twitter
    For Quick Alerts
    ALLOW NOTIFICATIONS  
    For Daily Alerts

    ಎದುರಾಳಿಯಿಂದ ಭರ್ಜರಿ ಘೋಷಣೆಗಳು: ಪ್ರಕಾಶ್ ರೈ ನಡೆ ಏನು?

    |

    ತೆಲುಗು ಚಿತ್ರರಂಗದ ಕಲಾವಿದರ ಸಂಘ ಮಾ (ಮೂವಿ ಅರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಗೆ ಕೇವಲ ಎರಡು ದಿನಗಳಷ್ಟೆ ಬಾಕಿ ಇದೆ. ಮತದಾನವು ಅಕ್ಟೋಬರ್ 10ಕ್ಕೆ ನಡೆಯಲಿದೆ. ಚುನಾವಣೆಯಲ್ಲಿ ನಟ ಪ್ರಕಾಶ್ ರೈ ಹಾಗೂ ನಟ ಮಂಚು ವಿಷ್ಣು ಎದುರಾಳಿಗಳಾಗಿದ್ದಾರೆ.

    ಚುನಾವಣೆಗೆ ಮೂರು ದಿನ ಇರುವಂತೆ ನಿನ್ನೆ (ಅಕ್ಟೋಬರ್ 07)ರಂದು ಮಂಚು ವಿಷ್ಣು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಮಂಚು ವಿಷ್ಣು ಬಿಡುಗಡೆ ಮಾಡಿರುವ ಪ್ರಣಾಳಿಕೆ ಆಕರ್ಷಣೀಯವಾಗಿದ್ದು ಕಲಾವಿದರನ್ನು ಸೆಳೆಯುವಂತೆ ಇದೆ.

    ಪ್ರಕಾಶ್ ರೈ, ಮಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಮುಂದೆ ಬಂದಾಗ ಅವರದ್ದೇ ವಿಜಯ ಖಾತ್ರಿ ಎನ್ನುವಂಥಹಾ ಸ್ಥಿತಿ ಇತ್ತು, ಆದರೆ ಬರಬರುತ್ತಾ ಮಂಚು ವಿಷ್ಣು ಸಹ ಒಳ್ಳೆಯ ಸಿಂಡಿಕೇಟ್ ಅನ್ನು ಆರಿಸಿಕೊಂಡು ಪ್ರಕಾಶ್‌ ರೈಗೆ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. ಇದೀಗ ಆಕರ್ಷಣೀಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಪ್ರಕಾಶ್ ರೈಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಹಾಗಿದ್ದರೆ ಮಂಚು ವಿಷ್ಣು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲೇನಿದೆ?

    ಪ್ರತ್ಯೇಕ ಮಾ ಅಪ್ಲಿಕೇಶನ್ ಅನ್ನು ಹೊರತಂದು, ಮಾನಲ್ಲಿ ಸದಸ್ಯರಾಗಿರುವ ಎಲ್ಲ ಕಲಾವಿದರ ಪ್ರತ್ಯೇಕ ಪೋರ್ಟ್‌ಫೋಲಿಯೊವನ್ನು ಅದಕ್ಕೆ ಅಪ್‌ಡೇಟ್ ಮಾಡುವುದು. ಕಲಾವಿದರ ಸಿನಿಮಾಗಳು, ಹಿಟ್, ಫ್ಲಾಫ್, ಚಿತ್ರಗಳು, ಫೋಟೊ ಶೂಟ್‌ಗಳು ಇನ್ನಿತರೆ ಮಾಹಿತಿಯನ್ನು ಅದಕ್ಕೆ ಅಪ್‌ಲೋಡ್ ಮಾಡಿ ಆ ಅಪ್ಲಿಕೇಶನ್‌ ಅನ್ನು ನಿರ್ಮಾಪಕರು, ಕಾಸ್ಟಿಂಗ್ ನಿರ್ದೇಶಕರು, ನಿರ್ದೇಶಕರು ಸುಲಭವಾಗಿ ಬಳಸುವಂತೆ ಮಾಡಿ ಆ ಮೂಲಕ ಕಲಾವಿದರಿಗೆ ಅವಕಾಶ ಸಿಗುವಂತೆ ಮಾಡುತ್ತೇನೆ ಎಂದು ಮಂಚು ವಿಷ್ಣು ಹೇಳಿದ್ದಾರೆ.

