For Quick Alerts
  ALLOW NOTIFICATIONS  
  For Daily Alerts

  ನನ್ನ ಮುಂದೆ ಹೀರೋ ಆಗಿದ್ದೀಯ, ನನಗೇ ಮಾತಾಡ್ತೀಯಾ: ಶ್ರೀಕಾಂತ್‌ಗೆ ಆವಾಜ್‌

  |

  ಕರ್ನಾಟಕದ ಗಂಗಾವತಿ ಮೂಲದ ನಟ ಶ್ರೀಕಾಂತ್ ತೆಲುಗಿನಲ್ಲಿ ದೊಡ್ಡ ಸ್ಟಾರ್ ನಟ. ಮೇಕಾ ಶ್ರೀಕಾಂತ್ ಎಂದು ಹೆಸರಾಗಿರುವ ಈ ನಟ 1991ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇಂಥಹಾ ಶ್ರೀಕಾಂತ್‌ಗೆ ತೆಲುಗಿನ ಮತ್ತೊಬ್ಬ ಹಿರಿಯ ನಟ ನರೇಶ್ ಬೆದರಿಸುವ ದನಿಯನ್ನು ಮಾತನಾಡಿದ್ದಾರೆ.

  ಮೆಗಾಸ್ಟಾರ್ ಕುಟುಂಬದ ಸಾಯಿ ಧರಮ್ ತೇಜ್‌ ಇತ್ತೀಚೆಗಷ್ಟೆ ಬೈಕ್‌ ಅಪಘಾತಕ್ಕೆ ಈಡಾಗಿ ಆಸ್ಪತ್ರೆ ಸೇರಿದ ಘಟನೆಯಿಂದಾಗಿ ಮೇಕಾ ಶ್ರೀಕಾಂತ್ ಮತ್ತು ನರೇಶ್ ನಡುವೆ ವಾಗ್ಯುದ್ಧ ಏರ್ಪಟ್ಟಿದೆ.

  ಪ್ರಸ್ತುತ ಎಂಎಎ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಅಧ್ಯಕ್ಷರೂ ಆಗಿರುವ ನರೇಶ್, ಸಾಯಿ ಧರಮ್ ತೇಜ್ ಅಪಘಾತದ ಬಗ್ಗೆ ಪ್ರತಿಕ್ರಿಯಿಸುತ್ತಾ, ''ನನ್ನ ಮಗ ಹಾಗೂ ಸಾಯಿ ಧರಮ್ ತೇಜ್ ಒಳ್ಳೆಯ ಗೆಳೆಯರು, ಅವರಿಗೆ ರೇಸಿಂಗ್ ಅಭ್ಯಾಸ ಇದೆ. ನಾನು ಅದನ್ನು ಗಮನಿಸಿದ್ದೆ. ಇಬ್ಬರಿಗೂ ಕೌನ್ಸಲಿಂಗ್ ಮಾಡೋಣ ಎಂದು ಕೊಂಡಿದ್ದೆ ಅಷ್ಟರಲ್ಲಿ ಹೀಗಾಗಿದೆ. ಈ ಹಿಂದೆ ಸಹ ಕೆಲವು ಸ್ಟಾರ್ ನಟರ ಮಕ್ಕಳು ರೇಸಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ'' ಎಂದಿದ್ದರು.

  ಹಿರಿಯ ನಟ ನರೇಶ್ ಅವರ ಈ ಹೇಳಿಕೆಗೆ ಮೆಗಾಸ್ಟಾರ್ ಕುಟುಂಬಕ್ಕೆ ಆಪ್ತರಾಗಿರುವ ಬಂಡ್ಲ ಗಣೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ನಟ ಮೇಕಾ ಶ್ರೀಕಾಂತ್ ಸಹ ವಿರೋಧ ವ್ಯಕ್ತಪಡಿಸಿದ್ದರು.

  ಸಾಯಿ ಧರಮ್ ತೇಜ್ ಪ್ರಬುದ್ಧ ಯುವಕ: ಶ್ರೀಕಾಂತ್

  ಸಾಯಿ ಧರಮ್ ತೇಜ್ ಪ್ರಬುದ್ಧ ಯುವಕ: ಶ್ರೀಕಾಂತ್

  ನರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮೇಕಾ ಶ್ರೀಕಾಂತ್, ''ಸಾಯಿ ಧರಮ್ ತೇಜ್‌ಗೆ ಆಗಿದ್ದು ಸಣ್ಣ ಅಪಘಾತ, ರಸ್ತೆ ಮೇಲೆ ಮರಳು ಇದ್ದ ಕಾರಣದಿಂದ ಅಪಘಾತವಾಗಿದೆ. ಇಂಥಹಾ ಅಪಘಾತಗಳು ಬಹಳ ಸಾಮಾನ್ಯ. ಯಾರಾದರೂ ಹೇಳಿಕೆಗಳನ್ನು ಕೊಡುವಾಗ ಯೋಚಿಸಿ ಮಾತನಾಡಿ, ನನಗೆ ಗೊತ್ತಿರುವ ಯುವಕರಲ್ಲಿ ಸಾಯಿ ಧರಮ್ ತೇಜ್ ಬಹಳ ಪ್ರಬುದ್ಧ ಯುವಕ. ಆತನ ಬಗ್ಗೆ ನನಗೆ ಚೆನ್ನಾಗಿ ಗೊತ್ತು'' ಎಂದು ಪರೋಕ್ಷವಾಗಿ ನರೇಶ್ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.

