For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು Vs ವಿಜಯ್: ಕೀಳು ಮಟ್ಟಕ್ಕಿಳಿದ ಫ್ಯಾನ್ಸ್ ವಾರ್!

  |

  ಸಿನಿಮಾ ಸ್ಟಾರ್‌ಗಳ ಫ್ಯಾನ್ಸ್‌ ನಡುವಿನ ವಾರ್ ಹೊಸದೇನು ಅಲ್ಲ. ಆದರೆ ಸೋಶಿಯಲ್ ಮೀಡಿಯಾ ಕಾರಣದಿಂದ ಅದು ಮತ್ತೊಂದು ಹಂತ ತಲುಪಿದೆ.. ಕಳೆದೆರಡು ದಿನಗಳಿಂದ ಟ್ವಿಟ್ಟರ್‌ನಲ್ಲಿ ತೆಲುಗು ನಟ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ತಮಿಳು ನಟ ದಳಪತಿ ವಿಜಯ್ ಫ್ಯಾನ್ಸ್ ನಡುವೆ ಟ್ರೋಲ್ ವಾರ್ ನಡೆಯುತ್ತಿದೆ.

  ವಿಜಯ್ ಹಾಗೂ ಮಹೇಶ್ ಬಾಬು ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಮಹೇಶ್ ಬಾಬು ಸಿನಿಮಾಗಳು ಅತ್ತ ತಮಿಳುನಾಡಿನಲ್ಲೂ ಸದ್ದು ಮಾಡಿದರೆ ವಿಜಯ್ ಸಿನಿಮಾಗಳು ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಸದ್ಯ ಎರಡು ದಿನಗಳಿಂದ #NationalTrollMaterialVijay ಹಾಗೂ #MBfansUnderVIJAYfansFoot ಎನ್ನುವ ಹ್ಯಾಷ್‌ಟ್ಯಾಗ್‌ ಸಿಕ್ಕಾಪಟ್ಟೆ ಟ್ರೆಂಡ್‌ ಆಗುತ್ತಿದೆ. ಫ್ಯಾನ್ಸ್ ನಿಮಿಷ ನಿಮಿಷಕ್ಕೂ ಟ್ವೀಟ್‌ಗಳ ಮಳೆ ಸುರಿಸ್ತಿದ್ದು, ಟ್ರೆಂಡಿಂಗ್‌ಗಾಗಿ ಟ್ವಿಟ್ಟರ್ ಫೈಟ್ ಮಾಡುತ್ತಿದ್ದಾರೆ.

  ಜೂ ಎನ್‌ಟಿಆರ್‌ಗೆ ತೆಲಂಗಾಣ ಸಿಎಂ ಟಾಂಗ್: 'ಬ್ರಹ್ಮಾಸ್ತ್ರ' ತಂಡಕ್ಕೆ ಭಾರಿ ನಷ್ಟ!ಜೂ ಎನ್‌ಟಿಆರ್‌ಗೆ ತೆಲಂಗಾಣ ಸಿಎಂ ಟಾಂಗ್: 'ಬ್ರಹ್ಮಾಸ್ತ್ರ' ತಂಡಕ್ಕೆ ಭಾರಿ ನಷ್ಟ!

  ಸ್ಯಾಂಡಲ್‌ವುಡ್‌ ನಟರ ಅಭಿಮಾನಿಗಳು ಕೂಡ ಈ ರೀತಿ ಟ್ರೋಲ್‌ಗಳನ್ನು ಮಾಡುತ್ತಿರುತ್ತಾರೆ. ಇತ್ತೀಚೆಗೆ ಸುದೀಪ್ ಹಾಗೂ ಯಶ್ ಅಭಿಮಾನಿಗಳ ನಡುವೆ ಇಂಥದ್ದೆ ಟ್ರೋಲ್ ನಡೆದಿತ್ತು. ಈ ಹಿಂದೆಯೂ ಸಹ ಮೆಗಾ ಹೀರೋ ಅಭಿಮಾನಿಗಳು ಮತ್ತು ಎನ್‌ಟಿಆರ್-ರಾಮ್ ಚರಣ್ ಅಭಿಮಾನಿಗಳ ನಡುವೆ ಇದೇ ರೀತಿ ಟ್ರೋಲ್‌ಗಳು ನಡೆದಿತ್ತು. ಆದರೆ ಇಲ್ಲೂ ಬೇರೆ ಬೇರೆ ಭಾಷೆಯ ಇಬ್ಬರು ನಟರ ಅಭಿಮಾನಿಗಳು ಪರಸ್ಪರ ಟ್ರೋಲ್ ಮಾಡುತ್ತಿದ್ದಾರೆ.

  ಕಲಾವಿದರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ. ಒಬ್ಬ ನಟ ಬೇರೆ ನಟರನ್ನು ಕೀಳಾಗಿ ಕಾಣುವುದಿಲ್ಲ. ಬೇರೆ ರಾಜ್ಯದ ಕಲಾವಿದರು ನಮ್ಮನ್ನು ಗೌರವಿಸುತ್ತಾರೆ ಎನ್ನುವುದು ಎಲ್ಲರಿಗೂ ಚೆನ್ನಾಗಿ ಗೊತ್ತು. ತಮಿಳು ಸಿನಿಮಾ ಪ್ರಚಾರಕ್ಕೆ ತೆಲುಗು ಹೀರೋಗಳು ಬರುತ್ತಾರೆ. ಅದೇ ರೀತಿ ತಮಿಳು ಹೀರೋಗಳು ತೆಲುಗು ಸಿನಿಮಾ ಹೀರೋಗಳಿಗೆ ಸಪೋರ್ಟ್ ಮಾಡ್ತಾರೆ. ಸ್ಟಾರ್‌ಗಳ ನಡುವೆ ಯಾವುದೇ ಅಹಂ ಇಲ್ಲದಿದ್ದರೂ ಅಭಿಮಾನಿಗಳಲ್ಲಿ ಇಂತಹ ಹುಚ್ಚಾಟ ಕಾಣುತ್ತಿದೆ.

  ಯಾವುದೇ ನಟರ ಅಭಿಮಾನಿಯಾಗುವುದರಲ್ಲಿ ತಪ್ಪೇನಿಲ್ಲ. ಆದರೆ ಬೇರೆ ನಟರನ್ನು ಟಾರ್ಗೆಟ್ ಮಾಡುವುದು ಚಿತ್ರರಂಗಕ್ಕೆ ಒಳ್ಳೆಯದಲ್ಲ. ಕೆಲವು ತೆಲುಗು ಹೀರೋಗಳ ಅಭಿಮಾನಿಗಳು ಸಿನಿಮಾ ನೋಡದೇ ಸಿನಿಮಾದ ಬಗ್ಗೆ ನೆಗೆಟಿವ್ ಪ್ರಚಾರ ಮಾಡಿ ಸಿನಿಮಾ ನಿಲ್ಲಿಸಿದ ಉದಾಹರಣೆಗಳಿವೆ. ಹೀರೋಗಳು ತಮ್ಮ ಅಭಿಮಾನಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳದಿದ್ದರೆ ಮುಂದೊಂದು ದಿನ ಸಂಕಷ್ಟಕ್ಕೆ ಸಿಲುಕುತ್ತಾರೆ.

  Mahesh Babu and Thalapathy Vijay fans Dirty Twitter war

  ಇತ್ತೀಚೆಗೆ ತೆಲುಗಿನ ಕೆಲ ಸೋಶಿಯಲ್ ಮೀಡಿಯಾ ಅಡ್ಮಿನ್‌ಗಳು ಭಾರತ ಕ್ರಿಕೆಟ್ ತಂಡ ಪಂದ್ಯ ಸೋತಾಗಲೆಲ್ಲಾ ತಮಿಳು ನಟ ವಿಜಯ್ ಫೋಟೋ ಬಳಸಿ ಮೀಮ್‌ಗಳನ್ನು ಪೋಸ್ಟ್ ಮಾಡುವ ಮೂಲಕ ವಿಜಯ್ ಅಭಿಮಾನಿಗಳನ್ನು ಕೆಣಕಿದ್ದಾರೆ. ಆದರೆ ಇಲ್ಲಿ ಅವರದ್ದೇನೂ ತಪ್ಪಿಲ್ಲ. ಇವರ ನಗಿಸುವ ಉದ್ದೇಶವನ್ನು ವಿಜಯ್ ಅಭಿಮಾನಿಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೆಲ ಮೀಮ್‌ ಪೇಜ್‌ಗಳು ಮಾಡಿದ ಕೆಲಸಕ್ಕೆ ನಮ್ಮ ನೆಚ್ಚಿನ ನಟನನ್ನು ತೆಲುಗು ಜನರೆಲ್ಲ ಟ್ರೋಲ್ ಮಾಡುತ್ತಿದ್ದಾರೆ ಎಂದು ನಟ ಮಹೇಶ್ ಬಾಬುನ ಟಾರ್ಗೆಟ್ ಮಾಡಲು ಆರಂಭಿಸಿದ್ದಾರೆ. ಈ ಹಿಂದೆ ಮಹೇಶ್ ಬಾಬು ಮಾಡಿದ್ದ 'ಒಕ್ಕಡು' ರೀಮೆಕ್‌ನಲ್ಲಿ ವಿಜಯ್ ನಟಿಸಿ ಗೆದ್ದಿದ್ದರು. ಆದರೆ ಒರಿಜಿನಲ್‌ಗಿಂತ ರೀಮೆಕ್ ಚೆನ್ನಾಗಿದೆ ಎಂದು ವಿಜಯ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಇತ್ತ ಮಹೇಶ್ ಬಾಬು ಅಭಿಮಾನಿಗಳು ವಿಜಯ್‌ನ ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಇದು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದೆ.

  English summary
  Mahesh Babu and Thalapathy Vijay fans Dirty Twitter war. Know More
  Tuesday, September 6, 2022, 22:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X