ಪ್ರಿನ್ಸ್ ಮಹೇಶ್ ಬಾಬು ಮುಂದಿನ ಸಿನಿಮಾದ ಕಥೆ ಲೀಕ್
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸದ್ಯ ಸರಿಲೇರು ನೀಕೆವ್ವರು ಸಿನಿಮಾ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಸಿನಿಮಾ ರಿಲೀಸ್ ಆಗಿ ಮೂರು ತಿಂಗಳೆ ಕಳೆದಿದೆ. ಆದರೂ ಮಹೇಶ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗ ಪಡಿಸಿರಲಿಲ್ಲ.
Recommended Video
'ಮಹರ್ಶಿ' ಖ್ಯಾತಿಯ ನಿರ್ದೇಶಕ ವಂಶಿ ಪೈಡಿಪಲ್ಲಿ ಜೊತೆ ಮತ್ತೆ ಸಿನಿಮಾ ಮಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೆ ವಂಶಿ ಸಿನಿಮಾದಿಂದ ಹೊರಬಂದ ಮಹೇಶ್, ನಂತರ ಗೀತಾಗೋವಿಂದಂ ಸಿನಿಮಾ ಖ್ಯಾತಿಯ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಪರಶುರಾಮ್ ಮತ್ತು ಮಹೇಶ್ ಬಾಬು ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಆಗಲೆ ಚಿತ್ರದ ಕಥೆ ಲೀಕ್ ಆಗಿದ್ದು ಸಿನಿಮಾ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಮುಂದೆ ಓದಿ..

ಸದ್ಯ ಲೀಕ್ ಆದ ಕಥೆ ಹೀಗಿದೆ
ಚಿತ್ರದಲ್ಲಿ ಮಹೇಶ್ ಬಾಬು ತಾಯಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಖ್ಯಾತ ಉದ್ಯಮಿಯೊಬ್ಬರು ಮಹೇಶ್ ಬಾಬು ತಾಯಿ ಕೆಲಸ ಮಾಡುತ್ತಿದ್ದ ಬ್ಯಾಂಕ್ ನಿಂದ ಕೋಟಿ ಕೋಟಿ ಹಣ ಸಾಲ ಪಡೆಯುತ್ತಾರೆ. ಆದರೆ ಸಾಲವನ್ನು ಮರುಪಾವತಿ ಮಾಡುವುದಿಲ್ಲ. ಮಹೇಶ್ ಬಾಬು ಯು ಎಸ್ ಎಯಲ್ಲಿ ನೆಲೆಸಿರುತ್ತಾರೆ. ಸಾಲ ಪಡೆದ ಖ್ಯಾತ ಉದ್ಯಮಿಯ ಮಗಳು ಸಹ ಯು ಎಸ್ ಎಯಲ್ಲಿ ನೆಲೆಸಿರುತ್ತಾರೆ.

ಖ್ಯಾತ ಉದ್ಯಮಿ ಪುತ್ರಿಯನ್ನು ಪ್ರೀತಿಸುವ ಮಹೇಶ್
ಮಗಳನ್ನು ಪರಿಚಯ ಮಾಡಿಕೊಂಡು ಪ್ರೀತಿಸಲು ಪ್ರಾರಂಭಿಸುತ್ತಾರೆ. ನಂತರ ಅವಳು ಮಹೇಶ್ ಬಾಬು ಅವರನ್ನು ಮದುವೆ ಆಗುವಂತೆ ಒತ್ತಾಯುಸುತ್ತಾಳೆ. ಆಗ ಮಹೇಶ್ ಬಾಬು ನಿಮ್ಮ ಅಪ್ಪ ಪಡೆದ ಸಾಲವನ್ನು ಅಮ್ಮನ ಬ್ಯಾಂಕ್ ಗೆ ಮರುಪಾವತಿಸುವಂತೆ ಹೇಳುತ್ತಾರೆ" ಈ ಕಥೆ ಮಹೇಶ್ ಬಾಬು ಮತ್ತು ಪರಶುರಾಮ್ ಸಿನಿಮಾದ್ದು ಎಂದು ಹೇಳಲಾಗುತ್ತಿದೆ.

ಕಥೆ ಬಲಾಯಿಸುವ ಸಾಧ್ಯತೆ
ಮಹೇಶ್ ಬಹುನಿರೀಕ್ಷೆಯ ಸಿನಿಮಾದ ಕಥೆ ಲೀಕ್ ಆದ ಕಾರಣ ಮತ್ತೆ ನಿರ್ದೇಶಕ ಪರಶುರಾಮ್ ಕಥೆ ಬದಲಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೊದಲ ಬಾರಿಗೆ ಮೊದಲ ಬಾರಿಗೆ ಮಹೇಶ್ ಬಾಬುಗೆ ನಿರ್ದೇಶನ ಮಾಡುವ ಅವಕಾಶ ಪಡೆದಿದ್ದ ಪರಶುರಾಮ್ ಗೆ ಕಥೆ ಲೀಕ್ ಆಗಿರುವುದು ದೊಡ್ಡ ತಲೆನೋವಾಗಿದೆ.

ವಂಶಿ ಸಿನಿಮಾದಿಂದ ಹೊರಬಂದ ಮಹೇಶ್
'ಮಹರ್ಶಿ' ಚಿತ್ರದಲ್ಲಿ ಸಾಮಾಜಿಕ ಮೌಲ್ಯಗಳುಳ್ಳ ಶ್ರೀಮಂತ ವ್ಯಕ್ತಿಯಾಗಿ ಮಿಂಚಿದ್ದ ಮಹೇಶ್ ಬಾಬು ಅನ್ನು ಭೂಗತ ಪಾತಕಿಯಾಗಿ ತೋರಿಸುವ ಕತೆಯನ್ನು ವಂಶಿ ತಯಾರು ಮಾಡಿದ್ದರು. ಈ ಕತೆ ಒಪ್ಪದೆ ಮಹೇಶ್ ಬಾಬು ಚಿತ್ರದಿಂದ ಹೊರಬಂದಿದ್ದಾರಂತೆ. ಆದರೆ ಚಿತ್ರದ ಕತೆಯನ್ನು ತಿದ್ದಿದಲ್ಲಿ ತಾವು ನಟಿಸುವುದಾಗಿ ಮಹೇಶ್ ಬಾಬು ಹೇಳಿರುವ ಕಾರಣ, ನಿರ್ದೇಶಕ ವಂಶಿ ಕತೆ ತಿದ್ದುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.


Click it and Unblock the Notifications











