ಮದುವೆ ಮುನ್ನ ದಣಿವಾರಿಸುವ ಪ್ರವಾಸ ; ಹೊಸ ವರ್ಷದ ಸಂಭ್ರಮ- ದೇವರಕೊಂಡ ಜೊತೆ ಸಪ್ತಸಾಗರದಾಚೆ ಹೋದ ರಶ್ಮಿಕಾ

2025 ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆ ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿದೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಅನೇಕರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕ್ರಿಸ್ಮಸ್ ಹಬ್ಬವನ್ನೂ ಆಚರಿಸಿ ಹೊಸ ವರ್ಷಕ್ಕೆ ಪಾರ್ಟಿ ಮಾಡಲು ಅಣಿಯಾಗುತ್ತಿದ್ದಾರೆ.ಇನ್ನು ಪ್ರೀತಿ-ಪ್ರೇಮದ ಅಮಲನ್ನೇರಿಸಿಕೊಂಡವರು ಸಪ್ತಸಾಗರದಾಚೆ ತೆರಳುತ್ತಿದ್ದಾರೆ. ಜೊತೆಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಮುಂದಾಗಿದ್ದಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.

ಹೌದು, ಕಳೆದ ಕೆಲ ದಿನಗಳಿಂದ ಅಲ್ಲ ಅನೇಕ ವರ್ಷಗಳಿಂದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧದ ಬಗ್ಗೆ ಅನೇಕರಿಗೆ ಅನುಮಾನ ಇದೆ. ಈ ಕುರಿತು ಕಾಲ ಕಾಲಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಾನೇ ಇದೆ. ಇನ್ನು, ಎಲ್ಲರಿಗೆ ಗೊತ್ತಿರುವಂತೆ ಮುಂಬರುವ ಫೆಬ್ರವರಿ 26ಕ್ಕೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇವರ ಇಬ್ಬರ ಮದುವೆಗೆ ಯಾವ ಊರು ..? ಯಾವ ರಾಜ್ಯ ..? ಯಾವ ದೇಶ..? ಸಾಕ್ಷಿಯಾಗಲಿದೆ ಎನ್ನುವುದು ಸದ್ಯ ಗೊತ್ತಿಲ್ಲವಾದರು ಹಲವರ ಪ್ರಕಾರ ರಾಜಸ್ಥಾನದ ಉದಯಪುರದಲ್ಲಿ ವೈಭವೋಪೇತವಾಗಿ ಇಬ್ಬರ ಮದುವೆ ನಡೆಯಲಿದೆ.

Love in the Air Rashmika Mandanna Captures Dreamy Click of Vijay Deverakonda as They Head for Vacay

ತಮ್ಮ ಮದುವೆಯ ಕುರಿತ ಈ ಸುದ್ದಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿಲ್ಲ. ಮದುವೆಯ ಸುದ್ದಿ ನಿಜಾ ಎಂದು ಒಪ್ಪಿಕೊಂಡಿಲ್ಲ. ಹಾಗಂಥ ಸುದ್ದಿಯನ್ನು ತಳ್ಳಿಯೂ ಹಾಕಿಲ್ಲ. ಸುಳ್ಳು ಎಂದು ಕೂಡ ಹೇಳಿಲ್ಲ. ಬದಲಿಗೆ ರಶ್ಮಿಕಾ ಮಂದಣ್ಣ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.

''ದಿ ಹಾಲಿವುಡ್‌ ರಿಪೋರ್ಟರ್‌ ಇಂಡಿಯಾ''ಗೆ ಕೆಲ ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ ನಾನು ಮದುವೆಯ ಸುದ್ದಿಯನ್ನು ಒಪ್ಪುವುದು ಇಲ್ಲ. ಹಾಗಂಥ ತಳ್ಳಿಯೂ ಹಾಕಲ್ಲ ಎಂದು ಹೇಳಿದ್ದಾರೆ. ಮುಂದುವರೆದು ಎಲ್ಲದಕ್ಕೂ ಸಮಯ ಸಂದರ್ಭ ಎನ್ನುವುದು ಇರುತ್ತೆ. ಆ ಸಮಯ ಬಂದಾಗ ನಾವೇ ಎಲ್ಲರಿಗೆ ಖಂಡಿತಾ ಹೇಳಿಯೇ ಹೇಳುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಇವರು ಇಬ್ಬರು ಮದುವೆಯಾಗುವುದು ಖಚಿತ, ನಿಶ್ಚಿತ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ.

