For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಮತ್ತು ಜೂ. ಎನ್‌ಟಿಆರ್ ಅಭಿಮಾನಿಗಳಿಗೆ ಸಿಹಿ ಸುದ್ದಿ

  |

  ಮಹೇಶ್ ಬಾಬು ಮತ್ತು ಜೂ. ಎನ್‌ಟಿಆರ್ ಅಭಿಮಾನಿಗಳ ನಡುವೆ ಕೆಲವು ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸಮರವೇ ನಡೆದಿತ್ತು. ಆದರೆ ಇಬ್ಬರ ಅಭಿಮಾನಿಗಳಿಗೂ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅಂದಹಾಗೆ, ಈ ಸಿಹಿ ಸುದ್ದಿ ನೀಡಿರುವುದು ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್.

  ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ 'ಉಮಾ ಮಹೇಶ್ವರ ಉಗ್ರ ರೂಪಸ್ಯ' ಚಿತ್ರದಲ್ಲಿ ಹಾಸ್ಯ ನಟ ಸುಹಾಸ್, ಹೇಳುವ ಮಾತು ಮಹೇಶ್ ಬಾಬು ಅಭಿಮಾನಿಗಳನ್ನು ಕೆರಳಿಸಿತ್ತು. ಇದು ಮಹೇಶ್ ಬಾಬು ಅಭಿಮಾನಿಗಳು ಮತ್ತು ಜೂ. ಎನ್‌ಟಿಆರ್ ಅಭಿಮಾನಿಗಳ ನಡುವೆ ಜಗಳಕ್ಕೂ ಕಾರಣವಾಗಿತ್ತು. ದೃಶ್ಯವೊಂದರಲ್ಲಿ ಸುಹಾಸ್, ಮಹೇಶ್ ಬಾಬು ಬಹಳ ಸೋಮಾರಿ ನಟ. ನಿಂತಲ್ಲಿಯೇ ಎಲ್ಲರನ್ನೂ ಹೊಡೆಯುತ್ತಾರೆ. ಆದರೆ ಜೂ.ಎನ್‌ಟಿಆರ್ ಹಾಗಲ್ಲ, ಮುನ್ನುಗ್ಗಿ ಹೊಡೆಯುತ್ತಾರೆ ಎಂದಿದ್ದರು. ಇದು ಫ್ಯಾನ್ಸ್ ವಾರ್‌ಗೆ ಕಾರಣವಾಗಿತ್ತು. ಮುಂದೆ ಓದಿ.

  ಮಹೇಶ್ ಬಾಬು- ಜೂ. ಎನ್‌ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!ಮಹೇಶ್ ಬಾಬು- ಜೂ. ಎನ್‌ಟಿಆರ್ ಫ್ಯಾನ್ಸ್ ಕಿತ್ತಾಟಕ್ಕೆ ಕಾರಣವಾಯ್ತು ಒಂದು ಡೈಲಾಗ್!

  ಅಲ್ಲು ಅರವಿಂದ್ ನಿರ್ಮಾಣದ ಚಿತ್ರ

  ಅಲ್ಲು ಅರವಿಂದ್ ನಿರ್ಮಾಣದ ಚಿತ್ರ

  ಆದರೆ ಈಗ ಟಾಲಿವುಡ್‌ನಿಂದ ಹೊಸ ಸುದ್ದಿ ಹೊರಬಿದ್ದಿದೆ. ಮಹೇಶ್ ಬಾಬು ಮತ್ತು ಜೂ. ಎನ್‌ಟಿಆರ್ ಇಬ್ಬರೂ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರಕ್ಕೆ ಬಂಡವಾಳ ಹೂಡಲು ಮುಂದಾಗಿರುವುದು ಅಲ್ಲು ಅರವಿಂದ್.