    ಸ್ವಂತ ಹಣದಲ್ಲಿ ಮಾ ಭವನ ನಿರ್ಮಾಣದ ಭರವಸೆ

    ಸ್ವಂತ ಹಣದಲ್ಲಿ ಮಾ ಭವನ ನಿರ್ಮಾಣದ ಭರವಸೆ

    ಸ್ವಂತ ಹಣದಲ್ಲಿ ಮಾ ಭವನ ನಿರ್ಮಾಣ ಮಾಡುತ್ತೇನೆ ಎಂದು ಮಂಚು ವಿಷ್ಣು ಘೋಷಿಸಿದ್ದಾರೆ. ಮಾ ಭವನದ ಬಗ್ಗೆ ಹಿಂದಿನಿಂದಲೂ ಒಳರಾಜಕೀಯಗಳು ನಡೆಯುತ್ತಲೇ ಇದ್ದವು. ಹಾಗಾಗಿ ಈ ಪ್ರಣಾಳಿಕೆಯನ್ನು ಘೋಷಣೆ ಮಾಡಿರುವ ಮಂಚು ವಿಷ್ಣು ಸ್ವಂತ ಹಣದಲ್ಲಿ ಅದ್ಧೂರಿಯಾದ, ಸುಸಜ್ಜಿತವಾದ, ಸಕಲ ಕಲಾವಿದರಿಗೂ ಅನುಕೂಲವಾಗುವಂಥಹಾ ಮಾ ಭವನ ಸ್ಥಾಪಿಸುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.

    ಸೌಕರ್ಯಯುಕ್ತ ಸ್ವಂತ ಮನೆಗಳ ನಿರ್ಮಾಣ

    ಸೌಕರ್ಯಯುಕ್ತ ಸ್ವಂತ ಮನೆಗಳ ನಿರ್ಮಾಣ

    ಅಷ್ಟೇ ಅಲ್ಲದೆ ಮಾನಲ್ಲಿ ಸದಸ್ಯತ್ವ ಹೊಂದಿರುವ ಅರ್ಹ ವ್ಯಕ್ತಿಗಳಿಗೆ, ಸರ್ಕಾರದ ಜೊತೆ ಚರ್ಚೆ ಮಾಡಿ ಸೌಲಭ್ಯಪೂರ್ಣ ಸ್ವಂತ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಮಂಚು ವಿಷ್ಣು ಆಶ್ವಾಸನೆ ನೀಡಿದ್ದಾರೆ. ಜೊತೆಗೆ ಮಾನ ಎಲ್ಲ ಕಲಾವಿದರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಮಾಡಿಸುವುದಾಗಿ ಹೇಳಿದ್ದಾರೆ. ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಶಿಬಿರದ ಭರವಸೆ ನೀಡಿದ್ದಾರೆ.

    ಮಕ್ಕಳಿಗೆ ಉಚಿತ ಶಿಕ್ಷಣ, ಮಹಿಳೆಯರಿಗೆ ಆರ್ಥಿಕ ನೆರವು

    ಮಕ್ಕಳಿಗೆ ಉಚಿತ ಶಿಕ್ಷಣ, ಮಹಿಳೆಯರಿಗೆ ಆರ್ಥಿಕ ನೆರವು

    ಈಗಾಗಲೇ ಮಾನ 946 ಕಲಾವಿದರಿಗೆ ಉಚಿತ ಇಎಸ್‌ಐ ಕಾರ್ಡ್‌ಗಳನ್ನು ನೀಡಿದ್ದೇವೆ ಮತ್ತು 3 ಲಕ್ಷದ ಜೀವ ವಿಮೆ ನೀಡಿದ್ದೇವೆ. ಇದನ್ನು ಗಣನೀಯವಾಗಿ ಹೆಚ್ಚು ಮಾಡುತ್ತೇವೆ ಎಂದಿದ್ದಾರೆ ಮಂಚು ವಿಷ್ಣು. ಇದರ ಜೊತೆಗೆ ಯಾವುದೇ ವಯೋಮಾನದವಾರದೂ ಅವರಿಗೆ 1.60 ಲಕ್ಷ ಸಾಹಾಯ ಧನ ನೀಡಲಾಗುವುದು. ಮಾ ಸದಸ್ಯರ ಮಕ್ಕಳಿಗೆ ಆರಂಭಿಕ ಶಿಕ್ಷಣದಿಂದ, ಉನ್ನತ ಶಿಕ್ಷಣದ ವರೆಗೆ ಎಲ್ಲ ರೀತಿಯ ಹಣಕಾಸು ಸಹಾಯ ಮಾಡಲಾಗುವುದು. ಮಾನ ಮಹಿಳಾ ಸದಸ್ಯರ ರಕ್ಷಣೆಗಾಗಿ ಹೈಪರ್ ಕಮಿಟಿ ನಿರ್ಮಾಣ ಮಾಡಲಾಗುವುದು ಹಾಗೂ ಸಿಂಗಲ್ ಮದರ್ ಮತ್ತು ಒಂಟಿ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಲಾಗುವದು ಎಂದು ಭರವಸೆ ನೀಡಿದ್ದಾರೆ ಮಂಚು ವಿಷ್ಣು.