  ನರೇಶ್ ಮಾತನಾಡಿರುವುದು ಸೂಕ್ತವಲ್ಲ: ಶ್ರೀಕಾಂತ್

  ನರೇಶ್ ಮಾತನಾಡಿರುವುದು ಸೂಕ್ತವಲ್ಲ: ಶ್ರೀಕಾಂತ್

  ಮುಂದುವರೆದು, ''ಸಾಯಿ ಧರಮ್ ತೇಜ್ ಅಪಘಾತವಾದ ಬಳಿಕ ಅವರ ಕುಟುಂಬದವರು ಬಹಳ ಆತಂಕದಲ್ಲಿದ್ದಾರೆ. ಇಂಥಹಾ ಸಮಯದಲ್ಲಿ ಈ ರೀತಿಯ ಹೇಳಿಕೆಗಳು ಕುಟುಂಬದ ಆತಂಕವನ್ನು ಹೆಚ್ಚು ಮಾಡುತ್ತವೆ. ನರೇಶ್ ನೀಡಿರುವ ಹೇಳಿಕೆ ಈ ಸಮಯದಲ್ಲಿ ಸರಿಯಲ್ಲ. ಅದರಲ್ಲೂ ತೀರಿ ಹೋದವರ ಬಗ್ಗೆ ಇಂಥಹಾ ಸಮಯದಲ್ಲಿ ಮಾತನಾಡಿಸುವುದು ಸೂಕ್ತವಲ್ಲ ಅನಿಸುತ್ತದೆ. ಸಾಯಿ ಧರಮ್ ತೇಜ್ ಬೇಗ ಹುಷಾರಾಗಲಿ ಎಂದು ನಾವೆಲ್ಲರೂ ಕೋರಿಕೊಳ್ಳೋಣ'' ಎಂದು ಶ್ರೀಕಾಂತ್ ಹೇಳಿದ್ದಾರೆ.

  ''ಏನಮ್ಮಾ ಶ್ರೀಕಾಂತ್, ಏನು ಹಾಗೆ ಮಾತಾಡಿದ್ದೀಯ?''

  ''ಏನಮ್ಮಾ ಶ್ರೀಕಾಂತ್, ಏನು ಹಾಗೆ ಮಾತಾಡಿದ್ದೀಯ?''

  ಶ್ರೀಕಾಂತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನರೇಶ್, ''ಏನಮ್ಮಾ ಶ್ರೀಕಾಂತ್, ಏನು ಆ ಥರಹ ಮಾತನಾಡಿದ್ದೀಯ? ಸಾಯಿ ಧರಮ್ ತೇಜ ಸ್ಪೀಡ್‌ ಆಗಿ ಗಾಡಿ ಓಡಿಸುತ್ತಿರಲಿಲ್ಲ, ರಸ್ತೆಯಲ್ಲಿ ಬಿದ್ದಿದ್ದ ಮಣ್ಣಿನಿಂದಲೇ ಅಪಘಾತವಾಗಿದೆ. ನಾನು ಬೈಟ್ ನೀಡಿದ ಮೇಲೆ ಕೆಲವು ಹಿರಿಯರು ನನಗೆ ಕರೆ ಮಾಡಿ ಹೇಳಿದರು. ಕೂಡಲೇ ನಾನು ಮತ್ತೊಂದು ಬೈಟ್ ನೀಡಿದೆ. ಆದರೆ ನೀನು ಏನೂ ತಿಳಿದುಕೊಳ್ಳದೆ ಮಾತನಾಡಿದ್ದೀಯ. ನಾನು ಸತ್ತು ಹೋದವರ ಬಗ್ಗೆ ಮಾತನಾಡಿಲ್ಲ, ಸಿನಿಮಾರಂಗದಲ್ಲಿ ಆದ ಕೆಲವು ಘಟನೆಗಳನ್ನು ನೆನಪಿಸಿಕೊಂಡು ಸಾಮಾನ್ಯವಾಗಿ ಹೇಳಿದ್ದೇನೆ ಅಷ್ಟೆ. ನೀನು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಹೇಳಿಕೆಗಳನ್ನು ಕೊಡು'' ಎಂದು ಏಕವಚನದಲ್ಲಿಯೇ ಮಾತನಾಡಿದ್ದಾರೆ ನರೇಶ್.

  ನನ್ನ ಎದುರು ಹೀರೋ ಆದವನು ನೀನು: ನರೇಶ್

  ನನ್ನ ಎದುರು ಹೀರೋ ಆದವನು ನೀನು: ನರೇಶ್

  ಮುಂದುವರೆದು ''ನನ್ನ ಕಣ್ಣ ಮುಂದೆ ಹೀರೋ ಆದವನು ನೀನು, ಇರಲಿ, ಒಳ್ಳೆಯ ಸಿನಿಮಾಗಳನ್ನು ಮಾಡಿದ್ದೀಯ, ಒಳ್ಳೆಯ ಹೆಸರು ಸಂಪಾದನೆ ಸಹ ಮಾಡಿದ್ದೀಯ. ಮಾ ಚುನಾವಣೆವಣೆಗೆ ನನ್ನ ಸಿಂಡಿಕೇಟ್ ಎದುರು ಸ್ಪರ್ಧೆ ಮಾಡಿ ನನ್ನ ಸಿಂಡಿಕೇಟ್ ಜನರ ಎದುರು ಸೋತಿದ್ದೀಯ. ಅವೆಲ್ಲ ಇರಲಿ, ಇನ್ನು ಮುಂದೆ ಮಾಧ್ಯಮಗಳ ಎದುರು ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡು'' ಎಂದಿದ್ದಾರೆ ನರೇಶ್.

  English summary
  MAA present president and actor Naresh warns actor Meka Srikanth. In a video byte Naresh said Sai Dharam Tej use to do bike race. Srikanth opposed to Naresh's comment. So Naresh warned Srikanth to talk carefully.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X