ಮಹೇಶ್ ಬಾಬು ಮತ್ತು ರಾಜಮೌಳಿಯ ಚಿತ್ರ ಸದ್ಯಕ್ಕಿಲ್ಲ!

'ಬಾಹುಬಲಿ' ಸಿನಿಮಾ ಮುಗಿದ ಬಳಿಕ ನನ್ನ ಮುಂದಿನ ಚಿತ್ರ ಮಹೇಶ್ ಬಾಬು ಜೊತೆ ಎಂದು ಟಿವಿ ಸಂದರ್ಶನವೊಂದರಲ್ಲಿ ನಿರ್ದೇಶಕ ರಾಜಮೌಳಿ ಹೇಳಿಕೊಂಡಿದ್ದರು. ಈ ಸುದ್ದಿ ಕೇಳಿ ಥ್ರಿಲ್ ಆದ ಮಹೇಶ್ ಬಾಬು ಅಭಿಮಾನಿಗಳು ಈ ಚಿತ್ರದ ಅಪ್‌ಡೇಟ್ ಕುರಿತು ಕಾದು ಕುಂತಿದ್ದಾರೆ.

ಪ್ರಸ್ತುತ ಆರ್ ಆರ್ ಆರ್ ಸಿನಿಮಾದಲ್ಲಿ ತೊಡಗಿಕೊಂಡಿರುವ ರಾಜಮೌಳಿ ಇನ್ನು ಅರ್ಧ ವರ್ಷ ಈ ಪ್ರಾಜೆಕ್ಟ್‌ನಲ್ಲೇ ಬ್ಯುಸಿ ಇರ್ತಾರೆ. ಈ ಹಿಂದೆ ನಿರೀಕ್ಷಿಸಿದಂತೆ 2021ರ ಜನವರಿಯಲ್ಲಿ ಪ್ರಿನ್ಸ್-ರಾಜಮೌಳಿ ಶೂಟಿಂಗ್ ಆರಂಭಿಸಬೇಕಿತ್ತು. ಆದ್ರೆ, ಕೊರೊನಾ ಹಾಗೂ RRR ಚಿತ್ರದ ಬಾಕಿ ಕೆಲಸವೂ ಇದಕ್ಕೆ ಅಡ್ಡಿಯಾಗಿದೆ.

ಆರ್ ಆರ್ ಆರ್ ಸಿನಿಮಾ ಮುಗಿದ ಮೇಲೆ ಪ್ರಿನ್ಸ್ ಚಿತ್ರ ಟೇಕ್ ಮಾಡುವುದು ಅನುಮಾನ ಎನ್ನಲಾಗಿದೆ. ಏಕಂದ್ರೆ, ಅದ್ಧೂರಿ ಬಜೆಟ್ ಸಿನಿಮಾದ ನಂತರ ಸಾಧಾರಣ ಬಜೆಟ್‌ನಲ್ಲಿ ಚಿತ್ರ ಮಾಡುವುದು ರಾಜಮೌಳಿಯ ಲೆಕ್ಕಾಚಾರ.

Mahesh babu and Rajamouli Movie Getting Delayed

ಇದಕ್ಕೂ ಮುಂಚೆ ಮಗಧೀರ ಸಿನಿಮಾ ಆದ್ಮೇಲೆ ಈಗ, ಮರ್ಯಾದೆ ರಾಮಣ್ಣ ಅಂತಹ ಚಿತ್ರಗಳನ್ನು ಮಾಡಿದ್ದರು. ಇದೇ ಸೂತ್ರ ಅನುಸರಿಸಲಿರುವ ಡೈರೆಕ್ಟರ್, ಆರ್ ಆರ್ ಆರ್ ಬಳಿಕ ಸಣ್ಣ ಬಜೆಟ್ ಚಿತ್ರವೊಂದಕ್ಕೆ ಪ್ಲಾನ್ ಮಾಡಬಹುದು ಎಂದು ಹೇಳಲಾಗುತ್ತಿದೆ.

Recommended Video

ಅವರು ಕೊಟ್ಟ ಬಿರುದನ್ನು ನಾನು ಯಾವತ್ತು ಮರೆಯೋಲ್ಲ ಎಂದ ಹರೀಶ್ ರಾಜ್ | Filmibeat Kannada

ಮತ್ತೊಂದೆಡೆ ದುಬೈನಲ್ಲಿ ಫ್ಯಾಮಿಲಿ ಜೊತೆ ರಜೆಯಲ್ಲಿರುವ ಮಹೇಶ್ ಬಾಬು, ಸದ್ಯದಲ್ಲೇ ಯುಎಸ್‌ಎನಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾ ಚಿತ್ರೀಕರಣ ಆರಂಭಿಸಲಿದ್ದಾರೆ. ಅದಾದ ಬಳಿಕ ಮೇಜರ್ ಎಂಬ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ.

More from Filmibeat

English summary
Telugu superstar Mahesh babu and SS Rajamouli movie getting delayed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X