Love in the Air Rashmika Mandanna Captures Dreamy Click of Vijay Deverakonda as They Head for Vacay

ಹೀಗಿರುವಾಗ ಇದೀಗ ರಶ್ಮಿಕಾ ಮಂದಣ್ಣ ತಮ್ಮ ಕನಸಿನ ಹುಡುಗ, ಭಾವಿ ಪತಿ ವಿಜಯ್ ದೇವರಕೊಂಡ ಜೊತೆ ಹೊಸ ವರ್ಷದ ಸಂಭ್ರಮದಲ್ಲಿ ಮಿಂದೇಳಲು ಅಣಿಯಾಗಿದ್ದಾರೆ. ಸಪ್ತಸಾಗರದಾಚೆ ಹೋಗಿದ್ದಾರೆ.

ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಇಬ್ಬರು ಕ್ಯಾಮರಾದಲ್ಲಿ ಕಣ್ಣಿನಲ್ಲಿ ಸೆರೆಯಾಗಿದ್ದು, ಇಬ್ಬರು ಮಾಸ್ಕ್ ಹಾಕಿಕೊಂಡು ವಿಮಾನ ನಿಲ್ದಾಣದಿಂದ ತೆರಳಿದ್ದಾರೆ. ಇನ್ನೂ ವಿಮಾನದಲ್ಲಿ ಕುಳಿತ ತಕ್ಷಣ ತಮ್ಮ ಈ ಪ್ರವಾಸದ ಮೊದಲ ಫೋಟೊವನ್ನು ವಿಜಯ್ ದೇವರಕೊಂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಈ ಫೋಟೊವನ್ನು ರಶ್ಮಿಕಾ ಮಂದಣ್ಣ ತೆಗೆದಿದ್ದು ಕಳೆದ ಕೆಲ ತಿಂಗಳಿಂದ ನಿರಂತರ ಕೆಲಸ ಮಾಡಿ ತಾವು ತೀವೃ ದಣಿದಿದ್ದು ಈಗ ಪ್ರವಾಸದ ಸಮಯ ಎಂದು ವಿಜಯ್ ದೇವರಕೊಂಡ ತಮ್ಮ ಸ್ಟೋರಿಗೆ ಕ್ಯಾಪ್ಷನ್ ನೀಡಿದ್ದಾರೆ.

Love in the Air Rashmika Mandanna Captures Dreamy Click of Vijay Deverakonda as They Head for Vacay

ಇನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಎಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ ಎಂಬ ವಿಚಾರವನ್ನು ಇವರ ಅಭಿಮಾನಿಗಳು ಇನ್ನು ಕಂಡು ಹಿಡಿದಿಲ್ಲ. ರಶ್ಮಿಕಾ ಕೂಡ ತಮ್ಮ ಈ ಪ್ರವಾಸದ ಫೋಟೊವನ್ನು ಹಂಚಿಕೊಂಡಿಲ್ಲ. ಆದರೆ ಇವರಿಬ್ಬರ ಏರ್‌ಪೋರ್ಟ್‌ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ತುಂಬಾನೇ ಮುದ್ದಾದ ಜೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹಾರ್ಟ್‌ ಎಮೋಜಿ ಕಳುಹಿಸುತ್ತಿದ್ದಾರೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುತ್ತಿದ್ದಾರೆ.

More from Filmibeat

English summary
Is wedding bells ringing? Rashmika Mandanna shares a rare click of fiancé Vijay Deverakonda as they leave for vacation after an intense work schedule.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X