  ಒಟ್ಟಿಗೆ ನಡೆಸಲು ಒಪ್ಪಿಕೊಂಡ ನಟರು

  ಒಟ್ಟಿಗೆ ನಡೆಸಲು ಒಪ್ಪಿಕೊಂಡ ನಟರು

  ಮೂಲಗಳ ಪ್ರಕಾರ ಮಹೇಶ್ ಬಾಬು ಮತ್ತು ಜೂ. ಎನ್‌ಟಿಆರ್ ಇಬ್ಬರ ಅಭಿಮಾನಿಗಳಿಗೂ ಖುಷಿ ನೀಡುವಂತಹ ವಿಶೇಷ ಸ್ಕ್ರಿಪ್ಟ್ ತಯಾರಿಸಿ ಸಿನಿಮಾ ಮಾಡಲು ಅಲ್ಲು ಅರವಿಂದ್ ಉದ್ದೇಶಿಸಿದ್ದಾರೆ. ಇದಕ್ಕಾಗಿ ಅವರು ಒಳ್ಳೆಯ ಸ್ಕ್ರಿಪ್ಟ್ ಬರಹಗಾರರನ್ನು ಹುಡುಕುತ್ತಿದ್ದಾರಂತೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿಯೇ ವಿಶೇಷ ಸಿನಿಮಾ ತಯಾರಿಸುವುದು ಅವರ ಬಯಕೆ. ಇಬ್ಬರೂ ಜತೆಗೆ ನಟಿಸಲು ಮಹೇಶ್ ಬಾಬು ಮತ್ತು ಜೂ. ಎನ್‌ಟಿಆರ್ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದೂ ವರದಿಯಾಗಿದೆ.

  ಮಹೇಶ್ ಬಾಬು ಹೊಸ ಚಿತ್ರಕ್ಕೆ ಬಾಲಿವುಡ್‌ನ ನವ ನಟಿ ನಾಯಕಿ?ಮಹೇಶ್ ಬಾಬು ಹೊಸ ಚಿತ್ರಕ್ಕೆ ಬಾಲಿವುಡ್‌ನ ನವ ನಟಿ ನಾಯಕಿ?

  ಕಥೆಗಾಗಿ ಹುಡುಕಾಟ

  ಕಥೆಗಾಗಿ ಹುಡುಕಾಟ

  ಈ ಚಿತ್ರದ ಹಿನ್ನೆಲೆ ಯಾವ ರೀತಿ ಇರುತ್ತದೆ, ಯಾವಾಗ ಶುರುವಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಮಹೇಶ್ ಬಾಬು ಮತ್ತು ಜೂ. ಎನ್‌ಟಿಆರ್ ಮುಖ್ಯಪಾತ್ರಗಳಲ್ಲಿ ತೆರೆ ಹಂಚಿಕೊಳ್ಳುವುದು ಮಾತ್ರ ಖಾತರಿಯಾಗಿದೆ. ಹೀಗಾಗಿ ಸಿನಿಮಾಕ್ಕೆ ಉಳಿದ ತಯಾರಿ ನಡೆಸಲಾಗಿದೆ. ಅದ್ಭುತ ಕಥೆಯೊಂದು ಬೇಕಿದ್ದು, ಅಂತಹ ಕಥೆ ನೀಡುವವರಿಗಾಗಿ ಅಲ್ಲು ಅರವಿಂದ್ ಹುಡುಕಾಟ ನಡೆಸಿದ್ದಾರಂತೆ.

  ಬಹುತಾರಾಗಣದ ಚಿತ್ರಗಳು

  ಬಹುತಾರಾಗಣದ ಚಿತ್ರಗಳು

  ಮಹೇಶ್ ಬಾಬು ಹಾಗೂ ಜೂ. ಎನ್‌ಟಿಆರ್ ಬಹು ತಾರಾಗಣದ ಚಿತ್ರದಲ್ಲಿ ನಟಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಆದರೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ಪ್ರಥಮ. ಜೂ. ಎನ್‌ಟಿಆರ್ ಪ್ರಸ್ತುತ ರಾಜಮೌಳಿ ನಿರ್ದೇಶನದ 'ಆರ್‌ಆರ್ಆರ್'ನಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಹೇಶ್ ಬಾಬು 'ಸೀತಮ್ಮ ವಾಕಿಟ್ಲೊ ಸಿರಿಮಲ್ಲೆಚೆಟ್ಟು' ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಜತೆ ನಟಿಸಿದ್ದರು. ಈ ಚಿತ್ರಕ್ಕೆ ಸೂಕ್ತ ಕಥೆ ದೊರೆತರೆ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

  Jr.NTRಗೆ ನಿರ್ದೇಶನ ಮಾಡಲು ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ ಪ್ರಶಾಂತ್ ನೀಲ್?Jr.NTRಗೆ ನಿರ್ದೇಶನ ಮಾಡಲು ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ ಪ್ರಶಾಂತ್ ನೀಲ್?

  English summary
  Producer Allu Aravind is looking for scriptwriters for upcoming film starring Mahesh Babu and Jr NTR in lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X