ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮಹೇಶ್ ಬಾಬು ದಂಪತಿ: ಎಂದೆಂದಿಗೂ ನಿನ್ನೊಂದಿಗಿರುವೆ ಎಂದ ಪ್ರಿನ್ಸ್
ಟಾಲಿವುಡ್ ನ ಸ್ಟಾರ್ ಜೋಡಿ ಮಹೇಶ್ ಬಾಬು ಮತ್ತು ನಮ್ರತಾ ದಂಪತಿಗೆ ಇಂದು ಮದುವೆ ವಾರ್ಷಿಕೋತ್ಸವ ಸಂಭ್ರಮ. ಈ ಜೋಡಿ 16ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ಸ್ಟಾರ್ ಜೋಡಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ.
ಈ ಸಂಭ್ರಮ, ಸಂತಸವನ್ನು ನಟ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿಯ ಜೊತೆ ಇರುವ ರೊಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿ, ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದಾರೆ. ಪತ್ನಿಗೆ ಚುಂಬಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹೇಶ್ ಬಾಬು ಹೃದಯಸ್ಪರ್ಶಿ ಸಂದೇಶ
ವಾರ್ಷಿಕೋತ್ಸವದ ಸಂಭ್ರಮವನ್ನು ಮಹೇಶ್ ಬಾಬು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ 'ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನಮ್ರಾತಾ. ಎಂದೆಂದಿಗೂ ನಿನ್ನೊಂದಿಗೆ ಇರುವೆ' ಎಂದು ಬರೆದು ಕೊಂಡು ಹಾರ್ಟ್ ಇಮೋಜಿ ಹಾಕಿದ್ದಾರೆ. ಜೊತೆಗೆ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರೆ.

2005ರಲ್ಲಿ ಮದುವೆ
ಮಹೇಶ್ ಬಾಬು ಮತ್ತು ನಮ್ರತಾ ಅವರದ್ದು ಪ್ರೇಮ ವಿವಾಹ. 2000ರಲ್ಲಿ ಸಿನಿಮಾ ಸೆಟ್ ನಲ್ಲಿ ಭೇಟಿಯಾದ ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಬಳಿಕ 2005ರಲ್ಲಿ ವಿವಾಹಬಂಧನಕ್ಕೆ ಒಳಗಾಗಿದ್ದಾರೆ. ಇಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಹೇಶ್ ಬಾಬು ದಂಪತಿಗೆ ಇಬ್ಬರು ಮಕ್ಕಳು
ಮಹೇಶ್ ಬಾಬು ಮತ್ತು ನಮ್ರತಾ ಇಬ್ಬರು ಸಂತೋಷದ ಜೀವನ ಸಾಗಿಸುತ್ತಿದ್ದಾರೆ. ಟಾಲಿವುಡ್ ನ ಮುದ್ದಾದ ದಂಪತಿಗೆ ಸಿತಾರಾ ಮತ್ತು ಗೌತಮ್ ಇಬ್ಬರು ಮಕ್ಕಳಿದ್ದಾರೆ. ಮಗಳು ಸಿತಾರಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ತನ್ನದೆ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ.
Recommended Video

ಅಭಿನಯದಿಂದ ದೂರ ಉಳಿದಿರುವ ನಮ್ರತಾ
ಒಂದು ಕಾಲದಲ್ಲಿ ಟಾಪ್ ನಟಿಯಾಗಿದ್ದ ನಮ್ರತಾ ಮದುವೆ ಬಳಿಕ ಅಭಿನಯದಿಂದ ದೂರ ಉಳಿದಿದ್ದಾರೆ. ಪತಿ, ಮಕ್ಕಳು ಅಂತ ಸಂಸಾರದ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇನ್ನು ಪತಿ ಮಹೇಶ್ ಬಾಬು ಸಿನಿಮಾ ಜೀವನವನ್ನು ನಮ್ರತಾ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











