ ಸುರೇಶ್, ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹುನಿರೀಕ್ಷಿತ 'ದಸರಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡುವ ಜನರ ಜೀವನವನ್ನು ಕೇದ್ರೀಕರಿಸುವ 'ದಸರಾ' ಸಿನಿಮಾ ಮಾರ್ಚ್ ೩೦ರಂದು ಬಿಡುಡೆಯಾಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ಬಿಗ್ ಬಜೆಟ್ ಸಿನಿಮಾದಲ್ಲಿ ಕನ್ನಡದ ದಿಯಾ ಚಿತ್ರದ ನಾಯಕ ದೀಕ್ಷಿತ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ನಟ ಸಾಯಿಕುಮಾರ್ ಕೂಡ ಖಡಕ್ ರೋಲ್ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ನಾನಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











