For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು 28ನೇ ಚಿತ್ರದ ಶೂಟಿಂಗ್ ಆರಂಭ; ವಿಶೇಷ ಟೀಸರ್ ಹಂಚಿಕೊಂಡ ಚಿತ್ರತಂಡ

  |

  ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಶನ್‌ನ ಎರಡನೇ ಚಿತ್ರದ ಚಿತ್ರೀಕರಣ ಕಿಕ್ ಸ್ಟಾರ್ಟ್ ಆಗಿದೆ. ಈ ಖುಷಿಯ ವಿಚಾರವನ್ನು ಹಂಚಿಕೊಳ್ಳಲು ಚಿತ್ರತಂಡ ಶೂಟಿಂಗ್ ಸ್ಪಾಟ್‌ನ ಕೆಲ ಗ್ಲಿಂಪ್ಸ್‌ಗಳನ್ನು ಸೇರಿಸಿ ಸ್ಪೆಷಲ್ ವಿಡಿಯೋ ಎಡಿಟ್ ಮಾಡಿ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಎರಡು ವರ್ಷಗಳ ಗ್ಯಾಪ್ ನಂತರ ನಿರ್ದೇಶನದಲ್ಲಿ ತೊಡಗಿಕೊಂಡಿರುವ ದೃಶ್ಯ ಹಾಗೂ ನಟ ಮಹೇಶ್ ಬಾಬು ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳದ ಲುಕ್‌ನಲ್ಲಿರುವ ದೃಶ್ಯಗಳಿವೆ.

  ಸದ್ಯ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆಯನ್ನು ಇಡದ ಕಾರಣ SSMB 28 ಎಂದು ಗುರುತಿಸಿಕೊಂಡಿದೆ. ಇನ್ನು ಮಹೇಶ್ ಬಾಬು ಅಭಿಮಾನಿಗಳು ಇತ್ತೀಚಿನ ಸಿನಿಮಾಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಒಂದೇ ರೀತಿಯ ಲುಕ್‌ನಲ್ಲಿ ಮತ್ತು ಸಾಮ್ಯತೆ ಇರುವ ಕೆಟಗರಿಯ ಸಿನಿಮಾಗಳಲ್ಲಿ ನೋಡಿರುವುದು ಸಾಕಾಗಿದೆ ಎನ್ನುತ್ತಿದ್ದು, ತ್ರಿವಿಕ್ರಮ್ ಅವರಿಂದ ವಿಂಟೇಜ್ ಮಹೇಶ್ ಬಾಬು ಚಿತ್ರವೊಂದನ್ನು ನಿರೀಕ್ಷಿಸುತ್ತಿದ್ದಾರೆ.

  ಇನ್ನು ಈ ವಿಡಿಯೋದಲ್ಲಿ ಮಹೇಶ್ ಬಾಬು ಅವರನ್ನು ಸ್ಪಷ್ಟವಾಗಿ ತೋರಿಸದಿದ್ದರೂ ಅವರ ಲುಕ್ ವಿಭಿನ್ನವಾಗಿದೆ ಎಂಬುದು ಖಾತರಿಯಾಗಿದೆ. ಇತ್ತೀಚೆಗಿನ ಚಿತ್ರಗಳ ಹಾಗೆ ಅದೇ ರಿಪೀಟೆಡ್ ಹೇರ್ ಸ್ಟೈಲ್ ಬಿಟ್ಟು ಕೆದರಿದ ಕೂದಲಿನ ಲುಕ್‌ನಲ್ಲಿ ಮಹೇಶ್ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇದೇ ಅವತಾರದಲ್ಲಿ ಮಹೇಶ್ ಅವರನ್ನು ತೆರೆ ಮೇಲೆ ನೋಡುವುದೇ ಆನಂದ ಎಂದಿದ್ದಾರೆ.

  ಇನ್ನು ಈ ಚಿತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಸೋಲುಗಳನ್ನು ಅನುಭವಿಸಿರುವ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ಚಿತ್ರಕ್ಕೆ ಸೆನ್ನೇಷನಲ್ ಮ್ಯೂಸಿಕ್ ಡೈರೆಕ್ಟರ್ ಎಸ್ ಥಮನ್ ಸಂಗೀತ ನಿರ್ದೇಶನವಿದೆ. ಇನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಕೊನೆಯ ಎರಡು ಚಿತ್ರಗಳಾದ ಅರವಿಂದ ಸಮೇತ ವೀರ ರಾಘವ ಹಾಗೂ ಅಲಾ ವೈಕುಂಠಪುರಮುಲೋಗೆ ಬಂಡವಾಳ ಹೂಡಿದ್ದ ಹಾರಿಕಾ & ಹಾಸಿನಿ ಕ್ರಿಯೇಷನ್ಸ್‌ನ ನಿರ್ಮಾಣವಿದೆ.

  ಪವನ್ ಕಲ್ಯಾಣ್‌ಗೆ ಅಜ್ಞಾತವಾಸಿ ಸಿನಿಮಾ ಮಾಡಿ ಮಣ್ಣು ಮುಕ್ಕಿದ ನಂತರ ಎನ್‌ಟಿಆರ್‌ಗೆ ಅರವಿಂದ ಸಮೇತ ರೀತಿಯ ಸೂಪರ್ ಹಿಟ್ ಚಿತ್ರ ಹಾಗೂ ಅಲ್ಲು ಅರ್ಜುನ್‌ಗೆ ನಾನ್ ಬಾಹುಬಲಿ ಇಂಡಸ್ಟ್ರಿ ಹಿಟ್ ಅಲಾ ವೈಕುಂಠ ಪುರಮುಲೋ ರೀತಿಯ ಚೆಂದದ ಚಿತ್ರಗಳನ್ನು ನಿರ್ದೇಶಿಸಿ ಸಕ್ಸಸ್ ಟ್ರ್ಯಾಕ್‌ನಲ್ಲಿರುವ ತ್ರಿವಿಕ್ರಮ್ ಶ್ರೀನಿವಾಸ್ ಬರೋಬ್ಬರಿ ಹನ್ನೆರಡು ವರ್ಷಗಳ ಬಳಿಕ ಮಹೇಶ್ ಬಾಬು ಜತೆ ಕೈ ಜೋಡಿಸಿದ್ದು ಈ ಜೋಡಿಯ ಸಿನಿಮಾ ನಾನ್ ಬಾಹುಬಲಿ ಇಂಡಸ್ಟ್ರಿ ಹಿಟ್ ಆಗುವಲ್ಲಿ ಅನುಮಾನವಿಲ್ಲ ಎನ್ನುತ್ತಿದ್ದಾರೆ ಸಿನಿ ಪ್ರೇಕ್ಷಕರು.

  ಇನ್ನು ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಈ ಹಿಂದೆ 2012 ಖಲೇಜಾ ಹಾಗೂ 2005ರಲ್ಲಿ ಅತಡು ಚಿತ್ರಗಳನ್ನು ಈ ಜೋಡಿ ನೀಡಿತ್ತು. ಈ ಪೈಕಿ ಅತಡು ಆಲ್ ಟೈಮ್ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು ಹಾಗೂ ಖಲೇಜಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಚಿತ್ರ ಮುಂದಿನ ವರ್ಷದ ಆಗಸ್ಟ್ 28ರಂದು ತೆರೆಗೆ ಬರಲಿದೆ.

  English summary
  Mahesh Babu and Trivikram Srinivas combo movie's filming begins teaser released. Take a look
  Monday, September 12, 2022, 21:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X