    ಗೆದ್ದ ಕೂಡಲೇ ಬಾಕಿ ಇರುವ ಪಿಂಚಣಿ ಅರ್ಜಿ ಪರಿಶೀಲನೆ

    ಗೆದ್ದ ಕೂಡಲೇ ಬಾಕಿ ಇರುವ ಪಿಂಚಣಿ ಅರ್ಜಿ ಪರಿಶೀಲನೆ

    ನಾವು ಮಾ ಚುನಾವಣೆ ಗೆದ್ದು ಪ್ರಮಾಣವಚನ ಸ್ವೀಕರಿಸಿದ ತಕ್ಷಣ, ಪ್ರಸ್ತುತ ಪಿಂಚಣಿಗಾಗಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸುತ್ತೇವೆ ಮತ್ತು ಅರ್ಹರಿಗೆ ಎಲ್ಲರಿಗೂ ಪ್ರತಿ ತಿಂಗಳು ಪಿಂಚಣಿ ಪಾವತಿಯಾಗುವಂತೆ ನೋಡಿಕೊಳ್ಳುತ್ತೇವೆ. ಪ್ರಸ್ತುತ 6,000 ರು ಇರುವ ಪಿಂಚಣಿಯನ್ನು ಗಣನೀಯವಾಗಿ ಹೆಚ್ಚಿಸುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ, ಸರ್ಕಾರ ನಡೆಸುತ್ತಿರುವ ಪಿಂಚಣಿ ಯೋಜನೆಗಳು ಮತ್ತು NBFC ಯ ಯೋಜನೆಗಳನ್ನು ನಮ್ಮ ಸದಸ್ಯರಿಗೂ ವಿಸ್ತರಿಸುವಂತೆ ಮಾಡುತ್ತೇವೆ'' ಎಂದಿದ್ದಾರೆ ಮಂಚು ವಿಷ್ಣು.

    ಸದಸ್ಯತ್ವ ಶುಲ್ಕದಲ್ಲಿ ಇಳಿಕೆ

    ಸದಸ್ಯತ್ವ ಶುಲ್ಕದಲ್ಲಿ ಇಳಿಕೆ

    ಎಲ್ಲ ಹಿರಿಯ ಸದಸ್ಯರಿಗೆ ಮತದಾನದ ಹಕ್ಕು ನೀಡುವಂತೆ ಜನರಲ್ ಬಾಡಿ ಮೀಟಿಂಗ್‌ನಲ್ಲಿ ನಿಯಮ ಬದಲಾಯಿಸುತ್ತೇವೆ. ಕೊರೊನಾದಿಂದ ನಟರೆಲ್ಲ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವ ಕಾರಣ ಮಾದ ಸದಸ್ಯತ್ವ ಶುಲ್ಕವನ್ನು 75000 ರುಗಳಗೆ ಕೆಲ ಕಾಲದ ವರೆಗೆ ಇಳಿಸಲಾಗುವುದು. ಮಾ ಸಂಘಕ್ಕಾಗಿ ನಿಧಿ ಸಂಗ್ರಹ ಕಾರ್ಯವನ್ನು ತೀವ್ರಗೊಳಿಸುವುದು. ಮಾ ನಿಧಿ ಸಂಗ್ರಹದ ಭಾಗವಾಗಿ ನಟರ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಇತರೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ ಮಂಚು ವಿಷ್ಣು. ಇದೆಲ್ಲವುದರ ಜೊತೆಗೆ ತಮ್ಮ ತಂದೆ ಹಿರಿಯ ನಟ ಮೋಹನ್‌ಬಾಬು ಹೆಸರಿನ ಸಂಶೋಧನಾ ಕೇಂದ್ರವನ್ನು ಸ್ಥಾಫಿಸುವುದಾಗಿಯೂ ಮಂಚು ವಿಷ್ಣು ಭರವಸೆ ನೀಡಿದ್ದಾರೆ.

    English summary
    Manchu Vishnu announce his panel's manifesto regarding MAA elections. Prakash Raj and Manchu Vishnu contesting against each others.
    Friday, October 8, 2021, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X